ದಾವಣಗೆರೆ (Davanagere): ಧಾರವಾಡದ ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿಯ ವತಿಯಿಂದ ಜೆ.ಎಸ್.ಎಸ್.ಹಾಲಬಾವಿ ಸ್ಕೂಲ್ ಆಫ್ ಆರ್ಟ್ ಕಾಲೇಜಿನಲ್ಲಿ 69 ನೇ ರಾಜ್ಯೋತ್ಸವದ ನಿಮಿತ್ತ ಆಯೋಜಿಸಿದ್ದ ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ ಪ್ರಕಾಶನದ ಗ್ರಂಥ ಬಿಡುಗಡೆ, ವಿಚಾರ ಸಂಕಿರಣ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಿತು.
ಧಾರವಾಡದ ರಾಷ್ಠ್ರೀಯ ದೃಶ್ಯಕಲಾ ಅಕಾಡೆಮಿಯಿಂದ ರಾಜ್ಯೋತ್ಸವ ಪ್ರಶಸ್ತಿ-2024 ಪ್ರಶಸ್ತಿಗೆ ದಾವಣಗೆರೆಯ ಹಿರಿಯ ಚಿತ್ರ ಕಲಾವಿದ ಎ.ಮಹಾಲಿಂಗಪ್ಪ ಭಾಜನರಾಗಿದ್ದಾರೆ.
ರಾಜ್ಯದ ಹಿರಿಯ ಚಿತ್ರಕಲಾವಿದರಾದ ಬಾಗಲಕೋಟೆ ಜಿಲ್ಲೆಯ ರಬಕವಿಯ ಮಹಾದೇವ ಕವಿಶೆಟ್ಟಿ, ದಾವಣಗೆರೆಯ ಎ.ಮಹಲಿಂಗಪ್ಪ, ಧಾರವಾಡದ ಎಂ.ಎಂ .ಜಗತಾಪ, ಉಡುಪಿಯ ದೃಶ್ಯಕಲಾ ಸಾಹಿತಿ ಡಾ.ಉಪಾಧ್ಯಾಯ ಮೂಡುಬೆಳ್ಳೆ ಹಾಗೂ ಕಲಬುರ್ಗಿಯ ಡಾ.ರೆಹಮಾನ್ ಪಟೇಲ್ ಅವರುಗಳಿಗೆ “ರಾಜ್ಯೋತ್ಸವ ಪ್ರಶಸ್ತಿ-2024” ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.
ಕಾರ್ಯಕ್ರಮವನ್ನು ಧಾರವಾಡದ ಜೆ.ಎಸ್.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಎಸ್.ಜಿ.ಬಿರಾದಾರ ಉದ್ಘಾಟಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ವಿ.ಎಲ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರ ಕಾಂತ ಬೆಲ್ಲದರವರು ಗ್ರಂಥ ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ ಕಲಾವಿದ ಎ.ಮಹಾಲಿಂಗಪ್ಪ ವಿದೇಶಗಳ ಪ್ರಮುಖ ಕಲಾ ಸಂಗ್ರಹಾಲಯ ಮತ್ತು ಕಲಾ ಗ್ಯಾಲರಿಗಳ ಕುರಿತು ಸ್ಲೈಡ್ ಪ್ರದರ್ಶನ ಮಾಡಿ ಗಮನ ಸೆಳೆದರು.
ಪ್ರೊ ಎಸ್ ಸಿ.ಪಾಟೀಲರ ಗ್ರಂಥಗಳ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಡಾ.ಬಿ.ಎಂ.ಪಾಟೀಲ್, ಪ್ರೊ.ದತ್ತಾತ್ರೇಯ ಭಟ್, ಪ್ರಿ.ಶಂಕರ ಗುರುವ, ಯುವರಾಜ ಆರ್.ಎಸ್. ಭಾಗವಹಿಸಿ ಕೃತಿಗಳನ್ನು ಕುರಿತು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸೃತರಾದ ಎಂ.ಆರ್.ಬಾಳೀಕಾಯಿ, ಕ.ವಿ.ವಿ. ಕುಲಸಚಿವ ಡಾ.ಎ.ಚನ್ನಪ್ಪ, ಡಾ.ಬಸವರಾಜ ಗವಿಮಠ, ಡಾ.ಬಿ.ಎಂ.ಪಾಟೀಲ ಹಾಗೂ ಪ್ರೊ.ಎಸ್.ಸಿ.ಪಾಟೀಲ, ಡಾ.ಶಶಿಕಲಾ ಜಿ.ವಿ., ಬಿ.ಎಸ್.ಬಿ.ಗೌಡರ್, ವೆಂಕಟೇಶ ಕುಮಾರ್ ಕೆ ಎಚ್ ಹಾಗೂ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಉಪಸ್ತಿತರಿದ್ದರು.
Read also : Davanagere | ನಿರಂತರ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ