ದಾವಣಗೆರೆ ಜು.09 : ಜಿಲ್ಲಾ ಪಂಚಾಯತ್ ಅನಿರ್ಬಂಧಿತ ಅನುದಾನದಡಿ ಶ್ರವಣದೋಷವುಳ್ಳ ವ್ಯಕ್ತಿಗಳು ಸ್ವಯಂ ಉದ್ಯೋಗ ನಡೆಸಲು ಹೊಲಿಗೆ ಯಂತ್ರ 80, ಟಾಕಿಂಗ್ ಲ್ಯಾಪ್‍ಟಾಪ್ 1, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ಮಾರ್ಟ್ ಫೋನ್ 2 ಮತ್ತು ಎಸ್.ಎಸ್.ಎಲ್.ಸಿ ಹಾಗೂ ನಂತರ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ನೀಡಲು ಅರ್ಹ ವಿಕಲಚೇತನ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
ಹೊಲಿಗೆ ಯಂತ್ರ ಬಯಸುವವರು; ಟೈಲರಿಂಗ್ ವರ್ಗ ಪ್ರಮಾಣ ಪತ್ರ ಮತ್ತು ಸಾಕ್ಷರತೆ ಪ್ರಮಾಣ ಪತ್ರ, ವಿಕಲಚೇತನರ ಗುರುತಿನ ಚೀಟಿ (ಯು.ಡಿ.ಐ.ಡಿ) & ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ ಸ್ವಯಂ ಘೋಷಣೆ ಪತ್ರ, ಉದ್ಯೋಗದಲ್ಲಿಲ್ಲದ ಬಗ್ಗೆ ಪ್ರಮಾಣ ಪತ್ರ, ಇತರೆ ಇಲಾಖೆ, ಸಂಸ್ಥಗಳಿಂದ ಹೊಲಿಗೆ ಯಂತ್ರ ಪಡೆದಿಲ್ಲದಿರುವ ಬಗ್ಗೆ ದೃಢೀಕರಣ ಪತ್ರ, ರೂ.20 ಸ್ಟಾಂಪ್ ಪೇಪರ್ ನಲ್ಲಿ ಹೊಲಿಗೆ ಯಂತ್ರ ಮಾರಾಟ ಮಾಡುವುದಿಲ್ಲ ಎಂದು ಸ್ವಯಂ ಘೋಷಣೆ ಪ್ರಮಾಣ ಪತ್ರ, ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ,
ಟಾಕಿಂಗ್ ಲ್ಯಾಪ್‍ಟಾಪ್; ವಿಕಲಚೇತನರ ಗುರುತಿನ ಚೀಟಿ ಯು.ಡಿ.ಐ.ಡಿ, ಸಕ್ಷಮ ಪ್ರಾಧಿಕಾರದಿಂದ ಪಡೆದ ಜಾತಿ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷದ ಅಂಕಪಟ್ಟಿ (ಪ್ರಸ್ತುತ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು 9ನೇ ತರಗತಿ, ಉತ್ತಿರ್ಣರಾದ ಅಂಕ ಪಟ್ಟಿ), ಸಕ್ಷಮ ಪ್ರಾಧಿಕಾರದಿಂದ ನೀಡಿದ ವಾಸಸ್ಥಳ ದೃಢೀಕರಣ ಪತ್ರ, ಇತರೆ ಇಲಾಖೆ, ಸಂಸ್ಥೆ, ವಿಶ್ವವಿದ್ಯಾಲಯಗಳಿಂದ ಟಾಕಿಂಗ್ ಲ್ಯಾಪ್‍ಟಾಪ್ ಪಡೆದಿಲ್ಲ ಎಂಬ ಬಗ್ಗೆ ಸ್ವಯಂ ಘೋಷಣೆ ಪತ್ರ, ಶಾಲೆ, ಕಾಲೇಜಿನಿಂದ ಶಿಫಾರಸ್ಸು ಪತ್ರ, ಲ್ಯಾಪ್‍ಟಾಪ್ ಪರಭಾರೆಯಾಗದಿರುವ ಬಗ್ಗೆ ಸ್ವಯಂ ಘೋಷಣೆ ಪ್ರಮಾಣ ಪತ್ರ, ಪಾಸ್ ಪೋರ್ಟ್ ಸೈಜ್ ಫೋಟೋ .
ಸ್ಮಾರ್ಟ್ ಫೋನ್ ; ವಿಕಲಚೇತನರ ಗುರುತಿನ ಚೀಟಿ ಯು.ಡಿ.ಐ.ಡಿ, ಸಕ್ಷಮ ಪ್ರಾಧಿಕಾರದಿಂದ ಪಡೆದ ಜಾತಿ ಪ್ರಮಾಣ ಪತ್ರ, ಸಕ್ಷಮ ಪ್ರಾಧಿಕಾರದಿಂದ ನೀಡಿದ ವಾಸಸ್ಥಳ ದೃಢೀಕರಣ ಪತ್ರ, ಇತರೆ ಇಲಾಖೆ, ಸಂಸ್ಥೆ, ವಿಶ್ವವಿದ್ಯಾಲಯಗಳಿಂದ ಸ್ಮಾರ್ಟ್ ಫೋನ್ ಪಡೆದಿಲ್ಲ ಎಂಬ ಬಗ್ಗೆ ಸ್ವಯಂ ಘೋಷಣೆ ಪತ್ರ, ಪಾಸ್ ಪೋರ್ಟ್ ಸೈಜ್ ಫೋಟೋದೊಂದಿಗೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರಾದ ನಾಗರಾಜ್ ಡಿಳ್ಳೆಪ್ಪನರ್ 9901738353, ಶೈಲಜಾ ಕೆ.ಎಂ.9482158005 ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಹೊನ್ನಾಳಿ, ಕೆ ಸುಬ್ರಮಣ್ಯಂ 9945738141ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಚನ್ನಗಿರಿ, ಎಂ.ಕೆ.ಶಿವನಗೌಡ 9902105734 ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಜಗಳೂರು, ಶಶಿಕಲಾ ಟಿ. 9945458058, ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಹರಿಹರ, ಚನ್ನಪ್ಪ.ಬಿ 9590829024 ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ದಾವಣಗೆರೆ ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಧಿಕಾರಿ ಕೆ.ಕೆ.ಪ್ರಕಾಶ್ ತಿಳಿಸಿದ್ದಾರೆ.