ದಾವಣಗೆರೆ (Davanagere): ನಗರದ ಬಂಗಾರದ ಅಂಗಡಿಯಲ್ಲಿ ನಡೆದಿದ್ದ 18 ಲಕ್ಷ ಮೌಲ್ಯದ ಬೆಳ್ಳಿ ಬಂಗಾರ ಕಳ್ಳತನ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪ ಹಿನ್ನಲೆಯಲ್ಲಿ ಮೂವರು ಪೊಲೀಸರನ್ನು ಎಸ್ಪಿ ಉಮಾ ಪ್ರಶಾಂತ ಅಮಾನತುಗೊಳಿಸಿದ್ದಾರೆ.
ಬಸವನಗರ ಪೊಲೀಸ ಠಾಣೆಯ ಟಿ.ಮಂಜಪ್ಪ, ಪಿ.ಆಕಾಶ್, ಆರ್‍ಎಂಸಿ ಠಾಣೆಯ ಎಚ್ ಚಂದ್ರಶೇಖರ ಅಮಾನತುಗೊಂಡ ಪೊಲೀಸರು.
ಜ.29 ರಂದು ರಾತ್ರಿ ಗಸ್ತು ಹಾಗೂ ತಪಾಸಣೆಗೆ ನಿಯೋಜನೆಗೊಂಡಿದ್ದರು.
ಪೇದೆ ಮಂಜಪ್ಪ, ಮತ್ತು ಆಕಾಶ್ ಗಸ್ತು ಹೊಣೆ ಹೊತ್ತಿದ್ದರು. ರಾತ್ರಿ ವೇಳೆ ಅನುಮಾನಾಸ್ಪದವಾಗಿ ಸಂಚಾರ ಮಾಡುವವರನ್ನು ಪರಿಶೀಲಿಸಿ ಬೀಟ್ ಪುಸ್ತಕದಲ್ಲಿ ಸಹಿ ಮಾಡುವಂತೆ ಇವರಿಗೆ ಸೂಚಿಸಲಾಗಿತ್ತು. ಚಂದ್ರಶೇಖರಗೆ ಬಾಡಾ ಕ್ರಾಸ್ ಬಳಿ ವಾಹನ ತಪಾಸಣೆಗೆ ನಿಯೋಜನೆ ಮಾಡಲಾಗಿತ್ತು.
ಸರಿಯಾಗಿ ಕರ್ತವ್ಯ ನಿರ್ವಹಿಸದ ಹಿನ್ನಲೆಯಲ್ಲಿ ಜ 29 ರಂದು ಬಂಗಾರದ ಅಂಗಡಿಯ ಕಳ್ಳತನ ನಡೆದ ಆರೋಪಿಗಳು ತಪ್ಪಿಸಿಕೊಂಡಿದ್ದು ಇಲಾಖೆಯ ತನಿಖೆಯಿಂದ ತಿಳಿದು ಬಂದಿದೆ.
Read also : ಜವಾಹರ್ ನವೋದಯ ವಿದ್ಯಾರ್ಥಿಗಳಿಗೂ “ಸಕ್ಷಮ” ವಿಸ್ತರಿಸಲು ಪೋಷಕರ ಮನವಿ