ದಾವಣಗೆರೆ : 5 ದಿನಗಳ ಬ್ಯಾಂಕಿಂಗ್ ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದೇಶದಾದ್ಯಂತ ಪ್ರತಿಭಟನಾ ಮತಪ್ರದರ್ಶನ ಹಿನ್ನಲೆಯಲ್ಲಿ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ದಾವಣಗೆರೆ ಮಂಡಿಪೇಟೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಭಾಗ ಮತಪ್ರದರ್ಶನ ನಡೆಸಿ ಫೋಷಣೆಗಳನ್ನು ಹಾಕಿದರು.
ಈಗಾಗಲೇ ಐಬಿಎ ಹಾಗೂ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ನಡುವೆ 5 ದಿನಗಳ ಬ್ಯಾಂಕಿಂಗ್ ಪದ್ಧತಿಯನ್ನು ಜಾರಿಗೆ ತರುವುದರ ಬಗ್ಗೆ ಒಪ್ಪಂದವಾಗಿ ಅದರ ಅನುಮೋದನೆಗಾಗಿ ಕೇಂದ್ರ ಹಣಕಾಸು ಸೇವೆಗಳ ಇಲಾಖೆಗೆ ಕಳುಹಿಸಲಾಗಿದೆ. ಆದರೆ, ಅಲ್ಲಿ ಅನಗತ್ಯವಾಗಿ ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಆದ್ದರಿಂದ ಕೇಂದ್ರ ಸರಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಬ್ಯಾಂಕ್ ಉದ್ಯೋಗಿಗಳ ನ್ಯಾಯ ಯುತ ವಾದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮುಷ್ಕರದ ಹಾದಿಯು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾನಿರತರು ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
Read also : ದಾವಣಗೆರೆ:10 ದಿನ ಕುಡಿಯುವ ನೀರಿನ ಸರಬರಾಜುವಿನಲ್ಲಿ ವ್ಯತ್ಯಯ
ಜಿಲ್ಲಾ ಯುಎಫ್‌ಬಿಯು ಸಮಿತಿಯ ಪ್ರಮುಖರಾದ ಕೆ.ವಿಶ್ವನಾಥ ಬಿಲ್ಲವ, ಪ್ರದೀಪ್ ಪಾಟೀಲ, ಸುನಿಲ್ ಮ್ಯಾಗೇರಿ, ಎಂ.ಪಿ.ಕಿರಣ್‌ಕುಮಾರ್, ಹೆಚ್.ಎಸ್.ತಿಪ್ಪೇಸ್ವಾಮಿ, ಆರ್.ಆಂಜನೇಯ, ಎಂ.ಡಿ. ವಿದ್ಯಾ ಸಾಗರ್, ಪರಶುರಾಮ್, ಅನುರಾಧ ಮುತಾಲಿಕ್, ದುರ್ಗಪ್ಪ, ವಿಶ್ವಚೇತನ್, ಮೂರ್ತಿ ನಾಯ್ಕ್, ಹೆಚ್.ಜೆ.ಆಶಾ ವಿದ್ಯಾಸಾಗರ್, ವಿಜಯಕುಮಾರ್ ಕೆ, ಸಿದ್ಧಾರ್ಥ, ಬಸವರಾಜ ಡಿ, ದೀಪಾ ಗುಡಿ, ನೇತ್ರಾವತಿ ಮತ್ತಿತರರು ಭಾಗವಹಿಸಿದ್ದರು.
