ದಾವಣಗೆರೆ ಜು.22 : ಬಾಲಕರ, ಬಾಲಕಿಯರ ಸರ್ಕಾರಿ ಬಾಲಮಂದಿರದ ಮಕ್ಕಳಿಗೆ ಪ್ರಸಕ್ತ ಸಾಲಿಗೆ ವಿಜ್ಞಾನ, ಗಣಿತ, ದೈಹಿಕ, ಯೋಗ, ಸಂಗೀತ, ಕ್ರಾಫ್ಟ್ ವಿಷಯಗಳಲ್ಲಿ ಪಾಠ ಮಾಡಲು ಅರೆಕಾಲಿಕ ಶಿಕ್ಷಕರ ಸೇವೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ವಿಜ್ಞಾನ, ಗಣಿತ ಹುದ್ದೆ ಸಂಖ್ಯೆ-2, ವಿದ್ಯಾರ್ಹತೆ ಬಿಎಸ್ಸಿ, ಬಿ.ಇಡಿ, 1 ವರ್ಷದ ಅನುಭವ, 25 ರಿಂದ 55 ವರ್ಷ ವಯೋಮಾನದವರಾಗಿರಬೇಕು. ದೈಹಿಕ, ಯೋಗ ಹುದ್ದೆ ಸಂಖ್ಯೆ-2, ವಿದ್ಯಾರ್ಹತೆ ಸಿಪಿಇಡಿ, ಬಿಪಿಇಡಿ ಯೋಗ ಟ್ರೈನಿಂಗ್, 1 ವರ್ಷದ ಅನುಭವ, 25 ರಿಂದ 55 ವರ್ಷ ವಯೋಮಾನದವರಾಗಿರಬೇಕು. ಸಂಗೀತ, ಕ್ರಾಪ್ಟ್ ಹುದ್ದೆ ಸಂಖ್ಯೆ-2, ವಿದ್ಯಾರ್ಹತೆ ಡಿಪ್ಲೋಮಾ, ಹಾರ್ಟ್ ಮತ್ತು ಕ್ರಾಪ್ಟ್ ಪದವಿ, ಮ್ಯೂಸಿಕ್ ಪದವೀಧರರು, 1 ವರ್ಷದ ಅನುಭವ, 25 ರಿಂದ 55 ವರ್ಷ ವಯೋಮಾನದವರಾಗಿರಬೇಕು. ಪಾಠ ಹೇಳುವ ಅರೆಕಾಲಿಕ ಶಿಕ್ಷಕರು ಹುದ್ದೆ ಸಂಖ್ಯೆ-2, ವಿದ್ಯಾರ್ಹತೆ ಬಿಎಸ್ಸಿ, ಬಿ.ಇಡಿ, 1 ವರ್ಷದ ಅನುಭವ, 25 ರಿಂದ 55 ವರ್ಷ ವಯೋಮಾನದವರಾಗಿರಬೇಕು.
ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ ದಿನವಾಗಿರುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ತಿಳಿಸಿದ್ದಾರೆ.