ದಾವಣಗೆರೆ ಆ.07 (DAVANAGERE ): ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಸ್ಟೆನೋಗ್ರಾಫರ್ ಗ್ರೇಡ್ ”ಸಿ” ಮತ್ತು ಸ್ಟೆನೋಗ್ರಾಫರ್ ಗ್ರೇಡ್ ”ಡಿ” ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಮಾನ್ಯತೆ ಪಡೆದ ಮಂಡಳಿಯಿAದ (ಪಿ.ಯು.ಸಿ) ಅಥವ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿರಬೇಕು. ಶೀಘ್ರಲಿಪಿ ಮತ್ತು ಬೆರಳಚ್ಚು ಕೌಶಲ್ಯ ಹೊಂದಿರಬೇಕು. ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ವೆಬೆಸೈಟ್ https://ssc.gov.in or www.ssckkr.kar.nic.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಆಗಸ್ಟ್ 17 ಕೊನೆಯ ದಿನವಾಗಿರುತ್ತದೆ. ಸ್ಟೆನೋಗ್ರಾಫರ್ ಗ್ರೇಡ್ ”ಸಿ” ನಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷಗಳು. ಸ್ಟೆನೋಗ್ರಾಫರ್ ಗ್ರೇಡ್ ”ಡಿ” ನಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 27 ವರ್ಷಗಳು. ಎಸ್ಸಿ,ಎಸ್ಟಿ,ಒ.ಬಿ.ಸಿ/ಇ.ಎಸ್.ಎಮ್ ಅಭ್ಯರ್ಥಿಗಳಿಗೆ ನಿಯಾಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
Reas also : DAVANAGERE NEWS : ಕರಾಮುವಿ: ಪ್ರವೇಶಾತಿಗೆ ಅರ್ಜಿ ಆಹ್ವಾನ
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 080-25502520 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದಾವಣಗೆರೆ. ದೂರವಾಣಿ ಸಂಖ್ಯೆ : 08192259446 ಸಂಪರ್ಕಿಸಬಹುದೆAದು ಉದ್ಯೋಗಾಧಿಕಾರಿ ರವೀಂದ್ರ.ಡಿ ತಿಳಿಸಿದ್ದಾರೆ.