ದಾವಣಗೆರೆ,ಸೆ..18 (Davanagere) : ಗ್ಯಾರಂಟಿ ಯೋಜನೆ ಯುವನಿಧಿಯಡಿ ಡಿ.ಬಿ.ಟಿ. ಮೂಲಕ ಹಣ ಸಂದಾಯ ಮಾಡಲಾಗುತ್ತಿದ್ದು, ಯುವನಿಧಿ ಹಣ ಸಂದಾಯವಾಗಲು ಸೆ.25 ರೊಳಗಾಗಿ ಯುವನಿಧಿ ಯೋಜನೆಯ ಫಲಾನುಭವಿಗಳು ಮೊಬೈಲ್ ಮೂಲಕ ಅಥವಾ ದಾವಣಗೆರೆ ಒನ್, ಗ್ರಾಮ ಒನ್ ಸೆಂಟರ್‍ಗಳಲ್ಲಿ ಸೆ.25 ರೊಳಗೆ ಸ್ವಯಂ ದೃಢೀಕರಣ ಮಾಡಿಕೊಳ್ಳಬಹುದು.
ಯುವನಿಧಿ ನೋಂದಣಿಯಲ್ಲಾಗುವ ಸಮಸ್ಯೆಗಳು ಹಾಗೂ ಮಾಹಿತಿಗಾಗಿ ರಾಜ್ಯ ಸಹಾಯವಾಣಿ ಸಂಖ್ಯೆ: 18005999918 ಅಥವಾ ಜಿಲ್ಲಾ ಸಹಾಯವಾಣಿ ಸಂಖ್ಯೆ: 6364698504 ನ್ನು ಸಂಪರ್ಕಿಸಲು ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ.ಡಿ.ತಿಳಿಸಿದ್ದಾರೆ.