ದಾವಣಗೆರೆ (Davangere District): ಕುಟುಂಬ ಕಲಹದಿಂದ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಕೆಟಿಜೆ ನಗರದ 17ನೇ ಕ್ರಾಸ್‌ನ ಕುಂಬಾರ ಓಣಿಯ ರೇಖಾ (38) ಮೃತ ಗೃಹಿಣಿ.
ಇತ್ತೀಚೆಗೆ ಗಂಡ -ಹೆಂಡತಿ ನಡುವೆ ಕೌಟುಂಬಿಕ ಕಲಹ ಹೆಚ್ಚಾಗಿತ್ತು. ಶನಿವಾರ ಬೆಳಗಿನ ಜಾವ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಇದರಿಂದ ಸಿಟ್ಟಿಗೆದ್ದ ದೇವರಾಜ್ ತನ್ನ ಪತ್ನಿ ರೇಖಾಳ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ತೀವ್ರ ರಕ್ತಸ್ರಾವವಾಗಿ ರೇಖಾ ಮೃತಪಟ್ಟಿದ್ದಾರೆ.
Read also : Davanagere punishment news | ಕೊಲೆ : ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ
ಸ್ಥಳಕ್ಕೆ ಭೇಟಿ ನೀಡಿದ ಕೆಟಿಜೆ ನಗರ ಪೊಲೀಸರು ಆರೋಪಿ ದೇವರಾಜ್‌ನನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.