Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ಆಯ್ಕೆಯಲ್ಲಿ ರಾಜಕೀಯ ಹಸ್ತಕ್ಷೇಪ: ಗಿರೀಶ್ ದೇವರಮನೆ ಆರೋಪ
ತಾಜಾ ಸುದ್ದಿ

ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ಆಯ್ಕೆಯಲ್ಲಿ ರಾಜಕೀಯ ಹಸ್ತಕ್ಷೇಪ: ಗಿರೀಶ್ ದೇವರಮನೆ ಆರೋಪ

Dinamaana Kannada News
Last updated: November 5, 2025 4:55 am
Dinamaana Kannada News
Share
Davanagere
SHARE

ದಾವಣಗೆರೆ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಲಿರುವ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ಆಯ್ಕೆಯಲ್ಲಿ ರಾಜಕೀಯ ಹಸ್ತಕ್ಷೇಪವಾಗಿದೆ ಎಂದು ಪರಿಸರ ಸಂರಕ್ಷಣಾ ವೇದಿಕೆ ಆರೋಪಿಸಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಯುಕ್ತಾಶ್ರಯದಲ್ಲಿ ನ.5 ರಂದು ಹೈಸ್ಕೂಲು ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸಿರುವ ಸಂಘ ಸಂಸ್ಥೆಗಳಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಆಯ್ಕೆ ಸಂಬಂಧ ಕಳೆದ ಹತ್ತು ದಿನಗಳ ಹಿಂದೆ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪರಿಸರದ ಬಗ್ಗೆ ಹೆಚ್ಚು ಕೆಲಸ ಮಾಡಿರುವ ಪರಿಸರ ಸಂರಕ್ಷಣಾ ವೇದಿಕೆ ಹೆಸರು  ಹೆಚ್ಚಾಗಿ ಕೇಳಿ ಬಂದಿತ್ತು. ಆದರೆ, ಆಯ್ಕೆಪಟ್ಟಿಯಲ್ಲಿ ಹೆಸರು ಇಲ್ಲದಿರುವುದು ಬೇಸರ ತಂದಿದ್ದು ಇದರಲ್ಲಿ ರಾಜಕೀಯ ಹಸ್ತಕ್ಷೇಪವಾಗಿರೋದು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ವೇದಿಕೆಯ ಅಧ್ಯಕ್ಷ ಗಿರೀಶ್ ದೇವರಮನೆ ಆರೋಪಿಸಿದ್ದಾರೆ.

ಪರಿಸರ ಸಂರಕ್ಷಣಾ ವೇದಿಕೆ ನೊಂದಣಿಯಾಗಿರು ಸಂಘಟನೆಯಾಗಿದ್ದು  ಸುಮಾರು 20 ವರ್ಷಗಳಿಂದ  ಯುವಕರನ್ನು ಕಟ್ಟಿಕೊಂಡು ಜಿಲ್ಲಾದ್ಯಂತ  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ  ಪರಿಸರ ಮಿತ್ರ ಕಾರ್ಯಕ್ರಮ, ಪಿಓಪಿ ಗಣೇಶ ಮೂರ್ತಿಗಳ ಜಾಗೃತಿ ಕಾರ್ಯಕ್ರಮ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಜಾಗೃತಿ, ಪಟಾಕಿ ಜಾಗೃತಿ ಹಾಗೂ ಇತರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿದೆ. ಈ ಕಾರ್ಯಕ್ರಮಗಳಲ್ಲಿ ಜಿಲ್ಲಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದಿದ್ದಾರೆ.

Read also : ದಾವಣಗೆರೆ: ಪರಿಶಿಷ್ಟರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ

ಕರ್ನಾಟಕ ಸರ್ಕಾರದ  ಪರಿಸರ ರಾಯಭಾರಿ ವೃಕ್ಷ ಮಾತೆ ಮರದ ತಿಮ್ಮಕ್ಕ ಹಾಗೂ ಇತರ ಮಠಾಧೀಶರು ಮತ್ತು ಅರಣ್ಯ ಇಲಾಖೆ, ಕಾನೂನು ಪ್ರಾಧಿಕಾರ, ಹಾಗೂ ಹಲವು ಸಂಘ ಸಂಸ್ಥೆಗಳ ಜೊತೆ ಸೇರಿ ಗಿಡ ನೆಡುವ ಕಾರ್ಯಕ್ರಮ, ಇತರೆ ಹಲವಾರು ಪರಿಸರ ಸಂರಕ್ಷಣೆ ಕಾರ್ಯಕ್ರಮ ಮಾಡಲಾಗಿದೆ. ನಮ್ಮ ಪರಿಸರ ಸಂರಕ್ಷಣಾ ವೇದಿಕೆ ಇಲ್ಲಿಯವರೆಗೂ ಸರ್ಕಾರ ನೀಡುವ ಯಾವುದೇ ಪ್ರಶಸ್ತಿಗಳಿಗೆ ಅರ್ಜಿಯನ್ನು ಹಾಕಿಲ್ಲ. ಇದರ ಅವಶ್ಯಕತೆಯೂ ಇಲ್ಲ. ಪರಿಸರ ರಕ್ಷಣೆಯ ಜವಾಬ್ದಾರಿಯಿಂದ ನಮ್ಮ ಸಂಘಟನೆಯನ್ನು ನಡೆಸುತ್ತಿದೆ ಎಂದು ಸ್ಪಷ್ಠನೆ ನೀಡಿದ್ದಾರೆ.

ಪ್ರಶಸ್ತಿ ಆಯ್ಕೆಯಲ್ಲಿ ಪರಿಸರ ಸಂರಕ್ಷಣಾ ವೇದಿಕೆಯ ಹೆಸರಿದ್ದರು ರಾಜಕೀಯ ದುರುದ್ದೇಶದಿಂದ  ಹೆಸರನ್ನು ತೆರವುಗೊಳಿಸಿರುವುದು ಬೇಸರ ಮೂಡಿಸಿದೆ. ಯಾರ ನಿರ್ದೇಶನದ ಮೇರೆಗೆ ತೆರೆವುಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ನೀಡಬೇಕು ಎಂದು ಗಿರೀಶ್ ದೇವರಮನಿ ಆಗ್ರಹಿಸಿದ್ದಾರೆ.

TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ದಾವಣಗೆರೆ: ಪರಿಶಿಷ್ಟರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ
Next Article Davanagere ಕರಾಟೆ ಸ್ಪರ್ಧೆ: ಈಶ್ವರಮ್ಮ ಶಾಲೆಯ ತರುಣ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಆಯ್ಕೆಪಟ್ಟಿ ಪ್ರಕಟ, ಆಕ್ಷೇಪಣೆಗಳಿಗೆ ಆಹ್ವಾನ

ದಾವಣಗೆರೆ ಆಗಸ್ಟ್ 13: ದಾವಣಗೆರೆ, ಜಗಳೂರು, ಹೊನ್ನಾಳಿ ಮತ್ತು ನ್ಯಾಮತಿ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇದ್ದ 26…

By Dinamaana Kannada News

ಪ.ಜಾತಿ ಹಾಗೂ ಬುಡಕಟ್ಟು ಉಪಯೋಜನೆ ಶೇ.100 ರಷ್ಟು ಪ್ರಗತಿ ಸಾಧಿಸಲು ಸೂಚನೆ

ದಾವಣಗೆರೆ.ಅ.3 (Davangere) :  ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಯೋಜನೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಬೇಕು ಎಂದು ಅಪರ ಜಿಲ್ಲಾಧಿಕಾರಿ…

By Dinamaana Kannada News

ಮ್ಯಾಂಗೋ ಹೋಟೇಲ್‌ ನಲ್ಲಿ ಜೂಜಾಟ : ಸಿಇಎನ್‌ ಪೊಲೀಸ್ ರ ದಾಳಿ, ರೂ 24 ಲಕ್ಷ ವಶಕ್ಕೆ

ದಾವಣಗೆರೆ (Davanagere): ನಗರದ ಡೆಂಟಲ್ ಕಾಲೇಜ್ ರಸ್ತೆಯಲ್ಲಿರುವ  ಮ್ಯಾಂಗೋ ಹೋಟೇಲ್‌ ನಲ್ಲಿ ಅಂದರ್ ಬಾಹರ್  ಇಸ್ಫೀಟ್  ಜೂಜಾಟದ ಮೇಲೆ ಸಿಇಎನ್ ಪೊಲೀಸ್ ದಾಳಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಹರಿಹರ: ನಿಯಮಬಾಹಿರ ಮಣ್ಣು ಗಣಿಗಾರಿಕೆ ತಡೆಯಲು ಆಗ್ರಹಿಸಿ ಮನವಿ

By Dinamaana Kannada News
Davanagere
ತಾಜಾ ಸುದ್ದಿ

ಮೆಕ್ಕೆಜೋಳದ ಬೆಲೆ ಕುಸಿತ :ಕ್ರಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

By Dinamaana Kannada News
Davanagere
ತಾಜಾ ಸುದ್ದಿ

ತೊಗರಿಬೇಳೆ- ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ:ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

By Dinamaana Kannada News
Davanagere
Blog

ಕೃಷಿ ಉತ್ಪಾದಕತೆಯ ಮೇಲೆ ಹವಾಮಾನ ಬದಲಾವಣೆಯ ಕ್ರಮ : ಕೃಷಿ ಸಚಿವಾಲಕ್ಕೆ ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?