ದಾವಣಗೆರೆ: ಏಷ್ಯನ್ ಪೇಂಟ್ಸ್ ತನ್ನ ಮೊದಲ ಪ್ರೀಮಿಯಂ ಬ್ಯೂಟಿಫುಲ್ ಹೋಮ್ಸ್ ಎಂಬ ಮಲ್ಟಿ ಕೆಟಗರಿ ಡೆಕೋರ್ ಶೋರೂಂ ಅನ್ನು ದಾವಣಗೆರೆಯಲ್ಲಿ ಬುಧವಾರದಿಂದ ಪ್ರಾರಂಭಿಸಿದೆ ಎಂದು ಏಷ್ಯನ್ ಪೇಂಟ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಮಿತ್ ಸಿಂಗಲ್ ತಿಳಿಸಿದರು.
ಪಿ.ಬಿ.ರಸ್ತೆಯಲ್ಲಿನ ವಿನೋಬಾ ನಗರದ ಶ್ರೀ ನಿಮಿಷಾಂಬ ಕಾಂಪ್ಲೆಕ್ಸ್ ನಲ್ಲಿ ನೂತನ ಏಷ್ಯನ್ ಪೇಂಟ್ಸ್ ಬ್ಯೂಟಿಫುಲ್ ಹೋಮ್ಸ್ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರ ಸೇವೆ, ಅನುಭವ ಹೆಚ್ಚಿಸುವ ತಾಂತ್ರಿಕ ಪ್ರವೃತ್ತಿಗಳೊಂದಿಗೆ ವಿಶಿಷ್ಟ, ಆಳವಾದ ಶಾಪಿಂಗ್ ಅನುಭವ ನೀಡಲು ಸಜ್ಜಾಗಿದೆ ಎಂದು ತಿಳಿಸಿದರು.
ನಾಲ್ಕು ಮಹಡಿಗಳಲ್ಲಿ 5000+ ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ದಾವಣಗೆರೆಯ ಬ್ಯೂಟಿಫುಲ್ ಹೋಮ್ಸ್ ಸ್ಟೋರ್ ಒನ್-ಸ್ಟಾಪ್-ಶಾಪ್ ಆಗಿದ್ದು, ಪೀಠೋಪಕರಣಗಳು, ಸ್ನಾನಗೃಹ, ದೀಪಗಳು, ಬಟ್ಟೆಗಳು, ರಗ್ಗುಗಳು, ಮಾಡ್ಯುಲರ್ ಕಿಚನ್ಗಳು ಮತ್ತು ವಾರ್ಡ್ರೋಬ್ಗಳು, ಹಾಸಿಗೆ, ಸುರಕ್ಷಿತ ಪೇಂಟಿಂಗ್ ಸೇವವೆಗಳು ಸೇರಿದಂತೆ ವೈವಿಧ್ಯಮಯ ಶ್ರೇಣಿಯ ಉತ್ಪನ್ನಗಳ ಜತೆ ಗ್ರಾಹಕರಿಗೆ ಸಮಗ್ರ ಪರಿಹಾರಗಳನ್ನು ನೀಡುತ್ತದೆ ಎಂದು ಹೇಳಿದರು.
ಫೈಜಿಟಲ್’ (ಭೌತಿಕ + ಡಿಜಿಟಲ್) ಅನುಭವ ಅಳವಡಿಸಿಕೊಂಡು, ಗ್ರಾಹಕರು ತಮ್ಮ ಮನೆಯ ಅಲಂಕಾರದ ಅಗತ್ಯಗಳಿಗೆ ಅನುಗುಣವಾಗಿ ಉತ್ತಮ ಮತ್ತು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಟ್ಟಿನಲ್ಲಿ ಈ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ ಖರೀದಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರಿಯಾದ ಅಲಂಕಾರ ಮತ್ತು ವಿನ್ಯಾಸವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ ಎಂದು ವಿವರ ನೀಡಿದರು.
ಬ್ಯೂಟಿಫುಲ್ ಹೋಮ್ಸ್ ಸ್ಟೋರ್ ಸಮಗ್ರ ಎಂಡ್-ಟು ಎಂಡ್ ವಿನ್ಯಾಸ ಪರಿಹಾರಗಳನ್ನು ಒದಗಿಸಲು ತಜ್ಞರ ಸಮಾಲೋಚನೆಗಳನ್ನು ಸಹ ನೀಡುತ್ತದೆ, ಇದು ಗ್ರಾಹಕರಿಗೆ ತಮ್ಮ ಕನಸಿನ ಮನೆಗಳಿಗೆ ಜೀವ ತುಂಬಲು ಅನುವು ಮಾಡಿಕೊಡುತ್ತದೆ. ಅಲಂಕಾರ, ಪೀಠೋಪಕರಣಗಳಿಗೆ ಸಂಬಂಧಿಸಿದಂತೆ ದಾವಣಗೆರೆ ವೇಗವಾಗಿ ಬೆಳೆಯುತ್ತಿರುವ ಸ್ಥಳವಾಗಿದೆ. ಆ ನಿಟ್ಟಿನಲ್ಲಿ ಮಾರುಕಟ್ಟೆಯು ಅಲಂಕಾರಿಕ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪ್ರದರ್ಶಿಸಿದೆ ಎಂದರು.
ಗ್ರಾಹಕರು ಅಸಾಂಪ್ರದಾಯಿಕ ಮತ್ತು ಹೊಸ ಉತ್ಪನ್ನಗಳು, ವಿನ್ಯಾಸಗಳು, ಸರಬರಾಜುಗಳು ಮತ್ತು ಆಲೋಚನೆಗಳನ್ನು ಒಂದೇ ಸೂರಿನಡಿ ಹುಡುಕುವ ಅಗತ್ಯವನ್ನು ಮನಗಂಡ ಏಷ್ಯನ್ ಪೇಂಟ್ಸ್ ನಗರದಲ್ಲಿ ತಮ್ಮ ಮೊದಲ ಬ್ಯೂಟಿಫುಲ್ ಹೋಮ್ಸ್ ಮಳಿಗೆಯನ್ನು ಪ್ರಾರಂಭಿಸಿತು, ಇದು ನಗರದ ಜನರಿಗೆ ಒಳಾಂಗಣ ಮತ್ತು ಬಾಹ್ಯ ಅಲಂಕಾರದಲ್ಲಿ ಆಳವಾದ ತಿಳುವಳಿಕೆ ತರಲಿದೆ ಎಂದು ಮಾಹಿತಿ ನೀಡಿದರು.
ಅಸೋಸಿಯೆಟ್ ಉಪಾಧ್ಯಕ್ಷರಾದ ವಿಷ್ಣು ಗೋಯಲ್, ಶ್ಯಾಮ್ ಸ್ವಾಮಿ, ಜನರಲ್ ಮ್ಯಾನೇಜರ್ ಮಧು ವರ್ಮಾ,ಅಸೋಸಿಯೆಟ್ ಜನರಲ್ ಮ್ಯಾನೇಜರ್‌ರಾದ ಅಚಿಂತ್ ಜೈನ್, ಹರಿನಾರಾಯಣ್, ರಿಜಿನಲ್ ಮ್ಯಾನೇಜರ್ ರಾದ ರಾಜೀವ್ ವರ್ಮಾ, ಅಜಯ ಅಂಟೋನಿ ಹಾಗೂ ದಾವಣಗೆರೆ ಶೋ ರೂಂನ ಫ್ರಾಂಚೇಸಿ ಮಾಲೀಕರಾದ ರವಿಶಂಕರ,ಶಿವಯೋಗಿ ಹಾಗೂ ಇತರರು ಇದ್ದರು.