ದಾವಣಗೆರೆ ಆ.18 (Davanagere ): ಈ ವರ್ಷ ಮಲೆನಾಡಿನಲ್ಲಾದ ಉತ್ತಮ ಮಳೆಯಿಂದ ಭದ್ರಾ ಜಲಾಶಯ ಭರ್ತಿ ಹಂತಕ್ಕೆ ತಲುಪಿದ್ದು ಇದರಿಂದ ಮಳೆಗಾಲ ಸೇರಿ ಬೇಸಿಗೆ ಬೆಳೆಗೆ ನೀರು ಖಾತರಿಯಾಗಿದ್ದು ಭದ್ರಾ ಜಲಾಶಯದಿಂದ ಎಲ್ಲಾ ರೈತರ ಒಳಿತಿಗಾಗಿ ಬಾಗಿನ ಅರ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಭಾನುವಾರ ಭದ್ರಾ ಜಲಾಶಯದಲ್ಲಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ, ಬಸವರಾಜ್ ವಿ.ಶಿವಗಂಗಾ, ಲತಾ ಮಲ್ಲಿಕಾರ್ಜುನ್ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರೈತ ಮುಖಂಡರೊದಿಗೆ ಬಾಗಿನ ಸಮರ್ಪಣೆ ಮಾಡಿ ಮಾತನಾಡಿದರು.
Read also : Davangere | ಅಹಿಂದ ವರ್ಗದ ಏಳಿಗೆ ಸಹಿಸದ ಬಿಜೆಪಿ : ವಿನಾಯಕ ಬಿ. ಎನ್.
ಭದ್ರಾ ಮಧ್ಯ ಕರ್ನಾಟಕದ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಮತ್ತು ತುಂಗಭದ್ರಾ ನದಿ ಮೂಲಕ ಈ ನೀರು ಹೊಸಪೇಟೆ ಜಲಾಶಯ ಸೇರಲಿದೆ, ಇವೆರಡು ಜಿಲ್ಲೆಯ ಜೀವನಾಡಿಯಾಗಿವೆ. ಜಲಾಶಯ ಭರ್ತಿಯಿಂದ ಒಳ್ಳೆಯ ಬೆಳೆಯಾಗಿ ಇದಕ್ಕೆ ಸೂಕ್ತ ಬೆಲೆಯು ರೈತರಿಗೆ ಸಿಗಲೆಂದು ಹಾರೈಸಿದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ , ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ.ಇಟ್ನಾಳ್, ಭದ್ರಾ ಅಧೀಕ್ಷಕ ಎಂಜಿನಿಯರ್ ಸುಜಾತಾ ಸೇರಿದಂತೆ ಅನೇಕ ರೈತ ಮುಖಂಡರು, ಸಹಸ್ರಾರು ರೈತರು ಭಾಗವಹಿಸಿದ್ದರು.