Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಸಾಸ್ವೆಹಳ್ಳಿ ಗ್ರಾಮದಲ್ಲಿ ಬಲೆಗೆ ಬಿದ್ದ 32 ಕೆಜಿ ತೂಕದ ಹದ್ದಿನ ಮೀನು!
ತಾಜಾ ಸುದ್ದಿ

ಸಾಸ್ವೆಹಳ್ಳಿ ಗ್ರಾಮದಲ್ಲಿ ಬಲೆಗೆ ಬಿದ್ದ 32 ಕೆಜಿ ತೂಕದ ಹದ್ದಿನ ಮೀನು!

Dinamaana Kannada News
Last updated: January 2, 2026 3:20 pm
Dinamaana Kannada News
Share
eagle fish was caught in a trap
SHARE
ದಾವಣಗೆರೆ: ಮೀನುಗಾರರು ಬೀಸಿದ ಬಲೆಗೆ ದೊಡ್ಡ ಗಾತ್ರದ (ಸುಮಾರು 32 ಕೆಜಿ) ಹದ್ದಿನ ಜಾತಿಗೆ ಸೇರಿದ ಮೀನು ಬಿದ್ದಿದ್ದು, ಸಾಸ್ವೆಹಳ್ಳಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.
ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ತುಂಗಭದ್ರಾ ನದಿಯಲ್ಲಿ ಭದ್ರಾವತಿಯ ಮೀನುಗಾರರಾದ ಶುಕ್ರವಾರ ಮಣಿ, ಬಾಬು, ಅಯ್ಯಪ್ಪ ಎಂಬ ಮೂವರು ಮೀನು ಹಿಡಿಯಲು ಬಂದಿದ್ದಾರೆ.
ಸಾಸ್ವೆಹಳ್ಳಿ ಗ್ರಾಮದ ಪಕ್ಕದಲ್ಲೇ ಹರಿಯುತ್ತಿರುವ ತುಂಗಭದ್ರಾ ನದಿಯ ಗೋರಿಕಲ್ಲು ಸಮೀಪ 12 ರಿಂದ 15 ಆಳ ಹರಿಯುವ ಸ್ಥಳದಲ್ಲಿ ದೋಣಿಯ ಮೂಲಕ ತೆರಳಿ ಬೀಸುವ ಬಲೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಕಲ್ಲಿನ ಪೊಟರೆಗಳಲ್ಲಿ ವಾಸಿಸುವ ಹದ್ದಿನ ಜಾತಿಗೆ ಸೇರಿದ ಮೀನು ಬಿದ್ದಿದೆ.
ಇದು 4 ರಿಂದ 5 ಅಡಿ ಉದ್ದವಿರುವ  ಬರೋಬರಿ 32 ಕೆ.ಜಿ. ತೂಕದ ಹದ್ದಿನ ಜಾತಿಗೆ ಸೇರಿದ ಮೀನು ಬಿದ್ದಿದೆ. ದೊಡ್ಡ ಗಾತ್ರದ ಮೀನು ಬಿದ್ದಿದ್ದರಿಂದ ಮೀನು  ಬಲೆಯಿಂದ ಮೇಲೆತ್ತಲು ಮಣಿ, ಬಾಬು ಮತ್ತು ಅಯ್ಯಪ್ಪ ಹರಸಾಹಸ ಮಾಡಿದ್ದಾರೆ. ಅರ್ಧ ಗಂಟೆಗಳ ಕಾಲ ಬಲೆಗೆ ಬಿದ್ದ ಮೀನು ನದಿಯ ದಡಕ್ಕೆ ತರಲು ಎಣಗಾಡಿ ಕೊನೆಗೂ ನದಿಯಿಂದ ತಡಕ್ಕೆ ತಂದಿದ್ದಾರೆ.
ಸುದ್ದಿ ತಿಳಿದು ಜಮಾಯಿಸಿದ ಜನರು:
Read also : ರೈಲಿನಲ್ಲಿ ಕಳವು ಪ್ರಕರಣ:3.43 ಲಕ್ಷ ಮೌಲ್ಯದ ಚಿನ್ನಾಭರಣ,ಲ್ಯಾಪ್‌ಟಾಪ್ ವಶ
ಮೀನುಗಾರರ ಬಲೆಗೆ 32 ಕೆ.ಜಿ ತೂಕದ ಭಾರೀ ಗಾತ್ರದ ಮೀನು ಬಿದ್ದಿದೆ ಎಂಬ ಸುದ್ದಿ ತಿಳಿದ ಗ್ರಾಮಸ್ಥರು ಮೀನು ಮಾರುವ ಅಂಗಡಿ ಬಳಿ ಜಮಾಯಿಸಿ ವೀಕ್ಷಣೆ ಮಾಡಿ ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ.
11200 ರೂ.ಗೆ ಮಾರಾಟ:
ಭದ್ರಾವತಿಯಿಂದ ಮೀನು ಹಿಡಿಯಲು ಬಂದಿದ್ದ ಮಣಿ, ಬಾಬು ಹಾಗೂ ಅಯ್ಯಪ್ಪ 32 ಕೆಜಿ ಭಾರೀ ಗಾತ್ರದ ಮೀನನ್ನು ಸ್ಥಳೀಯ ಮೀನು ವ್ಯಾಪಾರಿ ಸಾಧಿಕ್ ಎಂಬುವರಿಗೆ 350 ರೂ. ಕೆಜಿಗೆ ಮಾರಾಟ ಮಾಡಿದ್ದಾರೆ. ಅಂದರೆ  11200 ರೂ.ಗೆ ಮಾರಾಟ ಮಾಡಿದ್ದಾರೆ.
ವ್ಯಾಪಾರಿಗೆ 1600 ರೂ. ಲಾಭ:
ಮೀನುಗಾರರ ಬಲೆಗೆ ಹದ್ದಿನ ಜಾತಿಯ ಮೀನು ಬೀಳುವುದು ಅಪರೂಪ. ಆದರೆ ಶುಕ್ರವಾರ ಮೀನುಗಾರರ ಬಲೆಗೆ ಈ ಮೀನು ಬಿದ್ದು, ಮೀನುಗಾರರ ಜೇಬು ತುಂಬಿಸಿದೆ. ಮೀನುಗಾರರ ಬಳಿ 11200 ರೂ.ಗೆ ಖರೀದಿಸಿದ್ದ ಮೀನು ವ್ಯಾಪಾರಿ ಸಾಧಿಕ್ 400 ರೂ.ಕೆಜಿಯಂತೆ  32 ಕೆಜಿಗೆ 12800 ರೂ.ಗೆ   ಮಾರಾಟ ಮಾಡಿ 1600 ರೂ. ಲಾಭ ಮಾಡಿಕೊಂಡಿದ್ದಾರೆ.
ಖರೀದಿಗೆ ಮುಗಿಬಿದ್ದ ಜನರು:
ಹೆಚ್ಚು ಮುಳ್ಳು ಇಲ್ಲದ, ಅಪರೂಪಕ್ಕೊಮೆ ಸಿಗುವ ಹದ್ದಿನ ಮೀನು ಸವಿಯಲು ತೂದಿಗಾಲಲ್ಲಿ ನಿಲ್ಲುವ ಮೀನು ಪ್ರಿಯರಿಗೆ ಹದ್ದಿನ ಮೀನು ಸಿಕ್ಕಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಮೀನು ಮಾರಾಟ ಮಾಡುವ ಸಾಧಿಕ್ ಅವರ ಅಂಗಡಿಗೆ ಜನರು ಲಗ್ಗೆ ಇಟ್ಟಿದ್ದಾರೆ. ನಾ ಮುಂದೆ, ತಾ ಮುಂದೆ ಎಂದು ಸ್ಪರ್ಧೆಗೆ ಬಿದ್ದವರಂತೆ ಕ್ಷಣಾರ್ಧದಲ್ಲಿ 32 ಕೆಜಿ ಮೀನು ಮಾರಾಟ ಆಗಿದೆ.
ಒಂದೊಂದು ಕೆಜಿ ಮೀನು ಸಿಕ್ಕವರು ಖುಷಿಯಿಂದ ಮನೆಗೆ ತೆರಳಿದರೆ, ಮೀನು ಸಿಗದವರು ನಿರಾಸೆಯಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ಗೊಣಗಾಡುತ್ತಾ, ಮನೆ ಕಡೆಗೆ ತೆರಳಿದರು.
job news dinamaana ads
TAGGED:Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere crime news ರೈಲಿನಲ್ಲಿ ಕಳವು ಪ್ರಕರಣ:3.43 ಲಕ್ಷ ಮೌಲ್ಯದ ಚಿನ್ನಾಭರಣ,ಲ್ಯಾಪ್‌ಟಾಪ್ ವಶ
Next Article Davanagere ಬಾಲ್ಯ ವಿವಾಹ ಮತ್ತು ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಕ್ರಮವಹಿಸಿ :ಅಪರ್ಣಾ ಎಂ ಕೊಳ್ಳಾ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ | ವಿಶೇಷ ಕೋಟಾದಡಿ ಅಗ್ನಿವೀರ್ ನೇಮಕಾತಿ

ದಾವಣಗೆರೆ : ಬಾಂಬೆ ಇಂಜಿನಿಯರ್ ಗ್ರೂಪ್ ಮತ್ತು ಸೆಂಟರ್ ಕರ್ಕಿ, ಪುಣೆಯಲ್ಲಿ ವಿಶೇಷ ಕೋಟಾದಡಿ ಮಾಜಿ ಸೈನಿಕರ ಮಕ್ಕಳು ಮತ್ತು…

By Dinamaana Kannada News

ಗೃಹ ಬಳಕೆ ಸಿಲೆಂಡರ್, ಡಿಸೇಲ್ ಮತ್ತು ಅಗತ್ಯ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ : ಪ್ರತಿಭಟನೆ

ದಾವಣಗೆರೆ (Davanagere): ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರ ಗೃಹ ಬಳಕೆ ಸಿಲೆಂಡರ್, ಡಿಸೇಲ್ ಮತ್ತು ಅಗತ್ಯ ದಿನಬಳಕೆಯ…

By Dinamaana Kannada News

ಶಿಕ್ಷಣ ಸಂವಿಧಾನ ಆಶಯ : ಗೃಹ ಸಚಿವ ಡಾ.ಜಿ.ಪರಮೇಶ್ವರ

ದಾವಣಗೆರೆ, ಜು.28 : ದೇಶದಲ್ಲಿ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬುದು ಸಂವಿಧಾನ ಬದ್ಧತೆಯ ಆಶಯವಾಗಿದ್ದು, ಅದನ್ನು ಕಾರ್ಯ ರೂಪಕ್ಕೆ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಯುವಜನರಲ್ಲಿ ಆರೋಗ್ಯ ಅರಿವು, ಸಾಮಾಜಿಕ ಹೊಣೆಗಾರಿಕೆ ಅವಶ್ಯ : ಡಾ.ಬಿ.ಡಿ.ಮುರುಳಿಧರ

By Dinamaana Kannada News
Davanagere
ತಾಜಾ ಸುದ್ದಿ

ಹಜರತ್ ಮೌಲಾನಾ ಸಗೀರ್ ಅಹಮದ್ ಖಾನ್ ರಶಾದಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳಿಗೆೆ ತರಬೇತಿ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಫಾಸ್ಟ್ ಫುಡ್ ತಯಾರಿಕೆ ಉಚಿತ ತರಬೇತಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?