ದಾವಣಗೆರೆ : ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ನಗರದ ಗುರುಭವನದಲ್ಲಿ ಅಂತರ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯನ್ನು ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿಯವರು ಉದ್ಘಾಟನೆ ಮಾಡಿದರು
ಈ ವೇಳೆ ಮಾತನಾಡಿದ ಅವರು, ದಿನೇಶ್ ಕೆ ಶೆಟ್ಟಿಯವರು ಮಕ್ಕಳಿಗೆ ಚದುರಂಗ ಆಟ ಆಡುವುದರಿಂದ ಬುದ್ಧಿಶಕ್ತಿ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಮಕ್ಕಳು ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಬಲರಾಗುತ್ತಾರೆ ಇಂತಹ ಆಟಗಳು ಹೆಚ್ಚಿನ ರೀತಿಯಲ್ಲಿ ಮಕ್ಕಳಿಗೆ ಸಿಗುವಂತಾಗಲಿ ಮಕ್ಕಳು ರಾಷ್ಟ್ರ ಮತ್ತು ರಾಜ್ಯಮಟ್ಟಗಳಲ್ಲಿ ಹೆಸರು ಮಾಡಲಿ ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ಅಂತರರಾಷ್ಟ್ರೀಯ ರಾಷ್ಟ್ರೀಯ ಪಂದ್ಯಾವಳಿಗಳು ನಡೆಯಲಿ ನಮ್ಮ ಪ್ರೋತ್ಸಾಹ ಸದಾ ಇರುತ್ತದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಪಾಲಿಕೆಯ ಮಾಜಿ ಸದಸ್ಯ ಡಿ ಎನ್ ಜಗದೀಶ್ ಹಾಗೂ ಅಂತರಾಷ್ಟ್ರೀಯ ಚೆಸ್ ತೀರ್ಪುಗಾರರಾದ ಪ್ರಾಣೇಶ್ ಯಾದವ್ ವಿಜಯ್ ಕುಮಾರ್ ಈ ಪಂದ್ಯಾವಳಿಯ ಆಯೋಜಕರಾದ ಯುವರಾಜ್ ಮಂಜುಳಾ ಯುವರಾಜ್ ಉಪಸ್ಥಿತರಿದ್ದರು
ಈ ಪಂದ್ಯಾವಳಿಯಲ್ಲಿ 08,10 ,12,14,16, ವರ್ಷದ ಒಳಗಿನ ಮಕ್ಕಳಿಗೆ 80ಕ್ಕೂ ಹೆಚ್ಚು ವಿಶೇಷ ಬಹುಮಾನ ನೀಡಲಾಗುತ್ತದೆ ಹಾಗೂ ಈ ಪಂದ್ಯಾವಳಿಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಯ ಹಾಸನ ಬೆಂಗಳೂರು, ತುಮಕೂರು ಚಿತ್ರದುರ್ಗ ಹಾವೇರಿ ಶಿವಮೊಗ್ಗ ಭದ್ರಾವತಿ ದಾವಣಗೆರೆ 130ಕ್ಕೂ ಹೆಚ್ಚು ಸ್ಪರ್ದಾಳುಗಳು ಭಾಗವಹಿಸಿದ್ದರು ಈ ಪಂದ್ಯಾವಳಿಯು ಏಳು ಸುತ್ತುಗಳಲ್ಲಿ ನಡೆಯಲಿದ್ದು ನಂತರ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ ಎಂದು ಸಂಘದ ಆಯೋಜಕರಾದ ಯುವರಾಜ್ ತಿಳಿಸಿದರು