ದಾವಣಗೆರೆ (Davanagere): ತಾಲೂಕಿನ ಆತ್ತಿಗೆರೆ ಸಮೀಪ ಶನಿವಾರ ಬೆಳಗಿನ ಜಾವ ಕಾರು-ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಶಿರಗೂಪ್ಪ ತಾಲೂಕಿನ ಕಾಗೆವಾಡ ಗ್ರಾಮದ ಬಸವರಾಜಪ್ಪ ಐಬತ್ತಿ ಸಿರಗುಪ್ಪ (30), ಶ್ರೀಧರ್ ವಡ್ಡರ ಸಿರಗುಪ್ಪ (27), ವಿಜಯ್ ಭಜಂತ್ರಿ ಸಿರಗುಪ್ಪ (30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೈಸೂರು, ಮಡಿಕೆರಿ ಪ್ರವಾಸ ಮುಗಿಸಿಕೊಂಡು ಸ್ವಂತ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಗಾಯಗೊಂಡ ವಿಶ್ವನಾಥ ಹಾಗೂ ರಾಜು ಕಟಕಾರ್ ಇಬ್ಬರನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
Read also : ಸಾರ್ವಜನಿಕ ಕಟ್ಟಡ ಹಾಗೂ ಕಚೇರಿಗಳಲ್ಲಿನ ಅನಧಿಕೃತ ಬಿತ್ತಿ ಪತ್ರ ತೆರವುಗೊಳಿಸಿ : ಡಿಸಿ
ಮಾಯಕೊಂಡ ಪೊಲೀಸ್ ಠಾಣೆಯ ಪಿಎಸ್‍ಐ ಅಜಯ್ ಬೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.