ದಾವಣಗೆರೆ (Davangere): ದಾವಣಗೆರೆ ತಾಲ್ಲೂಕಿನ ದೊಡ್ಡ ಬೂದಿಹಾಳ್ ಗ್ರಾಮದಲ್ಲಿ ಮಳೆಗೆ ಸರ್ಕಾರಿ ಶಾಲೆಯ ಹಂಚುಗಳು ಉದುರಿ ಬಿದಿದ್ದು, ಮಕ್ಕಳ ಪೋಷಕರಲ್ಲಿ ಆತಂಕ ಉಂಟು ಮಾಡಿದೆ.
ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗಿನ ಸುಮಾರು 32 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಸುಮಾರು 80 ವರ್ಷದ ಶಾಲೆ ಇದಾಗಿದ್ದು, ಮಳೆಗೆ ಶುಕ್ರವಾರ ಬೆಳಿಗ್ಗೆ ಹಂಚುಗಳು ಉದುರಿ ಬಿದಿದ್ದು, ಮಕ್ಕಳ ಪೋಷಕರಲ್ಲಿ ಆತಂಕ ಮನೆ ಮಾಡಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುತ್ತಿದ್ದಾರೆ.
ಶಾಲೆಯಲ್ಲಿ ಒಟ್ಟು ಮೂರು ಕೊಠಡಿಗಳಿದ್ದು, ಒಂದು ಕೊಠಡಿಯಲ್ಲಿ ಮಳೆಗೆ ಹಂಚುಗಳು ಉದುರಿ ಬಿದ್ದಿವೆ. ಇನ್ನೆರೆಡು ಕೊಠಡಿಯಲ್ಲಿ ಇಬ್ಬರು ಶಿಕ್ಷಕರು ಮಕ್ಕಳಿಗೆ ಪಾಠ ಮಾಡಲಾಗುತ್ತಿದ್ದು, ಈ ಕೊಠಡಿಗಳು ಸಹ ಶಿಥಿಲ ವ್ಯವಸ್ಥೆ ತಲುಪಿರುವುದರಿಂದ ಶಿಕ್ಷಕರು, ಪೋಷಕರು ಆತಂಕದಲ್ಲಿದ್ದಾರೆ.
ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಆದಷ್ಟು ಬೇಗ ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಬೇಕು ಎಂದು ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಲಿಂಗರಾಜು. ಎಂ ಗಾಂಧಿನಗರ ಅವರು ಆಗ್ರಹಿಸಿದ್ದಾರೆ.
Read also : DAVANAGERE : ದೀಕ್ಷಾಭೂಮಿ ಯಾತ್ರೆಗೆ ಡಾ|| ಬಿ.ಆರ್.ಅಂಬೇಡ್ಕರ್ ಅನುಯಾಯಿಗಳಿಂದ ಅರ್ಜಿ ಆಹ್ವಾನ
ಸ್ಮಾರ್ಟ್ಸಿಟಿ ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಶಾಲೆ ಕಟ್ಟಡ ದುಸ್ಥಿತಿಯಲ್ಲಿವೆ. ಮೂಲಭೂತ ಸೌಕರ್ಯಗಳು ಹಾಗೂ ಸೌಲಭ್ಯ ವಂಚಿತ ಶಾಲೆಗಳಿವೆ. ಇಂತಹ ದುಸ್ಥಿತಿಯನ್ನ ಕಂಡ ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಲು ಭಯಪಡುತ್ತಿದ್ದಾರೆ ಎಂದರು.
ಶಾಲಾ ಮೇಲ್ವಾವಾಣಿ ಕುಸಿತ, ಸೋರುವ ಚಾವಣಿ, ಬಿರುಕುಬಿಟ್ಟ ಗೋಡೆಗಳ ವಾತಾವರಣ ಇಂದು ಪೋಷಕರಲ್ಲಿ ಅಭದ್ರತೆಯನ್ನು ಹುಟ್ಟುಸುತ್ತಿದ್ದು, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಕ್ಕಳಿಗೆ ಪಠ್ಯ ಚಟುವಟಿಕೆ ಕೈಗೊಳ್ಳಲು ಅನುವು ಮಾಡಿಕೊಡುವಲಿ ವಿಫಲವಾಗಿವೆ. ಇದರಿಂದಾಗಿ ಮಕ್ಕಳ ದಾಖಲಾತಿ ಕ್ಷಿಣಿಸಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ ಎಂದು ತಿಳಿಸಿದ್ದಾರೆ.