ನ್ಯಾಮತಿ/ ಹೊನ್ನಾಳಿ (Nyamathi/ Honnali) : ಬ್ಯಾಂಕ್ ದರೋಡೆಯಲ್ಲಿ ದೇಶದಲ್ಲೇ ಕುಖ್ಯಾತರಾಗಿದ್ದ ನಾಲ್ವರು ಖದೀಮರನ್ನು ಪ್ರಾಣದ ಹಂಗು ತೊರೆದು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕ್ ದರೋಡೆಗೆ ಹೊಂಚು ಹಾಕಿದ್ದ ಉತ್ತರ ಪ್ರದೇಶದ ದರೋಡೆಕೋರರಿಗೆ ಭಾನುವಾರ ಹೊನ್ನಾಳಿ ಪೊಲೀಸರು ಎಡೆಮುರಿ ಕಟ್ಟಿದ್ದಾರೆ.
ಈ ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಹಾಗೂ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಬ್ಯಾಂಕ್ ಗಳನ್ನು ದರೋಡೆ ಮಾಡಿದ್ದು, ಮತ್ತೆ ಬ್ಯಾಂಕ್ ಗಳನ್ನು ದರೋಡೆ ಮಾಡಲು 1 ವಾರದ ಹಿಂದೆ ಕರ್ನಾಟಕ ರಾಜ್ಯಕ್ಕೆ ಬಂದು ದಾವಣಗೆರೆ ಉಳಿದುಕೊಂಡು ದರೋಡೆ ಮಾಡಲು ಬ್ಯಾಂಕ್ಗಳನ್ನು ಹೊಂಚು ಹಾಕಿದ್ದರು.
ಕಳೆದ ಎರಡು ದಿನಗಳಿಂದ ಸವಳಂಗ ಗ್ರಾಮದಲ್ಲಿರುವ ಎಸ್ ಬಿಐ ಬ್ಯಾಂಕ್ ಬಳಿ ತಿರುಗಾಡಿ ಮಾಹಿತಿ ಪಡೆದು ರಾತ್ರಿ ಸವಳಂಗ ಗ್ರಾಮದ ಎಸ್ ಬಿ ಐ ಬ್ಯಾಂಕ್ನ್ನು ದರೋಡೆ ಮಾಡಲು ಬಂದಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.
ಉತ್ತರ ಪ್ರದೇಶದ ಬಾದಾಯ್ ಜಿಲ್ಲೆಯ ಕಕ್ರಾಳ ಗ್ರಾಮದ ಗುಡ್ಡು ಆಲಿಯಸ್ ಕಾಲಿಯಾ (45). ಹಜರತ್ ಆಲಿ (50). ಅಸ್ಲಾಂ ಆಲಿಯಾಸ್ ಟನ್ ಟನ್ (55) ಕಮರುದ್ದಿನ್ ಆಲಿಯಾಸ್ ಬಾಬು ಸೆರೆಲಿ(40) ಬಂಧಿತರು.
ಪ್ರಾಣದ ಹಂಗು ತೊರೆದು ಖದೀಮರ ಬೇಟೆ
ಕಾರ್ಯಾಚರಣೆ ವೇಳೆ ಪೇದೆ ಆನಂದ್ ಅವರ ತೋಳಿಗೆ ಮಚ್ಚಿನೇಟು ಬಿದ್ದಿದೆ, ಗುಂಡಿನೇಟಿಗೆ ಒಳಗಾದ ದರೋಡೆಗಾರ ಗುಡ್ಡು (45) ಈ ಇಬ್ಬರು ದಾವಣಗೆರೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಘಟನೆ ನಡೆದ ತಾಲೂಕಿನ ಅರಬಗಟ್ಟೆ ಕ್ರಾಸ್ ಗೆ ಭೇಟೆ ನೀಡಿ ಪರಿಶೀಲಿಸಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹರಿಹರದಿಂದ ಉತ್ತರಪ್ರದೇಶದ ನೋಂದಣೆ ಸಂಖ್ಯೆ ಎರಡು ಕಾರು ಬರುತ್ತಿದ್ದವು, ಹರಿಹರದ ಚೆಕ್ಪೋಸ್ಟ್ ಬಳಿ ನಿಲ್ಲಿಸದೆ ಹಾಗೇ ತಪ್ಪಿಸಿಕೊಂಡಿದ್ದಾರೆ. ಹರಿಹರ ಪೊಲೀಸ್ ರು ಹೊನ್ನಾಳಿ ಹಾಗೂ ನ್ಯಾಮತಿ ಪೊಲೀಸ್ ರಿಗೆ ಮಾಹಿತಿ ನೀಡಿದ್ದಾರೆ. ತಾಲೂಕಿನ ಎಚ್.ಕಡದಕಟ್ಟೆ ಬಳಿ ಹೊನ್ನಾಳಿ ಪೊಲೀಸ್ ರು ಕಾರುಗಳನ್ನು ತಡೆಯಲು ಯತ್ನಿಸಿದ್ದಾರೆ. ನಿಲ್ಲಿಸದೆ ನ್ಯಾಮತಿ ಕಡೆ ಹೋಗಿದ್ದಾರೆ. ನ್ಯಾಮತಿ ಪೊಲೀಸ್ ರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅರಬಗಟ್ಟೆ ಕ್ರಾಸ್ ಬಳಿ ರಾತ್ರಿ 1.30ರ ಸಮಯದಲ್ಲಿ ಓವರ್ ಟೇಕ್ ಮಾಡಿ ಎರಡು ಕಾರುಗಳನ್ನು ನಿಲ್ಲಿಸಿದಾಗ ಕಾರ್ನಲ್ಲಿದ್ದ ದರೋಡೆಕೋರರು ಪೊಲೀಸ್ ರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎಂದು ವಿವರಿಸಿದರು.
ನ್ಯಾಮತಿ ಪೊಲೀಸ್ ಇನ್ಸಪೆಕ್ಟರ್ ರವಿ ಅವರು ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗಾಯಾಳುವನ್ನು ದಾವಣಗೆರೆ ಆಸ್ಪತ್ರೆ ಸೇರಿಸಲಾಗಿದೆ. ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ತಂಡದಲ್ಲಿ ಒಟ್ಟು 7 ಜನರಿರುವ ಬಗ್ಗೆ ಮಾಹಿತಿ ಇದ್ದು ಉಳಿದ ಆರೋಪಿಗಳು ತಪ್ಪಿಸಿಕೊಂಡಿದ್ದು ಪತ್ತೆಗಾಗಿ 2 ತಂಡಗಳನ್ನು ರಚಿಸಲಾಗಿದೆ ಎಂದರು.
ವಾಹನದಲ್ಲಿ ಮಾರಕಾಸ್ತ್ರಗಳು, 4 ಜೀವಂತ ಗುಂಡುಗಳು, ಅಕ್ಸಿಜನ ಸಿಲೆಂಡರ್ ರೆಗ್ಯುಲೇಟರ್, 3 ಕಬ್ಬಿನ ರಾಡ್, 5 ಪ್ಯಾಕೆಟ್ ಮೆಣಸಿನ ಪುಡಿ, 5 ಜೋತೆ ಹ್ಯಾಂಡ್ ಗ್ಲೌಸ್, ಒಂದು ಮಚ್ಚು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ರಾಜಾರಾಮ್ ಉತ್ತರ ಪ್ರದೇಶದ ಬಚೌರ ಗ್ರಾಮ, ಬಾಬುಷಾ ಉತ್ತರ ಪ್ರದೇಶದ ನೌಲಿ ಗ್ರಾಮ, ಅಫೀಜ್ ಪಾರಾರಿಯಾಗಿದ್ದಾರೆ. ಪತ್ತೆಗೆ ಪೊಲೀಸ್ ರ ತಂಡಗಳನ್ನು ರಚಿಸಲಾಗಿದೆ ಎಂದರು.
ಪೊಲೀಸ್ ರ ಕೈಗೆ ಸಿಕ್ಕಿಬಿದ್ದಿರುವ ಉತ್ತರ ಪ್ರದೇಶದ ಆರೋಪಿಗಳ ವಿರುದ್ಧ ದೇಶದ ವಿವಿದೆಡೆಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ, ಜಾರ್ಖಡ್, ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಚನ್ನಗಿರಿ ಉಪವಿಭಾಗದ ಎಎಸ್ಪಿ ಸ್ಯಾಂ ವರ್ಗೀಸ್, ಎಎಸ್ಪಿ ಎಸ್ಪಿ ವಿಜಯ ಸಂತೋಷ್, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್, ನ್ಯಾಮತಿ ಪೊಲೀಸ್ ಇನ್ಸ್ಪೆಕ್ಟರ್ ರವಿ, ಹೊನ್ನಾಳಿ ಇನ್ಸೆಪೆಕ್ಟರ್ ಸುನಿಲ್ ಕುಮಾರ್, ಹಾಗೂ ಹೊನ್ನಾಳಿ, ನ್ಯಾಮತಿ ತಾಲೂಕುಗಳ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.