ದಾವಣಗೆರೆ (Davanagere) : ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಡಿ ಕಾರ್ಯ ನಿರ್ವಹಿಸುತ್ತಿರುವ ಪ.ಜಾತಿ, ಪ.ವರ್ಗ, ಹಿಂದುಳಿದ ವರ್ಗಗಳ 22 ವಸತಿ ಶಾಲೆಗಳಲ್ಲಿ ಪ್ರಸಕ್ತ ಸಾಲಿಗೆ 6 ರಿಂದ 10ನೇ ತರಗತಿ (ವಸತಿ ಶಾಲೆ) ಹಾಗೂ ಪದವಿ ಪೂರ್ವ ತರಗತಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು, ಗೌರವಧನದ ಆಧಾರದ ಮೇಲೆ ಅತಿಥಿ ಶಿಕ್ಷಕರು, ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ: ಕನ್ನಡ, ಇಂಗ್ಲೀಷ್, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಉಪನ್ಯಾಸಕರ ತಲಾ 1 ಹುದ್ದೆಗಳಿಗೆ ಎಂ.ಎ, ಎಂ.ಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು. ಗಣಕವಿಜ್ಞಾನ ಉಪನ್ಯಾಸಕರ ಹುದ್ದೆಗೆ ಎಂಎಸ್ಸಿ ಕಂಪ್ಯೂಟರ್ ಸೈನ್ಸ್, ಎಂ.ಸಿ.ಎ, ಬಿ.ಇ & ಸಿ.ಎಸ್ & ಐ.ಎಸ್ ಮತ್ತು ಶಿಕ್ಷಕರ ಹುದೆಗಳಾದ ಕನ್ನಡ, ಆಂಗ್ಲ, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಶಿಕ್ಷಕರು ಸಂಬಂಧಿಸಿದ ವಿಷಯದಲ್ಲಿ ಪದವಿ ಮತ್ತು ಬಿ.ಇಡಿ(ಟಿ.ಇ.ಟಿ ಉತ್ತೀರ್ಣರಾದವರಿಗೆ ಮೊದಲ ಆದ್ಯತೆ), ಗಣಕ ವಿಜ್ಞಾನ ಶಿಕ್ಷಕರು ಪದವಿ ಬಿ.ಎಸ್ಸಿ, ಬಿಸಿಎ, ಬಿ.ಇ, ದೈಹಿಕ ಶಿಕ್ಷಣ ಶಿಕ್ಷಕರು ಬಿ.ಪಿ.ಇಡಿ ವಿದ್ಯಾರ್ಹತೆ ಹೊಂದಿರಬೇಕು.
Read also : ಸವಿತಾ ಸಮಾಜ ಅಭಿವೃದ್ದಿ ನಿಗಮ : ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಅರ್ಹರು ಅರ್ಜಿ ಹಾಗೂ ದೃಢೀಕರಿಸಿದ ದಾಖಲೆಗಳ ಪ್ರತಿಗಳನ್ನು ಜೂನ್ 18 ರ ಒಳಗಾಗಿ ಜಂಟಿ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ, ದಾವಣಗೆರೆ ಇಲ್ಲಿಗೆ ಸಲ್ಲಿಸಬೇಕೆಂದು ಜಂಟಿ ನಿರ್ದೇಶಕರಾದ ನಾಗರಾಜ.ಕೆ ತಿಳಿಸಿದ್ದಾರೆ.