ದಾವಣಗೆರೆ (Davanagere): ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿ ಗ್ರಾಮದ ಟಿ.ಎನ್.ರಂಗಸ್ವಾಮಿ, ಮೈಕಲ್ ರಂಗ ಬಂಧಿತ ಆರೋಪಿಗಳು.
ಜಮೀನಿನಲ್ಲಿ ಪಾಲು ಕೊಡಲಿಲ್ಲ ಎಂಬ ವಿಚಾರವಾಗಿ ಮೊದಲ ಪತ್ನಿ ಆಶಾ ಮತ್ತು ಮಕ್ಕಳು, ಆಶಾಳ ಸಹೋದರ ರಂಗಸ್ವಾಮಿ, ಪುತ್ರ ಲಿಖಿತ್, ತಂದೆ ವಿ.ಟಿ.ನಾಗರಾಜಪ್ಪ ಇವರು ಸೇರಿ ಹನುಮಂತಪ್ಪನನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು.
ಕಳೆದ 2024 ರ ನವೆಂಬರ್ ೨೮ರಂದು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಅಜ್ಜಿಹಳ್ಳಿ ರಸ್ತೆಯಲ್ಲಿ ಬೈಕ್‌ನಲ್ಲಿ ಹನುಮಂತಪನನ್ನು ಹಿಂಬಾಲಿಸಿಕೊಂಡು ಹೋಗಿ ಮಚ್ಚಿನಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ಸಂತೋಷ್ ವಿಜಯಕುಮಾರ್, ಮಂಜುನಾಥ್ ಮಾರ್ಗದರ್ಶನದಲ್ಲಿ ಚನ್ನಗಿರಿ ಡಿಎಸ್ಪಿ ಸ್ಯಾಮ್ ವರ್ಗೀಸ್ ನೇತೃತ್ವದಲ್ಲಿ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳ ತಂಡ ತಲೆಮರೆಸಿಕೊಂಡಿದ್ದ ರಂಗಸ್ವಾಮಿ, ಮೈಕಲ್ ರಂಗ ಅವರನ್ನು ಬಂಧಿಸಿದೆ. ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಅಭಿನಂದನೆ ಸಲ್ಲಿಸಿದ್ದಾರೆ.
Read also : ವಚನಗಳ ಮೂಲಕ ಜಗತ್ತಿಗೆ ಅಪಾರವಾದ ಕೊಡುಗೆ : ಚಮನ್ ಸಾಬ್