ದಾವಣಗೆರೆ.ಅ.೧ (Davanagere) : ಭೂಮಾತ ರೈತ ಉತ್ಪಾದಕರ ಕಂಪನಿ ರೈತರ ಬಗ್ಗೆ ಹೊಂದಿರುವ ಕಾಳಜಿ ಶ್ಲಾಘನೀಯ ಎಂದು ದಾವಣಗೆರೆ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ಶ್ರೀಧರ ಮೂರ್ತಿ ಹೇಳಿದರು.
ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ ಸ್ಥಳಿಯ ಭೂ ಮಾತಾ ರೈತ ಉತ್ಪಾದಕರ ಕಂಪನಿ ವತಿಯಿಂದ ಹಮ್ಮಿಕೊಂಡಿದ್ದ 2023 -24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಭೂಮಾತಾ ಕಂಪನಿ ರೈತ ಪರ ಕಾಳಜಿಯೊಂದಿಗೆ ಈ ಭಾಗದ ಅನ್ನದಾತರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದೆ. ದೇಶಕ್ಕೆ ಅನ್ನ ನೀಡುವ ರೈತರ ಬಗ್ಗೆ ಕಾಳಜಿ ಹೊಂದುವ ಈ ರೀತಿಯ ಕಂಪನಿಗಳ ಸಹಕಾರ ಇನ್ನೂ ಹೆಚ್ಚಾಗಬೇಕಿದೆ ಎಂದು ಹೇಳಿದರು.
ಆಧುನಿಕ ಕೃಷಿ ಪದ್ಧತಿ ಅಳವಡಿಕೆಯಿಂದ ರೈತರು ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಿದೆ.ಕೃಷಿ ಇಲಾಖೆಯಿಂದ ಸಾಕಷ್ಟು ಸುಧಾರಿತ ಯಂತ್ರೋಪಕರಣಗಳು, ರಾಸಾಯನಿಕಗಳು ಲಭ್ಯವಿದ್ದು, ಇಲಾಖೆಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಂಪನಿ ಅಧ್ಯಕ್ಷ ಎನ್.ಕೆ.ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ರೈತರ ಶ್ರೇಯೋಭಿವೃದ್ಧಿಗಾಗಿ ಕಂಪನಿ ಹಗಲಿರುಳು ಶ್ರಮಿಸುತ್ತಿದೆ.ಈ ಭಾಗದ ರೈತರ ಬೇಡಿಕೆಗೆ ತಕ್ಕಂತೆ ಅಗತ್ಯ ಪರಿಕರಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.ಇದರ ಹಿಂದೆ ಕಂಪನಿಯ ಆಡಳಿತ ಮಂಡಳಿಯ ಸಹಕಾರ ಸದಾ ಇದೆ ಎಂದರು.
Read also : ಕೃಷಿಹೊಂಡದ ದಡದಲ್ಲಿ ಆಟ ಆಡುವಾಗ ಕಾಲು ಜಾರಿ ಬಿದ್ದು ಇಬ್ಬರು ಮಕ್ಕಳು ಸಾವು, ಒಬ್ಬರು ಪಾರು
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎನ್.ಜಿ.ಕರಿಬಸಪ್ಪ, ನಿರ್ಧೇಶಕರಾದ ಎಸ್.ಎಂ.ಮAಜುನಾಥ್, ಎನ್.ಎಂ.ಬಸವರಾಜ್, ಎ.ಅಶೋಕ, ಎನ್.ಎಚ್.ಗಣೇಶ್, ಎನ್.ಡಿ.ಮಧು, ಎನ್.ಕೆ.ನಾಗರಾಜಪ್ಪ, ಕೆ.ವಿ.ಸುರೇಶ್, ಡಿ.ಆರ್.ಧನ್ಯಕುಮಾರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್.ಕೆ. ಶ್ರೀನಿವಾಸ್, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ವರಪ್ಪ, ಸ್ಥಳಿಯ ಸಂಪನ್ಮೂಲ ವ್ಯಕ್ತಿ ಎಸ್.ಎಚ್.ಸಂತೋಷ್ ಹಾಗೂ ಷೇರುದಾರರು, ರೈತರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕೃಷಿಯಂತ್ರಗಳು, ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿತ್ತು.ಹಲವಾರು ಕಂಪನಿಗಳು ಭಾಗವಹಿಸಿದ್ದವು.ನಾಗನೂರು.ಶಿರಮಗೊಂಡನಹಳ್ಳಿ, ಶಾಮನೂರು, ಬಿಸಲೇರಿ ಸುತ್ತ, ಮುತ್ತಲ ಗ್ರಾಮಸ್ಥರು ಪ್ರಯೋಜನ ಪಡೆದುಕೊಂಡರು.