ದಾವಣಗೆರೆ ಏಪ್ರಿಲ್ 22 ( Davanagere):ಹರಿಹರ ತಾಲ್ಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೊಸದಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮದಡಿ ಸಣ್ಣ, ಅತಿಸಣ್ಣ, ಪರಿಶಿಷ್ಟಜಾತಿ, ಹಾಗೂ ಪರಿಶಿಷ್ಟ ಪಂಗಡದ ಅರ್ಹ ರೈತರು ಅರ್ಜಿ ಸಲ್ಲಿಸಬಹುದು.
ಈ ಯೋಜನೆಯಡಿಯಲ್ಲಿ ತೋಟಗಾರಿಕೆ ಬೆಳೆಗಳಾದ ವೀಳ್ಯೆದೆಲೆ, ತೆಂಗು, ಮಾವು, ಸಪೋಟೆ, ಸೀಬೆ, ಅಂಗಾಂಶಬಾಳೆ, ಪಪ್ಪಾಯ, ಕರಿಬೇವು, ಕಾಳುಮೆಣಸು, ಕೋಕೋ, ನೇರಳೆ, ಸೀತಾಫಲ, ಡ್ರ್ಯಾಗಪ್ರೂಟ್ಸ್, ಮಲ್ಲಿಗೆ, ಗುಲಾಬಿ ಇತ್ಯಾದಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಆಸಕ್ತ ರೈತರು ಅಗತ್ಯ ದಾಖಲಾತಿಗಳೊಂದಿಗೆ ಮೇ.10 ರೊಳಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಹರಿಹರ ಕಛೇರಿಗೆ ಅಥವಾ ಆಯಾ ಗ್ರಾಮಪಂಚಾಯತಿಗೆ ಸಲ್ಲಿಸಬಹುದು.
Read also : ರಾಜಕಾರಣದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ಸಿಗಬೇಕು: ಡಾ. ಪ್ರಭಾ ಮಲ್ಲಿಕಾರ್ಜುನ್
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಹೋಬಳಿಮಟ್ಟದ ಸಹಾಯಕ ತೋಟಗಾರಿಕ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ತಿಳಿಸಿದ್ದಾರೆ.