ಹರಿಹರ (Davangere District) : ಪ್ರತಿ ವರ್ಷದಂತೆ ಈ ಬಾರಿಯೂ ಆ.30 ರಿಂದ ಸೆ.09 ರ ವರೆಗೆ 9 ದಿನಗಳ ಕಾಲ ವಿಜೃಂಭಣೆಯಿಂದ ಹರಿಹರದ ಆರೋಗ್ಯ ಮಾತೆಯ ಬಸಲಿಕ ವಾರ್ಷಿಕ ಮಹೋತ್ಸವ-2024 ವಿಜೃಂಭಣೆ ಯಿಂದ ನಡೆಯಲಿದೆ ಎಂದು ಧರ್ಮ ಗುರು ಫಾ.ಕೆ.ಎ.ಜಾರ್ಜ್ ತಿಳಿಸಿದರು.
ನಗರದ ಆರೋಗ್ಯ ಮಾತೆಯ ಬಸಲಿಕದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆ. 30ರ ಶುಕ್ರವಾರ ಸಂಜೆ 5:30ಕ್ಕೆ ನಡೆಯುವ ಧ್ವಜಾರೋಹಣವನ್ನು ಶಿವಮೊಗ್ಗ ಧರ್ಮಾಧ್ಯಕ್ಷ ಪರಮಪೂಜ್ಯ ಡಾ| ಫ್ರಾನ್ಸಿಸ್ ಸೆರಾವೊ ಎಸ್.ಜೆ. ಮತ್ತು ಇಂಧನ ಸಚಿವ ಕೆ.ಜೆ ಜಾರ್ಜ್ ನೆರವೇರಿಸುವುದರೊಂದಿಗೆ ಹರಿಹರದ ಆರೋಗ್ಯ ಮಾತೆಯ ಬಸಲಿಕ ವಾರ್ಷಿಕ ಮಹೋತ್ಸವ-2024 ಚಾಲನೆಯಾಗಲಿದೆ. ಈ ವರ್ಷ ಮೇರಿಮಾತೆಯ ಪರಿಶುದ್ಧ ಜೀವನ-ನಮ್ಮೆಲ್ಲರ ಬಾಳಿಗೆ ಪಾವನತೆಯ ಚೇತನ ಎಂಬ ಧ್ಯೇಯ ವಾಕ್ಯ ದೊಂದಿಗೆ 9 ದಿನಗಳ ಕಾಲ ಆಚರಿಸಲಾಗುತ್ತದೆ ಎಂದು ಹೇಳಿದರು.
ವಿಶೇಷವಾಗಿ ನವೇನ ದಿನಗಳ ಆಚರಣೆ : ಆ.30 ರ ಶುಕ್ರವಾರ ದಿಂದ ಸೆ.07 ರ ಶನಿವಾರದವರೆಗೆ ನಡೆಯಲಿರುವ ನವೀನ ದಿನಗಳಲ್ಲಿ ಪ್ರತಿದಿನ ಸಂಜೆ 5:30ಕ್ಕೆ ಮೆರವಣಿಗೆ, ನವೇನ, ಪುಷ್ಪಾ ರ್ಪಣೆ,ದಿವ್ಯ ಬಲಿಪೂಜೆ,ಪರಮ ಪ್ರಸಾದದ ಆರಾಧನೆ, ರೋಗ ಸೌಖ್ಯಕ್ಕಾಗಿ ಪ್ರಾರ್ಥನೆಗಳು ಮತ್ತು ಅನ್ನ ಸಂತರ್ಪಣೆ ನಡೆಯಲಿವೆ.
ಸೆ.07 ರಂದು ಕಾರವಾರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ|| ಡುಮಿಂಗ್ ಡಯಾಸ್ ಸಮ್ಮುಖದಲ್ಲಿ ಬೆಳಗ್ಗೆ 8:00, 10:30 ಮಧ್ಯಾಹ್ನ 12:00, 3:00ಕ್ಕೆ ಪೂಜೆಗಳು ನಡೆದು ಸಂಜೆ 5:30ಕ್ಕೆ ಸಾಂಭ್ರಮಿಕ ಬಲಿಪೂಜೆ ನಡೆಯಲಿದೆ.
ಅಂದು ಸಂಜೆ 5:30ರ ಪೂಜಾರ್ಪಣೆಯ ನಂತರ ಪರಮ ಪ್ರಸಾದ ದ ವಿಶೇಷ ಆರಾಧನೆ ಹಾಗೂ ರಾತ್ರಿ 8:00 ರಿಂದ 9:00 ರ ವರೆಗೆ ಫಾ॥ ಫ್ರಾಂಕ್ಲಿನ್ ಡಿ’ಸೋಜಾ, ಫಾ।। ರೋಮನ್ ಪಿಂಟೊ,ಬ್ರ, ಟಿ.ಕೆ. ಜಾರ್ಜ್ ಹಾಗೂ ಯೇಸು ಸ್ಪರ್ಶ ತಂಡದವರಿಂದ ರೋಗಿಗಳಿಗೋಸ್ಕರ ವಿಶೇಷ ಪ್ರಾರ್ಥನೆ ಇರುವುದು.
ಸೆ.08 ರ ಭಾನುವಾರದ ಮಹೋತ್ಸವದಲ್ಲಿ ಪೂಜಾರ್ಪಣೆಯು ಬೆಳಗ್ಗೆ 5:15 ಕ್ಕೆ ಕನ್ನಡ, 6:15 ಕ್ಕೆ ತೆಲುಗು, 7:15 ಕ್ಕೆ ಸಿರೋ ಮಲ ಬಾರ್ ವಿಧಿ ಪ್ರಕಾರ ಮಲಯಾಳಂನಲ್ಲಿ ಭದ್ರಾವತಿಯ ಧರ್ಮಾಧ್ಯ ಕ್ಷರಾದ ಪರಮಪೂಜ್ಯ ಡಾ|| ಜೋಸೆಫ್ ಅರುಮಚಾಡತ್ ನಡೆಸಿದರೆ, ಬೆಳಗ್ಗೆ 8:45 ಕ್ಕೆ ತಮಿಳು,10:00 ಕ್ಕೆ ಇಂಗ್ಲೀಷ್ ನಲ್ಲಿ ಕಾರವಾರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ|| ಡುಮಿಂಗ್ ಡಯಾಸ್ ಪೂಜಾರ್ಪಣೆ ಮಾಡುವರು.
ಬೆಳಗ್ಗೆ 10:45 ಕ್ಕೆ ಧರ್ಮಾಧ್ಯಕ್ಷರಿಗೆ ಸ್ವಾಗತ ಬೆಳಗ್ಗೆ 11:00 ಕ್ಕೆ ಶಿವಮೊಗ್ಗ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ|| ಫ್ರಾನ್ಸಿಸ್ ಸೆರಾವೊ ಎಸ್.ಜೆ, ರವರು ಆಮ್ರಮಿಕ ಕನ್ನಡದಲ್ಲಿ ಸಾಂಭ್ರಮಿಕ ಬಲಿಪೂಜೆ ನಡೆಸುವರು, ಮಧ್ಯಾಹ್ನ 1:15 ಕ್ಕೆ ಕೊಂಕಣಿ, 2:30 ಕ್ಕೆ ಯೇಸು ಸ್ಪರ್ಶ ತಂಡ ದಿಂದ ಪರಮ ಪ್ರಸಾದದ ವಿಶೇಷ ಆರಾಧನೆ : ಸಂಜೆ 4:00 ಕ್ಕೆ ಕನ್ನಡ ದಲ್ಲಿ ನಂತರ 5:00 ಗಂಟೆಯಿಂದ ಪುಷ್ಪಾಲಾಂಕೃತ ತೇರಿನ ಮಹಾ ಮೆರವಣಿಗೆಯು ವಿಜೃಂಭಣೆ ಯಿಂದ ನಡೆಯುವುದು. ಸಂಜೆ 7:30 ಕ್ಕೆ ಕನ್ನಡ, 8:30 ಕ್ಕೆ ವಂದನಾರ್ಪಣೆ ಸಲ್ಲಿಸಲಾಗುವುದು.
ಸೆ.09 ರ ಸೋಮವಾರ ಬೆಳಗ್ಗೆ 8:00 ಕ್ಕೆ, 10:30 ಕ್ಕೆ, ಮಧ್ಯಾಹ್ನ 12:00 ಕ್ಕೆ, ಸಂಜೆ 4:00ಕ್ಕೆ ಬಲಿಪೂಜೆಗಳು ಇರುವವು. ಬೆಳಗ್ಗೆ 9:00ಕ್ಕೆ ಯಾತ್ರಿಕರ ವಾಹನಗಳ ಆಶೀರ್ವಚನ ಸಾಯಂಕಾಲ 5:30 ಕ್ಕೆ ಯಾತ್ರಿಕರಿಗೆ ಆಶೀರ್ವಚನಗಳು ನಡೆಯುವುದರೊಂದಿಗೆ ಈ ವರ್ಷದ ವಾರ್ಷಿಕ ಮಹೋತ್ಸವವು ಮುಕ್ತಾಯವಾಗಲಿದೆ. ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿದರು.
ಫಾ.ರಿಚರ್ಡ್ ಮತ್ತು ಫ್ರಾನ್ಸಿಸ್ ಕ್ಷೇವಿಯರ್ ಉಪಸ್ಥಿತರಿದ್ದರು.