Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಜ್ಞಾನ ಮತ್ತು ಭಕ್ತಿಯ ವಿಚಾರಗಳು ಭಾಗವತದಲ್ಲಿ ಸಮರ್ಥವಾಗಿದೆ : ಪೂಜ್ಯ ಶ್ರೀ ವೇ|| ಪಂ|| ಗೋಪಾಲಾಚಾರ್ ಮಣ್ಣೂರ್
ತಾಜಾ ಸುದ್ದಿ

ಜ್ಞಾನ ಮತ್ತು ಭಕ್ತಿಯ ವಿಚಾರಗಳು ಭಾಗವತದಲ್ಲಿ ಸಮರ್ಥವಾಗಿದೆ : ಪೂಜ್ಯ ಶ್ರೀ ವೇ|| ಪಂ|| ಗೋಪಾಲಾಚಾರ್ ಮಣ್ಣೂರ್

Dinamaana Kannada News
Last updated: December 31, 2024 12:15 pm
Dinamaana Kannada News
Share
Davanagere
Davanagere
SHARE

ದಾವಣಗೆರೆ (Davanagere) ಜ್ಞಾನ ಮತ್ತು ಭಕ್ತಿ ಎರಡು ವಿಚಾರಗಳು ಶ್ರೀಮದ್ ಭಾಗವತ ಮಹಾ ಪುರಾಣಗಳಲ್ಲಿ ಸಮರ್ಥವಾಗಿ ಮೂಡಿ ಬಂದಿವೆ. ಇದರಲ್ಲಿ ವೇದ ವೇದಾಂತಗಳ ಸರ್ವಸ್ವವೂ ಅಡಗಿದೆ. ಭಾಗವತವು ವೇದವ್ಯಾಸರು ರಚಿಸಿದ 18 ಪುರಾಣಗಳಲ್ಲೇ ಇದು ಅತ್ಯಂತ ಶ್ರೇಷ್ಠವಾದುದು ಎಂದು ಹಿರಿಯ ಪ್ರವಚನಕಾರರಾದ ವೇದಬ್ರಹ್ಮ ಪಂಡಿತರೂ ಆದ ಪೂಜ್ಯ ಶ್ರೀ ಗೋಪಾಲಾಚಾರ್ ಮಣ್ಣೂರ್ ಇವರು ಅಭಿಪ್ರಾಯಪಟ್ಟರು.

ಭಾನುವಾರ ಸಂಜೆ ನಗರದ ದೇವರಾಜ ಅರಸು ಬಡಾವಣೆ ‘ಸಿ’ ಹಂತದಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ, ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರ ಇಲ್ಲಿ ಪೂಜ್ಯ ಶ್ರೀ ಕುದ್ದುಂಜಿ ಮಹಾಬಲರಾವ್ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಶ್ರೀಮದ್ ಭಾಗವತ ಪುರಾಣ ಪ್ರವಚನ ಸಪ್ತಾಹದಲ್ಲಿ ಸಾನ್ನಿಧ್ಯ ವಹಿಸಿ ಜ್ಯೋತಿ ಬೆಳಗಿಸುವುದರೊಂದಿಗೆ ಸಪ್ತಾಹವನ್ನು ಶುಭಾರಂಭಗೊಳಿಸಿದರು.

ಭಾಗವತವು ಶ್ರೀ ವೇದವ್ಯಾಸ ಋಷಿಗಳಿಂದ ಸಜ್ಜನರ ಹಾಗೂ ಭಗವತ್ ಭಕ್ತರ ಅನುಗ್ರಹಕ್ಕಾಗಿ ರಚಿತವಾದ ಅತ್ಯಂತ ಶ್ರೇಷ್ಠವಾದ ಪುರಾಣವೆಣಿಸಿದೆ. ಇದರ ಶ್ರವಣ ಮಾತ್ರದಿಂದ ಮನುಷ್ಯರು ಎಲ್ಲಾ ವಿಧವಾದ ಪಾಪಗಳಿಂದ ಮುಕ್ತರಾಗುತ್ತಾರೆ. ಅಷ್ಟೇ ಅಲ್ಲದೇ ಜೀವನದಲ್ಲಿ ತಮಗೆ ಅಪೇಕ್ಷಿತವಾದ ಎಲ್ಲಾ ಆಸೆಗಳನ್ನು ಪೂರೈಸಿಕೊಂಡು ಮುಂದೆ ಉತ್ತಮವಾದ ಸುಖಃಗಳನ್ನು ಕೊಡುವ ಲೋಕಕ್ಕೆ ಕೊಂಡೊಯ್ಯುತ್ತದೆ. ಶಾಪಗ್ರಸ್ತನಾದ ಪರೀಕ್ಷಿತ ಮಹಾರಾಜನು ಕೇವಲ 7 ದಿನದ ಒಳಗೆ ಸಾಯುವ ವಿಷಯ ತಿಳಿದಾಗ ಭಾಗವತದ ಪ್ರಭಾವದಿಂದ ಅವನಿಗೆ ಸದ್ಗತಿ ದೊರೆತ ಪುಣ್ಯಕಥಾ ಭಾಗವಾದ ಭಾಗವತವು ಸೃಷ್ಠಿ ಸ್ಥಿತಿ, ಲಯ ಇವೆಲ್ಲವುಗಳ ಪಾಠವನ್ನು ತಿಳಿಸಬಲ್ಲ ನಮ್ಮ ಇಂದಿನ ಬದುಕಿಗೂ ಹತ್ತಿರದ ಅನೇಕ ಸಂಗತಿಗಳು ಉತ್ತಮ ಬದುಕನ್ನು ರೂಪಿಸುವಲ್ಲಿ ಭಾಗವತವು ಪ್ರಭಾವ ಬೀರುವುದು ಎಂದು ಹೇಳುತ್ತಾ ಭಾಗವತದ ಉಗಮ, ಅದರ ಉದ್ದೇಶ, ಅದರಿಂದ ಮನುಕುಲಕ್ಕೆ ಆಗುವ ಪ್ರಯೋಜನಗಳನ್ನು ಕಥಾರೂಪಕವಾಗಿ ಅತ್ಯಂತ ಮನೋಜ್ಞವಾಗಿ ಎಲ್ಲರ ಮನಸ್ಸಿಗೆ ಮುಟ್ಟುವಂತೆ ಪೂಜ್ಯರು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕುಟುಂಬ ಪ್ರಬೋಧನಾ ದಾವಣಗೆರೆ ವರ್ಗದ ಸಂಚಾಲಕಿಯಾದ ಗೀತಕ್ಕ ಮತ್ತು ಸದಸ್ಯರು ಭಾಗವಹಿಸಿ ದೇವರ ನಾಮ ಹಾಡಿದರು.

ಪ್ರಾರಂಭದಲ್ಲಿ ಗಾಯಕಿ ಕು|| ಸಂವೇದಿತಾ, ಪ್ರಾರ್ಥನಾ ಶ್ಲೋಕ ಹಾಡಿದರು. ಯೋಗತಜ್ಞ ಡಾ|| ರಾಘವೇಂದ್ರ ಗುರೂಜಿ ಪ್ರಾಸ್ತಾವಿಕವಾಗಿ ನುಡಿನಮನ ಸಲ್ಲಿಸಿದರು. ಭಾಗವತ ಪುರಾಣಿಕ್ಕೆ ಕೈ ಜೋಡಿಸಿದ ಆಶಾ ಪ್ರದೀಪ್, ಮಂಜುನಾಥ್ ಹೆಚ್. ಪ್ರದೀಪ್, ರೇಖಾ ಕಲ್ಲೇಶ್, ಸಾವಿತ್ರಮ್ಮ, ಶಾಂತಮ್ಮ, ಯೋಗ ವಿದ್ಯಾರ್ಥಿ ಕು|| ಕಾವ್ಯ, ರಾಹುಲ್ ವಿ.ಕೆ. ಮುಂತಾದವರಿಗೆ ಅಭಿನಂದನೆ ಸಲ್ಲಿಸಿದರು.

Read also : Davanagere | ಡಾ.ಎನ್.ಪರಶುರಾಮ್‌ಗೆ ‘ಯುವ ಶ್ರೀಕಲಾಭೂಷಣ’ ಪ್ರಶಸ್ತಿ ಪ್ರದಾನ

TAGGED:Davanagere districtDavanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere Davanagere | ಡಾ.ಎನ್.ಪರಶುರಾಮ್‌ಗೆ ‘ಯುವ ಶ್ರೀಕಲಾಭೂಷಣ’ ಪ್ರಶಸ್ತಿ ಪ್ರದಾನ
Next Article Davangere Davanagere | ಬಿಜೆಪಿಗೆ ದಲಿತರ ಸಚಿವರೇ ಟಾರ್ಗೆಟ್‌ : ಮಾಧ್ಯಮ ವಕ್ತಾರ ಶ್ರೀನಿವಾಸ್ ಕಿಡಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಸೇವೆಯಿಂದ ಜನಮಾನಸದಲ್ಲಿ ಉಳಿಯಲು ಸಾಧ್ಯ : ಡಿಸಿ

ದಾವಣಗೆರೆ :  ಸರ್ಕಾರ ಅನೇಕ ಮಹಾನಿಯ ಜಯಂತಿಯನ್ನು ಆಚರಿಸುತ್ತಿದ್ದು ಸಮಾಜದ ಒಳತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಸೇವೆ ಹಾಗೂ ತ್ಯಾಗ…

By Dinamaana Kannada News

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 35: ಇಲ್ಲಿ ಹೆದರಿಸುವವರಾರೂ ಇಲ್ಲ !

Kannada News | Sanduru Stories | Dinamaana.com | 26-05-2024 ಭೀತಿ! ಇಲ್ಲಿ ಹೆದರಿಸುವವರಾರೂ ಇಲ್ಲ. ಮರಣದಂಡನೆ ಶಿಕ್ಷೆಗೆ…

By Dinamaana Kannada News

ಒಳ್ಳೆಯ ಆರೋಗ್ಯಕ್ಕಾಗಿ ನೈಸರ್ಗಿಕ ಚಿಕಿತ್ಸೆ ಅವಶ್ಯ : ಬಸವಪ್ರಭುಸ್ವಾಮೀಜಿ

ದಾವಣಗೆರೆ (Davanagere): ಮಾನವ ಕುಟುಂಬವು ಇಂದು ಬಹುಮಾನ್ಯವಾದ ತಂತ್ರಜ್ಞಾನ ದಿಂದ  ಪ್ರಗತಿಯನ್ನು ಕಂಡಿದ್ದರೂ, ಪ್ರಕೃತಿಯೊಂದಿಗೆ ಸಮ್ಮಿಲನ ಹೊಂದಿದ ಪರಿಪಾಲನೆ ಇನ್ನೂ…

By Dinamaana Kannada News

You Might Also Like

heart attack
ತಾಜಾ ಸುದ್ದಿ

ದಾವಣಗೆರೆ | ಹೃದಯಾಘಾತದಿಂದ ಆಟೋ ಚಾಲಕ ಸಾವು

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ

By Dinamaana Kannada News
Harihara
ತಾಜಾ ಸುದ್ದಿ

ಹರಿಹರ | ವಿವಿಧ ಸೌಲಭ್ಯಗಳ್ನು ಪಡೆಯಲು ಅರ್ಜಿ ಆಹ್ವಾನ

By Dinamaana Kannada News
District Congress Davanagere
ತಾಜಾ ಸುದ್ದಿ

ದಾವಣಗೆರೆ | ಬಾಬೂಜೀ ಸಾಧನೆಗಳು ಅಪಾರ : ಕೆ.ಜಿ. ಶಿವಕುಮಾರ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?