ದಾವಣಗೆರೆ (Davanagere): ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ದೇಶಕ್ಕೆ ತುಂಬಲಾರದ ನಷ್ಟ. ಭಾರತದ ಆರ್ಥಿಕತೆ ಉದಾರೀಕರಣಗೊಳಿಸಿ ಕೈಗೊಂಡ ಯೋಜನೆಗಳು ಸಾರ್ವಕಾಲಿಕ ಶ್ರೇಷ್ಠವಾದ್ದು. ಇಂಥ ಅಭಿವೃದ್ಧಿ. ದೂರದೃಷ್ಟಿತ್ವದ, ಎಲ್ಲಾ ವರ್ಗದವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದ ಸಿಂಗ್ ರಂಥ ಮತ್ತೊಬ್ಬ ನಾಯಕ ಇಲ್ಲ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಸಂತಾಪ ಸೂಚಿಸಿದ್ದಾರೆ.
ಭಾರತದ ಆರ್ಥಿಕತೆಯ ದಿಕ್ಕು ಬದಲಿಸಿದ ಆರ್ಥಿಕ ತಜ್ಞ. ಹಣಕಾಸು ಸಚಿವರಾಗಿ ಸಿಂಗ್ ಅವರ ಪಾತ್ರವನ್ನು ರಾಷ್ಟ್ರದ ಆರ್ಥಿಕ ಇತಿಹಾಸದಲ್ಲಿ ಒಂದು ಮಹತ್ವದ ತಿರುವು. ಕೇವಲ ಭಾರತ ದೇಶ ಮಾತ್ರವಲ್ಲ, ಬೇರೆ ದೇಶಗಳ ಅಧ್ಯಕ್ಷರು ಸಹ ಮನಮೋಹನ್ ಸಿಂಗ್ ಅವರ ಸಲಹೆ ಪಡೆಯುತ್ತಿದ್ದರು ಎಂದರೆ ಬುದ್ಧಿವಂತಿಕೆಗೆ ಸಾಕ್ಷಿ. ಕೈಗಾರಿಕೆ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ರಾಜನೀತಿಜ್ಞ, ರಾಷ್ಟ್ರದ ಮೇಲೆ ಅಳಿಸಲಾರದ ಗುರುತು ಅಜರಾಮರ ಎಂದು ಬಣ್ಣಿಸಿದ್ದಾರೆ.
ಎಷ್ಟೇ ಟೀಕೆ, ಟಿಪ್ಪಣಿ, ಆರೋಪ ಬಂದರೂ ಕುಗ್ಗದ ಮತ್ತು ಆಕ್ರೋಶಭರಿತವಾಗಿ ಪ್ರತಿಕ್ರಿಯೆ ನೀಡದ ಮಹಾಮೌನಿಯಾಗಿಯೇ ಕೆಲಸಗಳ ಮೂಲಕ ಉತ್ತರ ಕೊಟ್ಟ ರೀತಿ ಅನನ್ಯ. 1991 ರಲ್ಲಿ ಪಿವಿ ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಭಾರತದ ಆರ್ಥಿಕ ಉದಾರೀಕರಣದ ವಾಸ್ತುಶಿಲ್ಪಿಯಾಗಿದ್ದರು ಎಂದು ತಿಳಿಸಿದ್ದಾರೆ.
ಹಣದುಬ್ಬರ ಮತ್ತು ಜಾಗತಿಕ ತೈಲ ಆಘಾತಗಳ ಅವಧಿಯಲ್ಲಿ ನೀತಿಗಳನ್ನು ಮಾರ್ಗದರ್ಶನ ಮಾಡಿದರು.ಅವರು 1982 ರಿಂದ 1985 ರವರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿದ್ದರು, ಅಲ್ಲಿ ಅವರು ಆರ್ಥಿಕ ಸ್ಥಿರೀಕರಣ ಮತ್ತು ಹಣಕಾಸು ನಿಯಂತ್ರಣದ ಮೇಲೆ ಕೇಂದ್ರೀಕರಿಸಿದರು. ಅವರು ಯೋಜನಾ ಆಯೋಗದ (1985-1987) ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು, ಅಲ್ಲಿ ಅವರು ಭಾರತದ ದೀರ್ಘಾವಧಿಯ ಆರ್ಥಿಕ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಇಂಥ ಮಹಾನ್ ನಾಯಕನ ಚಿರಸ್ಥಾಯಿಯಾಗಿ ಉಳಿಯುತ್ತಾರೆ ಎಂದು ಖಾಲಿದ್ ಅಹ್ಮದ್ ಹೇಳಿದ್ದಾರೆ.
Read also : ಆರ್ಥಿಕ ಬಿಕ್ಕಟ್ಟು ಮೆಟ್ಟಿ ನಿಂತ ಆರ್ಥಿಕ ತಜ್ಞ ಅಸ್ತಂಗತ: ಜಿ. ಬಿ. ವಿನಯ್ ಕುಮಾರ್ ಸಂತಾಪ