ದಾವಣಗೆರೆ ಆ. 2 , Bhadra dam water release : ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ತುಂಗ, ಭದ್ರಾ ಜಲಾಶಯಗಳು ಈಗಾಗಲೇ ಗರಿಷ್ಠ ಮಟ್ಟ ತಲುಪಿರುವುದರಿಂದ ನೀರನ್ನು ನಿರಂತರವಾಗಿ ನದಿಗೆ ಹರಿಸಲಾಗುತ್ತಿದೆ.
ಆಗಸ್ಟ್ 2 ರ ಶುಕ್ರವಾರ ಬೆಳಿಗ್ಗೆಯ ಮಾಹಿತಿಯಂತೆ ಭದ್ರಾ ಜಲಾಶಯ ದ ಒಳಹರಿವು 38,870 ಕ್ಯೂಸೆಕ್ ಇದೆ. ಆದರೆ ಒಳಹರಿವಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಹೊರಹರಿಸಲಾಗುತ್ತಿದ್ದು, 56,636 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಡ್ಯಾಂ ನೀರಿನ ಮಟ್ಟ 182.7 (ಗರಿಷ್ಠ ಮಟ್ಟ : 186) ಅಡಿಯಿದೆ.
ಉಳಿದಂತೆ ಕಳೆದ ತಿಂಗಳೇ ತುಂಗಾ ಡ್ಯಾಂ ಗರಿಷ್ಠ ಮಟ್ಟ ತಲುಪಿತ್ತು. ಪ್ರಸ್ತುತ ಡ್ಯಾಂನ ಒಳಹರಿವು 41,900 ಕ್ಯೂಸೆಕ್ ಇದ್ದು, 41 ಸಾವಿರ ಕ್ಯೂಸೆಕ್ ನೀರನ್ನು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಹೊರ ಹರಿಸಲಾಗುತ್ತಿದೆ.
READ ALSO : JUDGMENT NEWS : ಕೊಲೆಗೆ ಯತ್ನ : ಆರೋಪಿಗೆ 5 ವರ್ಷ ಸಜೆ
ಲಿಂಗನಮಕ್ಕಿ ಡ್ಯಾಂನ ಒಳಹರಿವು 51,961 ಕ್ಯೂಸೆಕ್ ಇದೆ. ಡ್ಯಾಂನಿಂದ 16,913 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 1815 (ಗರಿಷ್ಠ ಮಟ್ಟ : 1819) ಅಡಿಯಿದೆ.
ಜಲಾನಯನ ಪ್ರದೇಶಗಳ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿರುವುದರಿಂದ ಮೂರು ಜಲಾಶಯಗಳ ಒಳಹರಿವಿನಲ್ಲಿ ತುಸು ಇಳಿಕೆ ಕಂಡುಬಂದಿದೆ.