ದಾವಣಗೆರೆ : ಪ.ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ದಿಗಾಗಿ ಮೀಸಲಿಟ್ಟಿರುವ ಅನುದಾನವನ್ನು (SCP&TSP) ಇತರೆ ಉದ್ದೇಶಗಳಿಗೆ ಬಳಕೆ ಮಾಡದಂತೆ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಬೇಕು ಎಂದು ಒತ್ತಾಯಿಸಿ ಬಿಎಸ್‌ಪಿ (BSP) ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಉಪ ಜಿಲ್ಲಾಧಿಕಾರಿ ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಬಿಎಸ್‌ಪಿ (BSP) ಜಿಲ್ಲಾಧ್ಯಕ್ಷ ಹನುಮಂತಪ್ಪ ಡಿ, ರಾಜ್ಯ ಸರಕಾರ ಎಸ್ಸಿ-ಎಸ್ಟಿ ಸಮುದಾಯಗಳ ಅಭಿವೃದ್ದಿಗಾಗಿ 2014 ರಲ್ಲಿ (SCP&TSP) ಎಸ್‌ಸಿಪಿ,ಟಿಎಸ್ಪಿ ಕಾಯಿದೆ ಜಾರಿಗೆ ತಂದಿತ್ತು. ಅದರೆ , ಕಾಂಗ್ರೆಸ್ , ಬಿಜೆಪಿ,ಜೆಡಿಎಸ್ ಸರಕಾರಗಳು ಕಾಯಿದೆ ಅನುಷ್ಠಾನ ಮಾಡುವಲ್ಲಿ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ಷಪಡಿಸಿದರು.
ಎಸ್‌ಸಿಪಿ, ಟಿಎಸ್ಪಿ (SCP&TSP) ಯೋಜನೆಯಡಿ ಚಾಲ್ತಿಯಲ್ಲಿದ್ದ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಯೋಜನೆ ರದ್ದು ಮಾಡಿರುವುದು. ಪ್ರಬುದ್ದ ಯೋಜನೆಯಡಿ ವಿದೇಶಗಳಲ್ಲಿಸ್ಕಾಲರ್‌ಗಳಾಗಿ ಸಂಶೋಧನೆ ಕೈಗೊಳ್ಳುವುದನ್ನು ನಿರಾಕರಿಸಿರುವುದು. ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಿರುವುದು ಸರಿಯಲ್ಲ. ಈ ಎಲ್ಲಾ ಯೋಜನೆ ಪುನರ ಪರಿಶೀಲಿಸಿ ಆರಂಭಿಸಬೇಕು, ಅನುದಾನ ದುರುಪಯೋಗ ಬಳಕೆ ಮಾಡಿಕೊಂಡಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ದುರುಪಯೋಗವಾದ ಅನುದಾನ ಎಸ್‌ಸಿಪಿ, ಟಿಎಸ್ಪಿ (SCP&TSP) ಖಾತೆಗೆ ಜಮಾ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿದರು.
ಈ ವೇಳೆ ಬಿಎಸ್ಪಿಯ ಯಶೋಧ, ಸುಜಾತಾ, ಕೃಷ್ಣಕುಮಾರ್, ಎಂ.ಚಂದ್ರಪ್ಪ, ಇತರರು ಇದ್ದರು.