ದಾವಣಗೆರೆ.ಡಿ.4 (Davanagere) : ಸಾಫ್ಟ್‍ವೇರ್ ದಿಗ್ಗಜ ಬೆಂಗಳೂರಿನ ಇನ್ಫೋಸಿಸ್ ಕ್ಯಾಂಪಸ್‍ನಲ್ಲಿ ಡಿಸೆಂಬರ್ 5 ರ ಇಂದಿನಿಂದ ಆರಂಭಗೊಳ್ಳಲಿರುವ ಎರಡು ದಿನಗಳ ಯುಕೆ-ಭಾರತ ಸಹಕಾರ-ಸಂವಾದ ಚರ್ಚೆಯಲ್ಲಿ ಭಾಗವಹಿಸಲು ದಾವಣಗೆರೆಯ ಐಡಾ ಲವ್ಲೇಸ್ ಸಾಫ್ಟ್ವೇರ್ ಕಂಪನಿಗೆ ಆಹ್ವಾನ ನೀಡಲಾಗಿದೆ ಎಂದು ಕಂಪನಿಯ ನಿರ್ದೇಶಕಿ ಶಿಲ್ಪಾ ಎಲ್ ತಿಳಿಸಿದ್ದಾರೆ.
ಸಮಾನ ಮತ್ತು ಆಧಾರರಹಿತ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಪರಿಹಾರಗಳ ಮೇಲೆ ಕೇಂದ್ರೀಕರಿಸುವ ಮೂಲಕ ನೈಜ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ನಾವೀನ್ಯತೆಗಳನ್ನು ಉತ್ತೇಜಿಸುವ ಕಾರ್ಯಾಗಾರದಲ್ಲಿ ಚರ್ಚೆ-ಸಂವಾದಗಳು ನಡೆಯಲಿವೆ ಎಂದು ಅವರು ಹೇಳಿದ್ದಾರೆ.
ಇನ್ಫೋಸಿಸ್, ಬ್ರಿಟಿಷ್ ಹೈ ಕಮಿಷನ್ ಮತ್ತುಕಾಮನ್ ವೆಲ್ತ್‍ಡೆವಲಪ್ಮೆಂಟ್‍ಆಫೀಸ್‍ನೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ದಾವಣಗೆರೆಯ ಐಡಾ ಲವ್ಲೇಸ್ ಸಾಫ್ಟ್ವೇರ್ ಕಂಪನಿಗೆ ಆಹ್ವಾನ ನೀಡಿರುವುದು ಹೆಮ್ಮೆಯ ವಿಷಯವಾಗಿದ್ದು, ಈ ಅವಕಾಶವನ್ನು ಕಂಪನಿ ಸದುಪಯೋಗಪಡಿಸಿಕೊಳ್ಳಲಿದೆ ಎಂದು ನಿರ್ದೇಶಕಿ ಶಿಲ್ಪಾ ಎಲ್ ತಿಳಿಸಿದ್ದಾರೆ.
ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಒಳಗೊಂಡ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ದಾವಣಗೆರೆಯ ಐಡಾ ಲವ್ಲೇಸ್ ಸಾಫ್ಟ್ವೇರ್ ಕಂಪನಿಗೆ ಈ ವರ್ಷದ ಆರಂಭದಲ್ಲಿ ಕೇಂದ್ರಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ದೊಡ್ಡ ಮೊತ್ತದ ಅನುದಾನ ಮತ್ತು ಪ್ರಶಂಸನಾ ಪತ್ರ ನೀಡಿತ್ತು. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕಂಪನಿಯ ನಿರ್ದೇಶಕಿ ಎಲ್.ಶಿಲ್ಪಾ ಪುರಸ್ಕಾರ ಸ್ವೀಕರಿಸಿದ್ದರು.
Read also : ರಕ್ತದಾನದಿಂದ ಜೀವರಕ್ಷಣೆ : ಪ್ರೊ.ಕುಂಬಾರ