ದಾವಣಗೆರೆ (Davanagere): ನಗರದ ಗುಂಡಿ ವೃತ್ತದಲ್ಲಿ ಬೆಣ್ಣೆಪಡ್ಡು ಮಾಡುತ್ತಿದ್ದ ಒಮಿನಿ ವ್ಯಾನಿಗೆ ಬೆಂಕಿ ತಗುಲಿ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಭಸ್ಮವಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಕಾಂಚನಾ, ಅರ್ಚನ ಎಂಬ ಮಹಿಳೆಯರು ಎಂದಿನಂತೆ ಶನಿವಾರ ಸಂಜೆ ಸಿಎನ್‌ಜಿ ಗ್ಯಾಸ್‌ಒಲೆಯಿಂದ ವ್ಯಾನಿನಲ್ಲಿಯೇ ಪಡ್ಡು ತಯಾರಿಸುತ್ತಿದ್ದಾಗ ಸಿಎನ್‌ಜಿ ಅನಿಲ ಸೋರಿಕೆಯಾಗಿ ಕ್ಷಣ ಮಾತ್ರದಲ್ಲಿ ಬೆಂಕಿ ಇಡೀ ಒಮಿನಿ ವ್ಯಾನಿಗೆ ಆವರಿಸಿಕೊಂಡಿದೆ. ಪರಿಣಾಮ ಒಮಿನಿ ಸೇರಿದಂತೆ ಅದರಲ್ಲಿ ಇದ್ದ ಅಡುಗೆ ಸಾಮಾನು, ಹಣ ಇತರೆ ಪದಾರ್ಥಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸುವ ವೇಳೆಗೆ ಅಗ್ನಿ ಒಮಿನಿ ವ್ಯಾನನ್ನು ಸಂಪೂರ್ಣ ಆಪೋಷನ ಮಾಡಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಬಡಾವಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.