ರಾಯಚೂರ : ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ವಾಲ್ಮೀಕಿ ಸಮಾಜ ನಡೆಸುತ್ತಿರುವ ಹೋರಾಟ 34 ನೇ ದಿನಕ್ಕೆ ಕಾಲಿರಿಸಿದೆ.
ಮಾ 11 ರಂದು 15 ಪ್ರಮುಖ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಯಚೂರು ನಗರದ ಡಿಸಿ ಕಚೇರಿಗೆ ತೆರಳಿ ಕರ್ನಾಟಕದ ವಾಲ್ಮೀಕಿ ಜನಾಂಗದ ಸಂಘ ಸಂಸ್ಥೆಯವರು ವೆಂಕಟೇಶ್ ನಾಯಕ ಅಸ್ಕಿ ಹಾಳ ಅವರ ಮುಂದಾಳತ್ವದಲ್ಲಿ ಮನವಿ ಸಲ್ಲಿಸಲಿದ್ದಾರೆ.
ಕರ್ನಾಟಕದಲ್ಲಿರುವ ಎಲ್ಲಾ ವಾಲ್ಮೀಕಿ ಜನಾಂಗದ ಕಿರಿಯರು ಬುದ್ಧಿಜೀವಿಗಳು ಹೋರಾಟಗಾರರು ಕಾನೂನು ಸಲಹೆಗಾರರು ನಕಲಿ ಪ್ರಮಾಣ ಪತ್ರಗಳ ವಿರುದ್ಧ ಹೋರಾಟ ಮಾಡುತ್ತಿರುವವರು ಸಮಾಜದ ಬಂಧುಗಳು ಸಮಾಜದ ಹಿತೈಷಿಗಳು ಮಾ 11 ಸೋಮವಾರ ಬೆಳಗ್ಗೆ 10 ಗಂಟೆಗೆ ರಾಯಚೂರು ಡಿಸಿ ಕಚೇರಿಯ ಮುಂಭಾಗ ಬರುವಂತೆ ವೆಂಕಟೇಶ್ ನಾಯಕ ಅಸ್ಕಿಹಾಳ ನೈಜ ನಾಯಕ ಬೇಡರ ಪಡೆ ರಾಜ್ಯ ಅಧ್ಯಕ್ಷ ಕರಿಯಪ್ಪ ನಾಯಕ ದಾವಣಗೆರೆ ಹಾಗೂ ರಾಜ್ಯದ ಎಲ್ಲಾ ಪದಾಧಿಕಾರಿಗಳು ಎಲ್ಲಾ ಜಿಲ್ಲೆಯ ಪದಾಧಿಕಾರಿಗಳು ವಿನಂತಿಸಿದ್ದಾರೆ.
34 ದಿನಕ್ಕೆ ಕಾಲಿರಿಸಿದ ಸತ್ಯಾಗ್ರಹ
