ದಾವಣಗೆರೆ (Davanagere): ನಗರದ ವಿವಿಧಡೆ ಬೈಕ್ ಕಳವು ಮಾಡಿದ್ದ ಆರೋಪಿಯನ್ನು ಹದಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 2.63 ಲಕ್ಷ ಮೌಲ್ಯದ 5 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ ತಾಲೂಕು 6 ನೇ ಕಲ್ಲು ತರಳಬಾಳು ನಗರದ ಶಂಕರಪ್ಪ ಎಸ್ ( 35 ) ಬಂಧಿತ ಆರೋಪಿ.
Read also : L G HAVANUR | ಅರಸು ಕಣ್ಣಿಗೆ ಬಿದ್ದ ಹಾವನೂರು
ಆರೋಪಿ ವಿರುದ್ದ ಹದಡಿ ಪೊಲೀಸ್ ಠಾಣೆಯಲ್ಲಿ 02 ಬೈಕ್ ಕಳ್ಳತನ ಪ್ರಕರಣ, ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆ. ಕೆಟಿಜೆ ನಗರ ಪೊಲೀಸ್ ಠಾಣೆ, ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ 01 ಬೈಕ್ ಪ್ರಕರಣಗಳು ಒಟ್ಟು 05 ಬೈಕ್ ಗಳನ್ನು ಪ್ರಕರಣಗಳು ದಾಖಲಾಗಿವೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಂತೋಷ ವಿಜಯ ಕುಮಾರ್ ಹಾಗೂ ಮಂಜುನಾಥ ಜಿ, ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜ ಬಿ.ಎಸ್ , ಮಾಯಕೊಂಡ ವೃತ್ತದ ಸಿಪಿಐ ನಾಗರಾಜ ಡಿ ಮಾರ್ಗದರ್ಶನಲ್ಲಿ ಹದಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಶ್ರೀಶೈಲ ಪಟ್ಟಣಶೆಟ್ಟಿ, ಶಕುಂತಲಾ, ಸಿಬ್ಬಂದಿಗಳಾದ ನಾಗರಾಜ ಕೆ, ವಿಜಯ ಕುಮಾರ, ಜಯಪ್ರಕಾಶ, ಸಂತೋಷ ಕುಮಾರ, ಅರುಣಕುಮಾರ, ಲೋಹಿತ್ ಟಿ, ಅರುಣಕುಮಾರ ಕುರುಬರ, ಜಗದೀಶ ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ ರವರು ಶ್ಲಾಘಿಸಿದ್ದಾರೆ.