ಮುಂಗಾರು ಪೂರ್ವದಲ್ಲಿಯೇ ರೈತ ಸಂಪರ್ಕ ಕೇಂದ್ರ, ಸೊಸೈಟಿಗಳ ಮೂಲಕ ರೈತರಿಗೆ ಬೇಕಾದ ಸಜ್ಜೆ, ಮೆಕ್ಕೆಜೋಳ, ಜೋಳ ಸೇರಿದಂತೆ ವಿವಿಧ ಬೆಳೆಯ ಬೀಜಗಳನ್ನು ದಾಸ್ತಾನು ಮಾಡಿ ಒದಗಿಸಬೇಕು. ಅಲ್ಲದೇ ಗುಣಮಟ್ಟದ ಬೀಜ ನೀಡುವಲ್ಲಿ ಇಲಾಖೆ ಹೆಚ್ಚು ಗಮನ ಹರಿಸಬೇಕು. ರೈತ ಸಂಪರ್ಕ ಕೇಂದ್ರದ ಎದುರು ರೈತರು ದಿನವಿಡಿ ಬೀಜ ಸೇರಿದಂತೆ ಕೃಷಿ ಉಪಕರಣಗಳಿಗಾಗಿ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಬಾರದು. ಅಧಿಕಾರಿಗಳು ಇಂತಹ ಪರಿಸ್ಥಿತಿಯನ್ನು ದೂರ ಮಾಡಬೇಕೆಂದು ತಾಕೀತು ಮಾಡಿದರು.
Read also : JOB NEWS | ಮಾಜಿ ಸೈನಿಕರಿಗೆ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
ಸರ್ಕಾರ ನಿಗದಿಪಡಿಸಿದ ದರದಲ್ಲಿ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡಿ ರಶೀದಿ ನೀಡಬೇಕು. ಪರಿಕರಗಳನ್ನು ಹೆಚ್ಚಿನ ಬೆಲೆಗೆ ಮತ್ತು ಅವಧಿ ಮೀರಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು. ಕೆಲವು ಸೊಸೈಟಿಗಳಲ್ಲಿ ರಶೀದಿ ಹರಿಯದೆ ಹೆಚ್ಚಿನ ಬೆಲೆಯಡಿ ರಸಗೊಬ್ಬರ ಮಾರಾಟ ಮಾಡಿದ ಬಳಿಕ ಕಡಿಮೆ ದರದಲ್ಲಿ ರಶೀದಿ ಹರಿಯುವುದು ಕಂಡು ಬರುತ್ತಿದ್ದು, ಇದನ್ನು ತಪ್ಪಿಸಬೇಕು. ರೈತರಿಗೆ ಹೆಚ್ಚಿನ ಹೊರೆ ಮಾಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ, ಕೃಷಿ ಅಧಿಕಾರಿಗಳಾದ ಬೀರಪ್ಪ, ಚಂದ್ರಪ್ಪ, ಸಂಜೀವ್, ಶ್ರೀನಿವಾಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ನಕಲಿ ಬೀಜಗಳ ಮಾರಾಟ ತಡೆಯಬೇಕು
ಹೊರಗಡೆಯಿಂದ ಬಂದು ಬ್ರ್ಯಾಂಡ್ ಇಲ್ಲದ ಬೀಜಗಳನ್ನು ರೈತರಿಗೆ ಮಾರಾಟ ಮಾಡುತ್ತಾರೆ. ಅಮಾಯಕ ರೈತರು ಕಡಿಮೆ ದರದಲ್ಲಿ ಸಿಗುವುದರಿಂದ ಕಳಪೆ ಬೀಜ ಎಂಬ ಯಾವುದೇ ಅರಿವಿಲ್ಲದೆ ತೆಗೆದು ಕೊಂಡು ಬಿತ್ತನೆ ಮಾಡುತ್ತಾರೆ. ಕೊನೆಗೆ ಬೆಳೆ ಕೈಕೊಟ್ಟಾಗ ಪರಿತಪ್ಪಿಸುತ್ತಾರೆ. ಮೊದಲು ಹೊರಗಡೆಯಿಂದ ನಕಲಿ ಬೀಜಗಳನ್ನು ತಂದು ಮಾರಾಟ ಮಾಡುವುದನ್ನು ತಡೆಯಬೇಕು.
– ಕೆ.ಎಸ್.ಬಸವಂತಪ್ಪ, ಮಾಯಕೊಂಡ ಶಾಸಕ.