ದಾವಣಗೆರೆ: ಶಂಕಿತ ಡೆಂಗ್ಯೂ ಜ್ವರಕ್ಕೆ 2 ವರ್ಷದ 11 ತಿಂಗಳ ಮಗುವೊಂದು ಮೃತಪಟ್ಟ ಘಟನೆ ಚನ್ನಗಿರಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ನಡೆದಿದೆ.
ನಿರ್ವಾಣ ಕುಮಾರ್ (2 ವರ್ಷ 11 ತಿಂಗಳು) ಮೃತ ಮಗು. ರಾಜಪ್ಪ ಮತ್ತು ದಿವ್ಯ ದಂಪತಿ ಒಬ್ಬನೇ ಮಗ. ಮಗನ ಸಾವಿನಿಂದ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.
5 ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲು ತ್ತಿದ್ದ ಮಗುವನ್ನು ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆರೋಗ್ಯದಲ್ಲಿಸ್ವಲ್ಪವೂ ಚೇತರಿಕೆ ಕಾಣದ ಹಿನ್ನೆಲೆ ಭಾನುವಾರ ಮೃತಪಟ್ಟಿರುವು ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
English Summary: A 2-year-11-month-old child died of suspected dengue fever in Chikkuda village of Channagiri taluk.