ದಾವಣಗೆರೆ (Davanagere) : ಆಟೋದಲ್ಲಿ ಕಳೆದುಕೊಂಡಿದ್ದ ಬಂಗಾರ & ಬೆಳ್ಳಿಯ ಆಭರಣಗಳನ್ನು ಪತ್ತೆ ಮಾಡುವಲ್ಲಿ ಬಸವನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಹರಿಹರದ ನವೀನತಾಜ್ ಎಂಬ ಮಹಿಳೆ ಸೆ.10 ರಂದು ಬಾಷಾ ನಗರ ಆರ್ಚ ಹತ್ತಿರದ ಅತ್ತೆ ಮತ್ತು ಸಹೋದರಿಯೊಂದಿಗೆ ಒಂದು ಆಟೋವನ್ನು ಹತ್ತಿಕೊಂಡು ನಗರದ ಇಸ್ಲಾಂಪೇಟೆ ಮಸೀದಿ ಬಳಿ ಸುಮಾರು 6 ಲಕ್ಷ ಬೆಲೆ ಬಾಳುವ ಬಂಗಾರದ ಅಭರಣ ಆಟೋದಲ್ಲಿ ಬಿಟ್ಟು ಇಳಿದಿದ್ದಾರೆ. ವೆನಿಟಿ ಬ್ಯಾಗ್ ಇಲ್ಲವೆಂದು ಗೊತ್ತಾಗಿ ಬಳಿಕ ಬಸವನಗರ ಪೊಲೀಸ್ ಠಾಣೆಗೆ ಬಂದ ಮಾಹಿತಿ ನೀಡಿದ್ದಾರೆ.
Read also : Davanagere | ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ
ಬಸವನಗರ ಠಾಣೆಯ ಅಪರಾಧ ಸಿಬ್ಬಂದಿ ಸಿಸಿಟಿವಿ ಪರಿಶೀಲಿಸಿದಾಗ ಕೆಎ 17 ಎಎ 5789 ಆಟೋ ಎಂದು ತಿಳಿದು ಬಂದಿದ್ದು, ಆಟೋ ಚಾಲಕ ದಸ್ತಗಿರಿ ಅವರನ್ನು ಕರೆಯಿಸಿ ವೆನಿಟಿ ಬ್ಯಾಗನ್ನು ಪ್ರಾಮಾಣಿಕವಾಗಿ ವಾಪಸ್ಸು ಕೊಟ್ಟ ಮೇರೆಗೆ ಆಭರಣಗಳನ್ನು ನವೀನತಾಜ್ ರವರಿಗೆ ಹಿಂದಿರುಗಿಸಲಾಯಿತು. ಈ ವೇಳೆ ಆಟೋ ಚಾಲಕನಿಗೆ ಸನ್ಮಾನಿಸಲಾಯಿತು.
ಬಸವನಗರ ಪೋಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗುರುಬಸವರಾಜ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಫಕೃದ್ದೀನ್ ಅಲಿ, ಸುರೇಶ ಆಭರಣಗಳನ್ನು ಪತ್ತೆಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಪೋಲೀಸ್ ಸಿಬ್ಬಂದಿಯವರ ಪತ್ತೆ ಕಾರ್ಯವನ್ನು ಪೋಲೀಸ್ ಉಪಾಧೀಕ್ಷಕರು ದಾವಣಗೆರೆ ಉಪ-ವಿಭಾಗ, ಹೆಚ್ಚುವರಿ ಪೋಲೀಸ್ ಅಧೀಕ್ಷಕರು, ದಾವಣಗೆರೆ ಮತ್ತು ಪೋಲೀಸ್ ಅಧೀಕ್ಷಕರು, ದಾವಣಗೆರೆ ರವರು ಶ್ಲಾಘಿಸಿದ್ದಾರೆ.