ದಾವಣಗೆರೆ (Davanagere): ಪತ್ನಿ ಕೊಲೆ ಮಾಡಿದ ಆರೋಪಿಗೆ ನ್ಯಾಯಾಲಯವು 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಘಟನೆ ವಿವರ : ಮೃತ ಚೌಡಮ್ಮ ತಾಯಿ ಮರಿದೇವಿ ಹರಪನಳ್ಳಿ ಪೊಲೀಸ್ ಠಾಣೆಗೆ ಹಾಜರಾಗಿ ಜಗಳೂರು ಗ್ರಾಮದ ಪತಿ ಮಾರುತಿ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ಮಾಡಿ ಮಗಳನ್ನು ಕೊಲೆ ಮಾಡಿರುವುದಾಗಿ ದೂರು ನೀಡಿದ್ದರು.
ಅಲ್ಲದೇ ಮಾರುತಿ ಪತ್ನಿಗೆ ಚೌಡಮ್ಮಗೆ ಗೊತ್ತಿಲ್ಲದೇ ನೇತ್ರಾವತಿ ಎಂಬುವವರನ್ನು 2016 ರಲ್ಲಿ ಮದುವೆಯಾಗಿದ್ದು, ಈ ವಿಚಾರ ಗೊತ್ತಾಗಿ ಚೌಡಮ್ಮನು ಹರಪನಹಳ್ಳಿ ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ದೂರು ನೀಡಿದು,್ದ ನ್ಯಾಯಾಲಯವು ಪ್ರತಿ ತಿಂಗಳು 4 ಸಾವಿರ ಹಣ ನೀಡುವಂತೆ ಆದೇಶ ಮಾಡಿತ್ತು.
ಆರೋಪಿ ಮಾರುತಿಯು ದಿನಾಂಕ: 12/10/2024 ರಂದು ಪೋನ್ಮಾಡಿದಾಗ ಚೌಡಮ್ಮಳನ್ನು ಬೆಳಿಗ್ಗೆ 6-00 ಗಂಟೆಗೆ ಬಸ್ಸಿಗೆ ಹತ್ತಿಸಿ ಊರಿಗೆ ಕಳುಹಿಸಿದ್ದೆ. ಈ ವೇಳೆ ಊರಿಗೆ ಬರದ ಹಿನ್ನಲೆಯಲ್ಲಿ ಜಗಳೂರು ತಾಲೂಕಿನ ಅಸಗೋಡು ಗ್ರಾಮಕ್ಕೆ ತೆರಳಿ ವಿಚಾರಿಸಿದಾಗ ಯಾರು ಸರಿಯಾಗಿ ಮಾಹಿತಿ ನೀಡಿಲ್ಲ.
ಎರಡು ದಿನದ ನಂತರ ಪತ್ರಿಕೆಯಲ್ಲಿ ಮಿಟ್ಲಕಟ್ಟೆ ಗ್ರಾಮದ ಚಾನಲನಲ್ಲಿ ಅಪಚಿರಿತ ಮಹಿಳೆ ಶವ ಪತ್ತೆಯಾಗಿರುವ ಕುರಿತು ವರದಿಯಾಗಿತ್ತು. ಈ ಸಂಬಂಧ ಶವ ಪರಿಶೀಲಿಸಿದಾಗ ಮೃತಳು ಮಗಳು ಚೌಡಮ್ಮ ಶವವಾಗಿತ್ತು. ಈ ಬಗ್ಗೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಯಿತು.
ಮಗಳಿಗೆ ಜೀವನಾಂಶ ಕೊಡಬೇಕಾಗುತ್ತದೆ ಅಳಿಯ ಮಾರುತಿ ಚೌಡಮ್ಮನನ್ನು ತನ್ನ ಬೈಕ್ನಲ್ಲಿ ಕರೆದುಕೊಂಡು ಕುರ್ಕಿ ಗ್ರಾಮದ ಹೊರವಲಯದ ಚಾನಲ್ ಕೊಲೆ ಮಾಡಿ ಚಾನಲ್ಗೆ ಶವವನ್ನು ಎಸೆದಿದ್ದು ಕ್ರಮ ಕೈಗೊಳ್ಳುವಂತೆ ದೂರು ದಾಖಲು ಮಾಡಲಾಯಿತು.
ಪ್ರಕರಣ ದಾಖಲಿಸಿಕೊಂಡು ತನಿಖಾಧಿಕಾರಿ ಮಂಜುನಾಥ್ .ಬಿ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿ ಸಲ್ಲಿಸಿದ್ದರು.
Read also : Davanagere | ಚರಂಡಿ ಹೂಳು ತೆಗೆಸುವಂತೆ ಪಾಲಿಕೆ ಆಯುಕ್ತರಿಗೆ ಎಸ್ಡಿಪಿಐ ಮನವಿ
01 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ರವರು ಆರೋಪಿ ಮಾರುತಿ ಮೇಲೆ ಆರೋಪ ಸಾಬೀತಾಗಿದ್ದರಿಂದ 19-10-2024 ರಂದು ಆರೋಪಿತನಿಗೆ 03 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 5,000/-ರೂ ದಂಡ ವಿಧಿಸಿ ತೀರ್ಪು ನೀಡಿದೆ. ಸರ್ಕಾರಿ ವಕೀಲ ಕೆ.ಎಸ್ ಸತೀಶ್ ನ್ಯಾಯ ಮಂಡನೆ ಮಾಡಿದ್ದಾರೆ.
ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ ತನಿಖಾಧಿಕಾರಿ ಮಂಜುನಾಥ್ ಬಿ, ಸಿಬ್ಬಂದಿಗಳನ್ನು ಹಾಗೂ ನ್ಯಾಯಾ ಮಂಡನೆ ಮಾಡಿದ ಸರ್ಕಾರಿ ವಕೀಲ ಕೆ.ಎಸ್ ಸತೀಶ್ ರವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ಎಎಸ್ಪಿ ವಿಜಯಕುಮಾರ ಎಂ. ಸಂತೋಷ & ಮಂಜುನಾಥ. ಜಿ ರವರು ಶ್ಲಾಘೀಸಿದ್ದಾರೆ.