ದಾವಣಗೆರೆ ಆ. 3 (Davangere district ) : ಭದ್ರಾ ಜಲಾಶಯ ದಲ್ಲಿ ಒಳಹರಿವಿನಲ್ಲಿ ಪ್ರಮಾಣ ಇಳಿಕೆಯಾಗಿದೆ. ಆದರೆ ಒಳಹರಿವಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಆ. 3 ರ ಬೆಳಿಗ್ಗೆಯ ಮಾಹಿತಿ ಅನುಸಾರ, ಭದ್ರಾ ಜಲಾಶಯ (Bhadra dam) ಒಳಹರಿವು 30,350 ಕ್ಯೂಸೆಕ್ ಇದೆ. ಡ್ಯಾಂನಿಂದ 56,032 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ಭದ್ರಾ ನದಿ ಮೈದುಂಬಿ ಹರಿಯುತ್ತಿದೆ.
ಉಳಿದಂತೆ ಡ್ಯಾಂನ ನೀರಿನ ಮಟ್ಟವನ್ನು 180. 9 ಅಡಿಗೆ ಕಾಯ್ದುಕೊಳ್ಳಲಾಗಿದೆ. 186 ಅಡಿ ಡ್ಯಾಂನ ಗರಿಷ್ಠ ಮಟ್ಟವಾಗಿದೆ. ಜಲಾನಯನ ಪ್ರದೇಶ (Watershed area)
ವ್ಯಾಪ್ತಿಯಲ್ಲಿ ಮಳೆ ಮುಂದುವರೆದಿರುವುದರಿಂದ, ಒಳಹರಿವಿಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಹೊರ ಹರಿಸಲಾಗುತ್ತಿದೆ.
ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆ (Watershed area)
ಕಳೆದ ವರ್ಷ ಇದೇ ದಿನದಂದು, ಡ್ಯಾಂನಲ್ಲಿ ಕೇವಲ 163. 9 ಅಡಿ ನೀರು ಸಂಗ್ರಹವಾಗಿತ್ತು. ಪ್ರಸ್ತುತ ವರ್ಷ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದ ಪರಿಣಾಮದಿಂದ, ಜಲಾಶಯ ಗರಿಷ್ಠ ಮಟ್ಟಕ್ಕೆ ಬಂದಿದೆ.
READ ALSO : Linganamakki Dam : ಲಿಂಗನಮಕ್ಕಿ ಡ್ಯಾಂನಿಂದ ಭಾರೀ ನೀರು ಶರಾವತಿ ನದಿಗೆ
ಡ್ಯಾಂನ ಒಳಹರಿವು 47,568 ಕ್ಯೂಸೆಕ್ (Bhadra dam level )
ಉಳಿದಂತೆ ತುಂಗಾ ಜಲಾನಯ (Tunga basin) ನ ಪ್ರದೇಶದಲ್ಲಿ ಮಳೆ ಮುಂದುವರಿದಿದೆ. ಆದರೆ ಅಬ್ಬರ ಕಡಿಮೆಯಾಗಿದೆ. ಶನಿವಾರ ಬೆಳಿಗ್ಗೆಯ ಮಾಹಿತಯಂತೆ, ಡ್ಯಾಂನ ಒಳಹರಿವು 47,568 ಕ್ಯೂಸೆಕ್ ಇದೆ. ಈಗಾಗಲೇ ಜಲಾಶಯ ಗರಿಷ್ಠ ಮಟ್ಟ ತಲುಪಿದೆ.
ಈ ಹಿನ್ನೆಲೆಯಲ್ಲಿ ಒಳಹರಿವಿನಷ್ಟೆ ನೀರನ್ನು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಹೊರ ಬಿಡಲಾಗುತ್ತಿದೆ.