ಬೆಂಗಳೂರು :
ಒಬ್ಬ ಮನುಷ್ಯನಲ್ಲಿ 30 ng/ml ಗಿಂತ ಕಡಿಮೆ ಇದ್ದರೆ ವಿಟಮಿನ್ ಡಿ ಮಟ್ಟವು ಸಾಕಷ್ಟಿಲ್ಲ ಅಥವಾ ಇದರ ಕೊರತೆ ಇದೆ ಎಂದು ಪರಿಗಣಿಸಲಾಗುತ್ತದೆ. ವಿಟಮಿನ್ ಡಿ ಕೊರತೆಯು ಜನರಲ್ಲಿ ಮೂಳೆಯ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ ಮತ್ತು ತೀವ್ರವಾದ ಮೂಳೆ ನೋವು ಹಾಗೂ ಮೂಳೆ ಉರಿತಕ್ಕೂ ಕಾರಣವಾಗುತ್ತದೆ. ಭಾರತದಲ್ಲಿನ ಮಹಿಳೆಯರು ಸಾಮಾನ್ಯವಾಗಿ ಕಳಪೆ ಮೂಳೆ ಆರೋಗ್ಯದ ಲಕ್ಷಣಗಳಿದ್ದರೂ ಅವುಗಳನ್ನು ಕಡೆಗಣಿಸುತ್ತಾರೆ ಎಂದು ಅಧ್ಯಯನಗಳು ಹೇಳಿವೆ.
ಶೇ.80 ಕ್ಕಿಂತ ಹೆಚ್ಚು ಮಹಿಳೆಯರಲ್ಲಿ ವಿಟಮಿನ್ ಡಿ ಮಟ್ಟ ಕಡಿಮೆ ಇದೆ
2023 ರಲ್ಲಿ ಹಾರ್ಲಿಕ್ಸ್ ವುಮೆನ್ಸ್ ಪ್ಲಸ್ ನೊಂದಿಗೆ ಅಪೊಲೊ ಕ್ಲಿನಿಕ್ಸ್ ಇನ್ ಸಹಯೋಗದಲ್ಲಿ ನಡೆಸಲಾಗಿರುವ ವಿಟಮಿನ್ ಡಿ ಪರೀಕ್ಷಾ ಶಿಬಿರಗಳ ದಾಖಲೆಗಳ ಪ್ರಕಾರ ಭಾರತದಲ್ಲಿನ ನಗರ ಪ್ರದೇಶದಲ್ಲಿರುವ ಸರಿಸುಮಾರು ಶೇ.80 ಕ್ಕಿಂತ ಹೆಚ್ಚು ಮಹಿಳೆಯರಲ್ಲಿ ವಿಟಮಿನ್ ಡಿ ಮಟ್ಟ ಕಡಿಮೆ ಇದೆ ಎಂಬ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದೆ.
ಇನ್ನು 2023 ರಲ್ಲಿ ಮಾಮ್ಸ್ ಪ್ರೆಸ್ಸೋ ಅಧ್ಯಯನದ ಪ್ರಕಾರ ದೇಹದ ನೋವಿನಿಂದ ಬಳಲುತ್ತಿರುವ ಶೇ.87 ರಷ್ಟು ಮಹಿಳೆಯರು ತಮಗಾಗುತ್ತಿರುವ ದೇಹದ ನೋವು ಮತ್ತು ಕಳಪೆ ಮೂಳೆ ಆರೋಗ್ಯದ ನಡುವಿನ ಸಂಬಂಧವನ್ನು ತಿಳಿದಿರುವುದಿಲ್ಲ ಹಾಗೂ ತಾತ್ಕಾಲಿಕ ನೋವು ಪರಿಹಾರಕ್ಕೆ ಮೊರೆ ಹೋಗುತ್ತಿದ್ದಾರೆ.
ಮೂಳೆಗಳ ಸಮತೋಲನೆ ಕಾಪಾಡಿಕೊಳ್ಳಲು ಈ ವಿಟಮಿನ್ ಡಿ ಅತ್ಯಗತ್ಯ
ಬೆಂಗಳೂರಿನ ಅಪೊಲೊ ಕ್ಲಿನಿಕ್ ನ ಆರ್ಥೋಪೆಡಿಕ್ ಸರ್ಜನ್ ಡಾ. ರಾಜೀವ್ ಎಸ್.ಘಾಟ್ ಅವರು ಮಾತನಾಡಿ, ಸೂರ್ಯನ ಬೆಳಕೇ ವಿಟಮಿನ್ ಡಿ ಗೆ ಪ್ರಾಕೃತಿಕ ಮೂಲ. ಆದರೆ, ಬಹುತೇಕ ಮಹಿಳೆಯರು ತಮ್ಮ ವಿಟಮಿನ್ ಡಿ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸೂರ್ಯ ಬೆಳಕಿಗೆ ಹೋಗುವುದೇ ಇಲ್ಲ. ಅಲ್ಲದೇ ಅವರು ಸೇವಿಸುವ ಆಹಾರಗಳಲ್ಲಿ ವಿಟಮಿನ್ ಡಿ ಕಡಿಮೆ ಇರುತ್ತದೆ ಮತ್ತು ಸಸ್ಯಾಹಾರಿ ಆಹಾರದಲ್ಲಿ ಈ ಪ್ರಮಾಣ ಬಹುತೇಕ ಶೂನ್ಯವಾಗಿರುತ್ತದೆ. ಮೂಳೆಗಳ ಸಮತೋಲನೆಯನ್ನು ಕಾಪಾಡಿಕೊಳ್ಳಲು ಈ ವಿಟಮಿನ್ ಡಿ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಸೂರ್ಯನ ಬೆಳಕಿಗೆ ಮೈವೊಡ್ಡಿದ ನಂತರ ಚರ್ಮದಲ್ಲಿ ವಿಟಮಿನ್ ಡಿ ಉತ್ಪತ್ಪಿಯಾಗುತ್ತದೆ. ಜಡ ಜೀವನಶೈಲಿ, ಕಲುಷಿತ ಗಾಳಿ ಮತ್ತು ಮನೆ ಅಥವಾ ಕಚೇರಿ ಒಳಗಿನ ಕೆಲಸದ ಸ್ಥಳಗಳು ಮನುಷ್ಯನಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗಲು ಕಾರಣವಾಗುತ್ತವೆ. ವಿಟಮಿನ್ ಡಿ ಯ ಆಹಾರದ ಮೂಲಗಳು ಬಹಳ ಸೀಮಿತವಾಗಿವೆ.
ಕೊಬ್ಬಿನ ಮೀನು ಮತ್ತು ಮೀನಿನ ಯಕೃತ್ತಿನ ಎಣ್ಣೆ ಒಂದು ಸಣ್ಣ ಪ್ರಮಾಣದ ಮೊಟ್ಟೆಯ ಹಳದಿ ಲೋಳೆ ಮತ್ತು ಕೆಲವು ಅಣಬೆ ಪ್ರಬೇಧಗಳಲ್ಲಿ ವಿಟಮಿನ್ ಡಿ ಯ ಉತ್ತಮ ಮೂಲಗಳಾಗಿವೆ. ಈ ಹಿನ್ನೆಲೆಯಲ್ಲಿ ವಿಟಮಿನ್ ಡಿ ಪ್ರಮಾಣವನ್ನು ಕಾಪಾಡಿಕೊಳ್ಳಲು ಆಹಾರದಲ್ಲಿ ಪೌಷ್ಟಿಕಾಂಶದ ಸಪ್ಲಿಮೆಂಟ್ ಗಳನ್ನು ಸೇರಿಸುವುದನ್ನು ಶಿಫಾರಸು ಮಾಡಲಾಗಿದೆ.
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯ ಶೇ.100 ರಷ್ಟು ಶಿಫಾರಸು ಮಾಡಲಾಗುವ ಆಹಾರ ಪದ್ಧತಿಯೊಂದಿಗೆ ಪೌಷ್ಟಿಕಾಂಶದ ಸಪ್ಲಿಮೆಂಟ್ ಗಳು ಸುಲಭವಾಗಿ ಲಭ್ಯವಿವೆ. ಇವುಗಳು ಸುಲಭ ದರದಲ್ಲಿ ಲಭ್ಯವಿದ್ದು, ಮೂಳೆಯ ಆರೋಗ್ಯವನ್ನು ಸುಧಾರಣೆ ಆಗಲು ಸಹಕಾರಿಯಾಗಿವೆ.