ದಾವಣಗೆರೆ (Davanagere): ಸೂರ್ಯದೇವನು ನಮಗೆ ಮಾಡುವ ಉಪಕಾರ ಅಷ್ಟಿಷ್ಟಲ್ಲ. ಇವತ್ತು ನಾವು ಬದುಕಿದ್ದೇವೆ ಎಂದರೆ ಕಾರಣ ಸೂರ್ಯದೇವ. ಏಕೆಂದರೆ ಸೂರ್ಯನಿಂದಲೇ ನಮಗೆ ಬೆಳಕು, ಅವನಿಂದಲೇ ಉಸಿರಾಟಕ್ಕೆ ಬೇಕಾಗುವ ಆಮ್ಲಜನಕ ಉತ್ಪತ್ತಿಯಾಗುವುದು. ಮಳೆ, ಬೆಳೆ, ಆಹಾರದ ಉತ್ಪಾದನೆ, ಮರಗಿಡಗಳು, ಹಣ್ಣು ಕಾಯಿ, ದವಸ ಧಾನ್ಯ ಮುಂತಾದವುಗಳು, ಆರೋಗ್ಯ, ಶಾಂತಿ, ಚಟುವಟಿಕೆ ಇತ್ಯಾದಿ ಅಲ್ಲದೇ ನಮ್ಮ ಇರುವಿಕೆಗೆ ಸೂರ್ಯನೇ ಮೂಲ ಕಾರಣವಾಗಿದ್ದಾನೆ ಎಂದು ಹಿರಿಯ ಪ್ರವಚನಕಾರರಾದ ವೇ|| ಪಂ|| ಪೂಜ್ಯ ಶ್ರೀ ಗೋಪಾಲಾಚಾರ್ ಮಣ್ಣೂರ್ ಅಭಿಪ್ರಾಯಪಟ್ಟರು.
ನಗರದ ದೇವರಾಜ ಅರಸ್ ಲೇಔಟ್ ‘ಸಿ’ ಬ್ಲಾಕ್ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ, ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರ ಇಲ್ಲಿ ಏರ್ಪಡಿಸಲಾಗಿದ್ದ ರಥಸಪ್ತಮಿ ಹಾಗೂ ಮಹಾಕುಂಭಮೇಳದ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದ ಅಮೃತ ತೀರ್ಥ ಪ್ರಸಾದ ವಿನಿಯೋಗ ವಿತರಣಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಉಪನ್ಯಾಸ ನೀಡಿದರು.
ಭಾರತ ದೇಶದಲ್ಲಿ ಆಚರಿಸುವ ಅನೇಕ ಹಬ್ಬಗಳಲ್ಲಿ ರಥಸಪ್ತಮಿಯು ಸಹ ವಿಶೇಷವಾದ ಆಚರಣೆಯಾಗಿದೆ. ಇದನ್ನು ಸೂರ್ಯ ಜಯಂತಿ ಎಂದು ಸಹ ಹೇಳುತ್ತಾರೆ. ಆ ದಿನದಂದು ಸೂರ್ಯನು ಅರುಣ ಎಂಬ ಸಾರಥಿಯೊಂದಿಗೆ ತನ್ನ ಏಳು ಕುದುರೆಗಳುಳ್ಳ ವಿಶೇಷ ರಥದಲ್ಲಿ ಕುಳಿತು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರಪಂಚದ ಪರ್ಯಟನೆಯನ್ನು ಪ್ರಾರಂಭಿಸುತ್ತಾನೆ. ಆ ದಿನ ಸೂರ್ಯನು ಭೂಮಿಗೆ ಸ್ವಲ್ಪ ಹತ್ತಿರ ಬರುವನು ಎಂಬ ನಂಬಿಕೆಯು ಇದೆ. ಆದ್ದರಿಂದ ರಥಸಪ್ತಮಿ ಎಂಬ ಹೆಸರು ಪ್ರತೀತವಾಯಿತು. ಒಂದು ವೇಳೆ 15 ದಿವಸ ಸುರ್ಯೋದಯ ಆಗದಿದ್ದಲ್ಲಿ ನಾವುಗಳು ಯಾರೂ ಬದುಕಿರಲು ಸಾಧ್ಯವಿಲ್ಲ.
ಆದ್ದರಿಂದ ಅವಶ್ಯಕವಾಗಿ ನಾವೆಲ್ಲರೂ ಪ್ರತಿನಿತ್ಯವೂ ಕೃತಜ್ಞತಾ ಭಾವದಿಂದ ಸೂರ್ಯ ನಮಸ್ಕಾರ, ಸೂರ್ಯಮಂತ್ರ, ಸ್ತೋತ್ರ, ಜಪವನ್ನು ಮಾಡಿ ಪೂಜಿಸಿ ವಂದಿಸಬೇಕು. ಇಂಗ್ಲೀಷ್ನಲ್ಲಿ ಹೇಳುವುದಾದರೆ We must have a sence of gratitude towards lord sun ಇದರಿಂದ ನಮಗೆ ಆರೋಗ್ಯ, ಆಯುಷ್ಯ, ಶಾಂತಿ, ಸಮಾಧಾನ, ಸುಖಃ, ಸಂತೋಷ ದೊರೆಯುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ಸೂರ್ಯನಿಂದ ವೈಜ್ಞಾನಿಕವಾಗಿ, ಆಧ್ಯಾತ್ಮಕವಾಗಿ ನಮಗೆ ಸಿಗುವ ಲಾಭಗಳನ್ನು ತಿಳಿಸಿ ಕೊಡುತ್ತಾ ರಥ ಸಪ್ತಮಿಯಂದು ಸಾರ್ವತ್ರಿಕವಾಗಿ ನಮ್ಮ ನಮ್ಮ ಮನೆಗಳಲ್ಲಿ ಯಾವ ರೀತಿ ಬೆಳಿಗ್ಗೆ ಎದ್ದು ಮಾಡುವ ಸ್ನಾನದ ವಿಧಿ ವಿಧಾನಗಳು ಸೂರ್ಯನಿಗೆ ನೈವೇದ್ಯ ಅರ್ಥಾತ್ ಆಘ್ರ್ಯವನ್ನು ಕೊಡುವ ಸರಳ ವಿಧಾನವನ್ನು ತಿಳಿಸಿಕೊಟ್ಟರು.
ಪ್ರಾರಂಭದಲ್ಲಿ ಸೂರ್ಯದೇವನಿಗೆ ಅಗ್ನಿಹೋತ್ರ ಹೋಮವನ್ನು ಪ್ರತಿಷ್ಠಾನದ ಯೋಗಗುರು ಡಾ|| ರಾಘವೇಂದ್ರ ಗುರೂಜಿ ಮಾಡುವುದರೊಂದಿಗೆ ಮಂತ್ರಾಭ್ಯಾಸವನ್ನು ಹೇಳಿಕೊಟ್ಟರು.
ನಂತರ ಯೋಗ ಸಾಧಕರು ಸೂರ್ಯಾಷ್ಟೋತ್ತರ ಶತಮಾನಾವಳಿ ಗಳೊಂದಿಗೆ 108 ಸುತ್ತಿನ ಸೂರ್ಯ ನಮಸ್ಕಾರ ಯೋಗ ಪದ್ಧತಿಯನ್ನು ಮಕ್ಕಳಾದಿಯಾಗಿ ವಯೋವೃದ್ಧರು ಕ್ರಮಬದ್ಧವಾಗಿ ತುಂಬಾ ಶ್ರದ್ಧಾ ಭಕ್ತಿಯಿಂದ ಪೂರ್ಣಗೊಳಿಸಿದರು.
ಸರ್ವಪೂಜಾ ವಿಧಿ ವಿಧಾನಗಳನ್ನು ಪೂಜ್ಯ ಶ್ರೀ ಗೋಪಾಲಾಚಾರ್ ಮಣ್ಣೂರ್ ಅವರ ಮಾರ್ಗದರ್ಶನದಲ್ಲಿ ಅಜ್ಜಂಪುರ ತಾಲ್ಲೂಕು, ಚಿಕ್ಕಾನಮಂಗಲ ಗ್ರಾಮ ಪಂಚಾಯಿತಿ ಪಿ.ಡಿ.ಓ. ಆಗಿ ಸೇವೆ ಸಲ್ಲಿಸುತ್ತಿರುವ ಹರ್ಷ ಕೆ.ಎಸ್. ಹಾಗೂ ಶ್ರೀಮತಿ ಮೇಘ ಆರ್. ದಂಪತಿಗಳು ನೆರವೇರಿಸಿದರು.
ಗುರೂಜಿಯವರ ಜೊತೆಯಲ್ಲಿ ಪ್ರಯಾಗ್ರಾಜ್ ಕುಂಭಮೇಳದಲ್ಲಿ ಭಾಗವಹಿಸಿದ ಯೋಗ ಗುರುಗಳಾದ ಸುನೀಲ್ಕುಮಾರ್ ಎನ್.ವಿ. ಮತ್ತು ವೀರಭದ್ರಸ್ವಾಮಿ ತಮ್ಮ ಅವಿಸ್ಮರಣೀಯ ಅನುಭವವನ್ನು ಹಂಚಿಕೊಂಡರು.
ಸೂರ್ಯನಮಸ್ಕಾರ ಯೋಗ ಯಜ್ಞದಲ್ಲಿ ವಿಶ್ವೇಶ್ವರಯ್ಯ ಪಾರ್ಕ್ನಲ್ಲಿ ಅಭ್ಯಾಸ ಮಾಡುವ ಸಾಧಕರು, ಕರುಣಾಜೀವ ಟ್ರಸ್ಟ್ನ ನ ಯೋಗ ಶಿಕ್ಷಕ ಪ್ರಭುಸ್ವಾಮಿ ಹಿರೇಮಠ್, ಬಾಬಾರಾಮ್ದೇವ್ ಅವರ ಅನುಯಾಯಿಗಳಾದ ಯೋಗ ಶಿಕ್ಷಕಿ ಶ್ರೀಮತಿ ಅಂಜಲಿದೇವಿ, ಕೆ.ಇ.ಬಿ.ಯ ನರಸಿಂಹಮೂರ್ತಿ ದಂಪತಿಗಳು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.
ಸರ್ವಾಲಂಕಾರ ಪೂಜಾ ಸೇವೆಯನ್ನು ಅಂಚೆ ಇಲಾಖೆಯ ಶ್ರೀಮತಿ ವೇದಾವತಿ ಡಿ.ಹೆಚ್.ಎಂ. ಉಪಾಹಾರ ಸೇವೆ ಜಿಲ್ಲಾ ಕಛೇರಿಯ ಉದ್ಯೋಗಿ ಸಂತೋಷ್ ಹೆಚ್. ಅರ್ಪಿಸಿದರು. ಶ್ರೀಮತಿ ರೇಖಾ ಕಲ್ಲೇಶ್, ಶ್ರೀಮತಿ ಶಾಂತಮ್ಮ ಗಾಣಿಗೇರ್, ಶ್ರೀಮತಿ ಜ್ಯೋತಿ ಲಕ್ಷ್ಮೀ ವಾಸುದೇವ್ ಅಂದವಾಗಿ ರಂಗೋಲಿ ಸೇವೆ ಮಾಡಿದರು.
ಯೋಗ ಅಧ್ಯಯನ ವಿಭಾಗದ ರಾಹುಲ್ ವಿ.ಕೆ., ಚೇತನ್, ಸಂವೇದಿತಾ, ಕಾವ್ಯ, ಮುಖೇಶ್ ದೇವ್ ಇನ್ನಿತರರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಚಲನಚಿತ್ರ ಹಿನ್ನೆಲೆ ಗಾಯಕಿ ಕು|| ಸಂವೇದಿತಾ ಸುಭಾಷ್ ಕುಶಾಲನಗರ ಇವರು ಸುಶ್ರಾವ್ಯವಾಗಿ ಭಕ್ತಿ ಗೀತೆಗಳನ್ನು ಹಾಡಿದರು.
ಮಹಾಮಂಗಳಾರತಿ ನಂತರ ತ್ರಿವೇಣಿ ಸಂಗಮದಿಂದ ತರಲಾಗಿದ್ದ ಅಮೃತ

ತೀರ್ಥ ಪ್ರಸಾದವನ್ನು ಸಾರ್ವತ್ರಿಕವಾಗಿ ನೂರಾ ಇಪ್ಪತ್ತಕ್ಕೂ ಹೆಚ್ಚು ಭಕ್ತಾದಿಗಳಿಗೆ ವಿತರಿಸಲಾಯಿತು.
Read also : Crime news | ಪೂಜೆ ಸೋಗಿನಲ್ಲಿ ಚಿನ್ನ ದೋಚಿದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ