ಸಂತೆಬೆನ್ನೂರು :
ಹಣ ಪರಿಶೀಲಿಸುವ ನೆಪದಲ್ಲಿ ಹಣ ಎಗರಿಸಿ ಪಲಾಯಗೈದ ಘಟನೆ ಗ್ರಾಮದ ಕೆನರಾ ಬ್ಯಾಂಕ್‍ನಲ್ಲಿ ನಡೆದಿದೆ.
ಭೀಮನೆರೆ ಗ್ರಾಮದ ರೈತ ಬಸವರಾಜ್ ಕೆನರಾ ಬ್ಯಾಂಕ್ ಕ್ಯಾಶ್ ಕೌಂಟರ್‍ನಲ್ಲಿ 500 ರೂ. ವೌಲ್ಯದ 100 ನೋಟಿನ ಕಂತೆಯ 50 ಸಾವಿರ ರೂ. ಪಡೆದಿದ್ದಾರೆ. ಪಕ್ಕದಲ್ಲೇ ಇದ್ದ ಅಪರಿಚಿತ ವ್ಯಕ್ತಿ ನೋಟಿನ ಕಂತೆಯಲ್ಲಿ ಹರಿದ ಹಾಗೂ ನಕಲಿ ನೋಟುಗಳಿರುತ್ತವೆ, ಸ್ವಲ್ಪ ಕೊಡಿ ಪರಿಶೀಲಿಸುತ್ತೇನೆ ಎಂದು ಹಣ ಪಡೆದು ಸರಿ ಇದೆ ಎಂದು ಕಟ್ಟನ್ನು ಹಿಂತಿರುಗಿಸಿ ಅಲ್ಲಿಂದ ಕಾಣೆಯಾಗಿದ್ದಾನೆ.
ಈ ವೇಳೆ ಬಸವರಾಜ್ ಅವರಿಗೆ ಹಣ ಕಡಿಮೆಯಾಗಿರುವ ಅನುಮಾನ ಬಂದು ಮರು ಎಣಿಕೆ ಮಾಡಿದ್ದಾರೆ. ಆಗ ಕೇವಲ 78 ನೋಟುಗಳು ಇದ್ದು, 22 ನೋಟುಗಳನ್ನು ಅಪರಿಚಿತ ವ್ಯಕ್ತಿ ಎಗರಿಸಿರುವುದು ಗೊತ್ತಾಗಿದೆ.
ತಕ್ಷಣ ಬ್ಯಾಂಕ್‍ನ ಅಧಿಕಾರಿಗಳಿಗೆ ಸಿಸಿಟಿವಿ ಕ್ಯಾಮೆರಾದ ದೃಶ್ಯ ಪರಿಶೀಲಿಸಲು ಮನವಿ ಮಾಡಿದರು.
ವ್ಯಕ್ತಿಯನ್ನು ಹುಡುಕಿದರು ಪ್ರಯೋಜನವಾಗಿಲ್ಲ.
ಸಂತೆಬೆನ್ನೂರು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.