Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Harihara | ಮಾನವರೆಲ್ಲರೂ ಪರಸ್ಪರ ಸಹೋದರರು ಅಕ್ಬರ್ ಅಲಿ ಉಡುಪಿ
ತಾಜಾ ಸುದ್ದಿ

Harihara | ಮಾನವರೆಲ್ಲರೂ ಪರಸ್ಪರ ಸಹೋದರರು ಅಕ್ಬರ್ ಅಲಿ ಉಡುಪಿ

Dinamaana Kannada News
Last updated: June 15, 2025 12:20 pm
Dinamaana Kannada News
Share
Davanagere
Davanagere
SHARE

ಹರಿಹರ (Harihara): ವಿಭಿನ್ನ ಧರ್ಮ, ಜಾತಿ, ಪಂಥ, ವರ್ಣಾದಿಗಳಿದ್ದರೂ ಜಗತ್ತಿನ ಮಾನವರೆಲ್ಲರೂ ಪರಸ್ಪರ ಸಹೋದರರೆಂದು ಇಸ್ಲಾಂಧರ್ಮ ಬೋಧಿಸುತ್ತದೆ ಎಂದು ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಹೇಳಿದರು.

ಜಮಾತೆ ಇಸ್ಲಾಮಿ ಹಿಂದ್‍ನ ತಾಲ್ಲೂಕು ಘಟಕದ ಆಶ್ರಯದಲ್ಲಿ ನಗರದ ಅಲಿ ಮಸೀದಿಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಆಯೋಜಿಸಿದ್ದ ಈದ್ ಮಿಲನ್ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.

ಜಗತ್ತಿಗೆ ಒಬ್ಬನೆ ಸೃಷ್ಟಿಕರ್ತನಿದ್ದಾನೆ, ನಾವುಗಳು ಆತನನ್ನು ಬೇರೆ, ಬೇರೆ ಹೆಸರಿನಿಂದ ಗುರುತಿಸುತ್ತೇವೆ. ನಮ್ಮ ಧರ್ಮವನ್ನು ಪ್ರೀತಿಸಿದಂತೆಯೆ ಇತರೆ ಧರ್ಮಗಳನ್ನು ಗೌರವಿಸುವ ಮನೋಭವ ಬೆಳೆಸಿ ಕೊಳ್ಳಬೇಕಿದೆ. ಈ ಮನೋಭಾವವು ಸಾಕಷ್ಟು ಕಲಹ, ಸಂಘರ್ಷಗಳನ್ನು ನಿವಾರಿಸುತ್ತದೆ ಎಂದರು.

ದೀಪಾವಳಿ, ಕ್ರಿಸ್‍ಮಸ್ ಹಬ್ಬದಲ್ಲಿ ನಾವೂ ಭಾಗವಹಿಸುತ್ತೇವೆ, ನಮ್ಮ ರಂಜಾನ್, ಬಕ್ರೀದ್ ಹಬ್ಬದಲ್ಲಿ ಇತರೆ ಧರ್ಮದವರೂ ಭಾಗವಹಿಸಿ ಸಂತಸವನ್ನು ಹಂಚಿಕೊಳ್ಳಬೇಕು. ಧರ್ಮಗಳ ಸಾರವನ್ನು ಅರಿತರೆ ಅಲ್ಲಿ ಸೌಹಾರ್ದತೆ, ಸ್ನೇಹ, ಶಾಂತಿಗೆ ಮಾತ್ರ ಅವಕಾಶ ಇರುತ್ತದೆ ಎಂದರು.

Read also : ಜೂ.16 ರಂದು ನಗರಕ್ಕೆ ಸಿಎಂ ಸಂಚಾರ ಮಾರ್ಗದಲ್ಲಿ ಭಾರಿ ಬದಲಾವಣೆ : ಡಿಸಿ

ಸೃಷ್ಟಿಕರ್ತನು ಅನುಯಾಯಿಯೊಬ್ಬರ ತ್ಯಾಗ ಗುಣವನ್ನು ಪರೀಕ್ಷಿಸಿದ ಸಂದರ್ಭದ ಪ್ರತೀಕವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ತ್ಯಾಗದ ಪ್ರತೀಕವಾದ ಬಕ್ರೀದ್ ಹಬ್ಬದ ನಿಜವಾದ ಆಚರಣೆ ಎಂದರೆ ತನಗೆ ಇಷ್ಟವಾದದ್ದನ್ನು ಸಂದರ್ಭ ಬಂದರೆ ತ್ಯಾಗ ಮಾಡುವುದಾಗಿದೆ ಎಂದರು.

ಇಸ್ಲಾಮ್ ಧರ್ಮದ ಸಾರವನ್ನು ಇತರೆ ಧರ್ಮದವರಿಗೆ ತಿಳಿಸಲು, ಸೌಹಾರ್ದತೆಯನ್ನು ಮೆರೆಯಲು ಜಮಾತೆ ಇಸ್ಲಾಮಿ ಹಿಂದ್ ದೇಶದಾದ್ಯಂತ ಹಲವು ದಶಕಗಳಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆ ಮೂಲಕ ಪರಸ್ಪರರಲ್ಲಿ ಸ್ನೇಹ ಬೆಳೆಯಲು ದಾರಿಯಾಗಿದೆ ಎಂದರು.

ಆರಂಭದಲ್ಲಿ ಎರಡು ನಿಮಿಷಗಳ ಮೌನಾಚರಣೆ ಮಾಡಿ ಈಚೆಗೆ ಅಹಮದಾಬಾದಿನಲ್ಲಿ ನಡೆದ ವಿಮಾನದುರಂತದಲ್ಲಿ ಮಡಿದವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.

ಮಾಜಿ ಶಾಸಕ ಎಸ್.ರಾಮಪ್ಪ, ತಾಪಂ ಮಾಜಿ ಅಧ್ಯಕ್ಷ ಟಿ.ಜೆ.ಮುರುಗೇಶಪ್ಪ, ಅಂಜುಮನ್ ಸಂಸ್ಥೆ ಅಧ್ಯಕ್ಷ ಆರ್.ಸಿ.ಜಾವೀದ್, ದಾವಣಗೆರೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಶಾಮೀರ್ ಆಲಂ ಖಾನ್, ನಗರಸಭಾ ಸದಸ್ಯರಾದ ಶಂಕರ್‍ಖಟಾವ್‍ಕರ್, ಕೆ.ಬಿ.ರಾಜಶೇಖರ್, ಮುಖಂಡರಾದ ಬಿ. ರೇವಣಸಿದ್ದಪ್ಪ, ಬಿ.ಮೊಹ್ಮದ್ ಸಿಗ್ಬತ್‍ಉಲ್ಲಾ, ಎಚ್.ನಿಜಗುಣ, ಸಾಹಿತಿ ಚನ್ನಬಸಪ್ಪ ಹುಲಿಕಟ್ಟಿ, ಎಂ.ಬಿ.ಅಣ್ಣಪ್ಪ, ಬಿ.ಮೊಹ್ಮದ್ ಫೈರೋಜ್, ಜಾನಪದಕಲಾವಿದ ಪರಮೇಶ್ವರಪ್ಪ ಕತ್ತಿಗೆ, ಎಂ.ಆರ್.ಸೈಯದ್ ಸನಾಉಲ್ಲಾ, ಎಚ್.ನಿಜಗುಣ, ಮಕ್ಕಳ ತಜ್ಞ ವೈದ್ಯ ಗುಲಾಂನಬಿ, ಜಮಾತೆಇಸ್ಲಾಮಿ ಹಿಂದ್ ಹರಿಹರ ಘಟಕ ಅಧ್ಯಕ್ಷ ಅಬ್ದುಲ್ ಖಯೂಂ ಎಕ್ಕೆಗೊಂದಿ, ಪತ್ರಕರ್ತ ಬಿ.ಮಗ್ದುಮ್ ಸಾಬ್ ಹಾಗೂ ಇತರರಿದ್ದರು.

TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article District Collector G.M. Gangadharaswamy ಜೂ.16 ರಂದು ನಗರಕ್ಕೆ ಸಿಎಂ ಸಂಚಾರ ಮಾರ್ಗದಲ್ಲಿ ಭಾರಿ ಬದಲಾವಣೆ : ಡಿಸಿ
Next Article Political analysis Political analysis | ಮುಂದಿನ ವರ್ಷ ನಾನೇ ಸಿಎಂ ಆಗಿರ್ತೀನಲ್ಲ?

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

LG Havanur | ಹಿಂದುಳಿದ ವರ್ಗಗಳ ಮಂಡಲ್ ವರದಿ: – ಎಲ್.ಜಿ.ಹಾವನೂರ್ ವರದಿಯ ಆಲ್ ಇಂಡಿಯಾ ವರ್ಶನ್!   

Kannada News | Dinamaana.com | 30 -08-2024 1976 ರಲ್ಲಿ ಮಂಡಲ್ ಆಯೋಗದ ಅಧ್ಯಕ್ಷರಾಗಿದ್ದ ಬಿ.ಪಿ.ಮಂಡಲ್ ಬೆಂಗಳೂರಿಗೆ ಬಂದಿದ್ದರು.ಆ…

By Dinamaana Kannada News

Davanagere | ಭರತ್ಯನಾಟ್ಯ ಕಲಾವಿದೆ ಕು.ಮಂದಿರಾಗೆ ರಾಜ್ಯ ಮಟ್ಟದ ಸೇವಾ ರತ್ನ ಪ್ರಶಸ್ತಿ

ದಾವಣಗೆರೆ (Davanagere) : ದಾವಣಗೆರೆ ಭರತ್ಯನಾಟ್ಯ ಕಲಾವಿದರಾದ ಕು.ಮಂದಿರಾ ಇವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಹರ್ಷಿ ಶ್ರೀ ವಾಲ್ಮೀಕಿ ಗುರು…

By Dinamaana Kannada News

ನನ್ನೂರಿನ ರಾಜಕಾರಣದ ಚಿತ್ರಗಳೂ….ನನ್ನ ಕನಸೂ 

೧ ಕೆಲ ದಶಕಗಳ ಹಿಂದೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ-ಹಗರಿಬೊಮ್ಮನಹಳ್ಳಿ ತಾಲೂಕುಗಳೆರೆಡೂ ಸೇರಿ ಒಂದು ಶಾಸಕರ ಮತಕ್ಷೇತ್ರವಿತ್ತು. ಬಹಳ ಹಿಂದುಳಿದ ಪ್ರದೇಶವಾದ…

By Dinamaana Kannada News

You Might Also Like

Daavanagere
ಅಪರಾಧ ಸುದ್ದಿ

ಮನೆ ಕಳ್ಳತನ ಪ್ರಕರಣ:12 ಗಂಟೆಯಲ್ಲಿ ಆರೋಪಿ ಬಂಧನ

By Dinamaana Kannada News
Daavanagere
ತಾಜಾ ಸುದ್ದಿ

ನಿಮ್ಹಾನ್ಸ್ ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭೇಟಿ:ಸಮಗ್ರ ಪರಿಶೀಲನೆ

By Dinamaana Kannada News
Dr. D. Francis
ಅಭಿಪ್ರಾಯ

poem|ಮನವು ಹೇಳದ ಮಾತು:ಡಾ.ಡಿ. ಫ್ರಾನ್ಸಿಸ್

By Dinamaana Kannada News
B. Srinivas
ಅಭಿಪ್ರಾಯ

poem|ತಾಯಂದಿರು:ಬಿ.ಶ್ರೀನಿವಾಸ

By ಬಿ.ಶ್ರೀನಿವಾಸ
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?