ದಾವಣಗೆರೆ : ಪ್ರಸಕ್ತ ಸಾಲಿಗೆ ಬೆಂಗಳೂರಿನಲ್ಲಿ ಆರ್ಶೀವಾದ ಪೈಪ್ಸ್ ಪ್ರೈ.ಲಿಮಿಟೆಡ್ ಸಂಸ್ಥೆಯವರ ಸಹಯೋಗದೊಂದಿಗೆ ವಸತಿಯುತ ವೃತ್ತಿ ಆಧಾರಿತ ಕೌಶಲ್ಯ ತರಬೇತಿ ಪಡೆಯಲು ಅರ್ಹ ಅಲ್ಪಸಂಖ್ಯಾತರ ಸಮುದಾಯದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಮತ್ತು ಪಾರ್ಸಿ) ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ 2ನೇ ಮಹಡಿ, ಕೊಠಡಿ ಸಂಖ್ಯೆ:44, ದಾವಣಗೆರೆ. ಇಲ್ಲಿ ಪಡೆದು ಜನವರಿ 31 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು.
Read also : ಕೆಲಸದಲ್ಲಿ ನಿರ್ಲಕ್ಷತೆ ವಹಿಸಬೇಡಿ,ಜನರ ಸಮಸ್ಯೆಗಳಿಗೆ ಸ್ಪಂದಿಸಿ:ಡಾ.ಎಲ್.ಮೂರ್ತಿ
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ದಾವಣಗೆರೆ, ದೂ.ಸಂ: 08192-250022 ಹಾಗೂ ವಿಸ್ತರಣಾಧಿಕಾರಿಗಳು ಅಲ್ಪಸಂಖ್ಯಾತರಕಲ್ಯಾಣ ಇಲಾಖೆ ದಾವಣಗೆರೆ ಉಪ ವಿಭಾಗ, ದೂ.ಸಂ: 08192-250066 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
