ದಾವಣಗೆರೆ,ಜು.13 : ದಾವಣಗೆರೆ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ನೇಮಕಾತಿ ಮಾಡಲು ಕಾನೂನು ಪದವಿ ಪಡೆದ 10 ವರ್ಷಗಳ ಕಾಲ ವಕೀಲ ವೃತ್ತಿ ಸೇವಾನುಭವ ಹೊಂದಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದು ತಾತ್ಕಾಲಿಕ ಹುದ್ದೆಯಾಗಿರುತ್ತದೆ. ಜಿಲ್ಲಾಧಿಕಾರಿಗಳ ಕಚೇರಿ ಕೊಠಡಿ 5 ರಲ್ಲಿ ಜೆ.ಹೆಚ್.ಎಂ.ಶಿರಸ್ತೇದಾರರಿಂದ ಅರ್ಜಿ ಪಡೆದು ಇತ್ತೀಚಿನ ಮೂರು ಭಾವಚಿತ್ರ, ಸೇವಾನುಭವ ದೃಢೀಕರಣ ಪತ್ರ, ಬಾರ್ ಕೌನ್ಸಿಲ್ ನೊಂದಣಿ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ, ಪೊಲೀಸ್ ಅಧೀಕ್ಷಕರಿಂದ ಪಡೆದ ಗುಣ, ನಡತೆ ಪ್ರಮಾಣ ಪತ್ರ ಹಾಗೂ ಶೈಕ್ಷಣಿಕ ಅರ್ಹತೆ ದಾಖಲೆಗಳೊಂದಿಗೆ ಜುಲೈ 25 ರೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.