ವೆರಿಕೋಸ್ ವೇನ್ಸ್ (ಉಬ್ಬಿರುವ ರಕ್ತನಾಳಗಳು) Varicose veins ಸಮಸ್ಯೆಯ ಕಾರಣ ಮತ್ತು ರೋಗ ಲಕ್ಷಣಗಳು ಹಾಗು ಆಯುರ್ವೇದ ಚಿಕಿತ್ಸೆ ದೇಹ ಆರೋಗ್ಯವಾಗಿ ಇರಬೇಕೆಂದರೆ ರಕ್ತ ಸಂಚಾರ ಸರಿಯಾಗಿರಬೇಕು. ಹೃದಯದಿಂದ ರಕ್ತವನ್ನು ಎಲ್ಲಾ ಭಾಗಗಳಿಗೆ ಸರಾಗವಾಗಿ ಸಂಚರಿಸುವಂತೆ ಮಾಡುವುದು ರಕ್ತನಾಳಗಳು ಈ ರಕ್ತನಾಳಗಳಲ್ಲಿ ರಕ್ತ ಬ್ಲಾಕ್ ಆದರೆ ನಾಳಗಳು ಉಬ್ಬಿಕೊಳ್ಳುತ್ತವೆ.
ವೆರಿಕೋಸ್ ವೇನ್ಸ್
ದೇಹದಲ್ಲಿ ರಕ್ತಸಂಚಾರ ನಿರಂತರವಾಗಿ ನಡೆಯುತ್ತಿರುತ್ತದೆ. ಹೆಚ್ಚು ಹೊತ್ತು ನಿಂತಾಗ ಕಾಲಿನಲ್ಲಿನ ರಕ್ತ ಗುರುತ್ವಾಕರ್ಷಣೆಯ ವಿರುದ್ಧವಾಗಿ ಮೇಲಕ್ಕೆ ಹೋಗಲು ಸಾಧ್ಯವಾಗದೆ ಕಾಲಿನಲ್ಲಿ ಅಲ್ಲಲ್ಲಿ ಬ್ಲಾಕ್ ಅದಂತಾಗುತ್ತದೆ. ಇದರಿಂದ ನರಗಳು ಉಬ್ಬಿಕೊಂಡು ನೀಲಿ ಅಥವಾ ಕಪ್ಪು ಬಣ್ಣಕ್ಕೆ ಚರ್ಮ ತಿರುಗುತ್ತದೆ ಇದನ್ನು ಇಂಗ್ಲೀಷಿನಲ್ಲಿ ವೆರಿಕೋಸ್ ವೇಯ್ ಎಂದು ಕರೆಯುತ್ತಾರೆ.
ಸಿರಾಜ ಗ್ರಂಥಿ
ಆಯುರ್ವೇದದಲ್ಲಿ, ಉಬ್ಬಿರುವ ರಕ್ತನಾಳಗಳನ್ನು “ಸಿರಾಜ ಗ್ರಂಥಿ” ಎಂದು ಕರೆಯಲಾಗುತ್ತದೆ. ಆಯುರ್ವೇದದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ಮೂರು ದೋಷಗಳ ವಿಶಿಷ್ಟ ಅನುಪಾತದಿಂದ ಕೂಡಿದ್ದಾನೆ. ಇವುಗಳಲ್ಲಿ ವಾತ , ಪಿತ್ತ , ಮತ್ತು ಕಫ ಸೇರಿವೆ.
ಪ್ರತಿಯೊಂದು ದೋಷವು ನಿರ್ದಿಷ್ಟ ದೇಹದ ಕಾರ್ಯಗಳ ಮೇಲೆ ಪ್ರಭಾವ ಬೀರಬಹುದು ಮತ್ತು ಈ ಅಸಮತೋಲನವು ರೋಗಗಳಿಗೆ ಕಾರಣವಾಗಬಹುದು.
ಹೃದಯದಿಂದ ದೇಹದ ಭಾಗಗಳಿಗೆ ಶುದ್ದ ರಕ್ತ ಹರಿಯುವುದು ಧಮನಿಯಾದರೆ ದೇಹದ ಭಾಗಗಳಿಂದ ಅಶುದ್ಧ ರಕ್ತವನ್ನು ಹೃದಯಕ್ಕೆ ತರುವ ನಾಳಗಳು ಅಪಧಮನಿ ರಕ್ತವನ್ನು ಸರಿಯಾಗಿ ಪರಿಚಲನೆ ಮಾಡಲು ವಿಫಲವಾದಾಗ ರಕ್ತನಾಳಗಳು ರಕ್ತದ ಪೂಲ್ಗಳೊಂದಿಗೆ ಉಬ್ಬುತ್ತವೆ. ಈ ಗೋಚರ ಮತ್ತು ಉಬ್ಬುವ ರಕ್ತನಾಳಗಳು, ಉಬ್ಬಿರುವ ರಕ್ತನಾಳಗಳು ಎಂದು ಕರೆಯಲ್ಪಡುತ್ತವೆ. ಕಾಲುಗಳು ಮತ್ತು ತೊಡೆಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಆದರೆ ದೇಹದಲ್ಲಿ ಎಲ್ಲಿಯಾದರೂ ಬೆಳೆಯಬಹುದು.
ಕಾರಣಗಳು :
- ದೀರ್ಘಕಾಲದ ನಿಂತಿರುವ ಅಥವಾ ಕುಳಿತುಕೊಳ್ಳುವುದು
- ಜಡ. ನಿಷ್ಕ್ರಿಯ ಜೀವನಶೈಲಿ
- ಉಬ್ಬಿರುವ ರಕ್ತನಾಳಗಳು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ ಮತ್ತು ಅನುವಂಶಿಕತೆಯೊಂದಿಗೆ ಸಂಬಂಧ ಹೊಂದಿವೆ.
- ಗರ್ಭಾವಸ್ಥೆ
ಲಕ್ಷಣಗಳು:
- ಕಾಲಿನಲ್ಲಿ ಸೆಳೆತ, ಮೀನಖಂಡದಲ್ಲಿ ಬಿಗಿತ.
- ಕಾಲು ಭಾರವಾದಂತೆ ಭಾಸವಾಗುವುದು.
- ನಾಳಗಳಲ್ಲಿ ರಕ್ತ ಕಟ್ಟಿಕೊಳ್ಳುವುದರಿಂದ ಬಣ್ಣ ಬದಲಾದ ರಕ್ತನಾಳು ಬಲು ಬೇಗನೆ ಗಮನಕ್ಕೆ ಬರುತ್ತವೆ. ಸಾಮಾನ್ಯವಾಗಿ ಈ ನಾಳಗಳು ತಿರುಚಿ, ಉಂದೆಯಾಗಿ ಕಾಣಿಸಿಕೊಳ್ಳುತ್ತವೆ.
- ರೋಗ ಉಲ್ಬಣಗೊಂಡ ಹಾಗೂ ಅಪರೂಪದ ಪ್ರಕರಣಗಳಲ್ಲಿ. ಅಲ್ವರ್ ಆಗಿ ರಕ್ತನಾಳಗಳಿಂದ ರಕ್ತ ಸ್ರಾವವೂ ಆಗಬಹುದು.
- ರಕ್ತನಾಳಗಳ ಉರಿಯೂತ
ರೋಗ ತಡೆಗಟ್ಟುವ ವಿಧಾನ:
ಸರ್ವಾಂಗಾಸನ ಉಬ್ಬಿಕೊಂಡಿರುವ ರಕ್ತನಾಳ ನಿವಾರಣೆ ಮಾಡಲು ಸರ್ವಾಂಗಾಸನವು ತುಂಬಾ ಪರಿಣಾಮಕಾರಿ ವಿಧಾನವಾಗಿದೆ. ಈ ಆಸನ ಮಾಡಲು ನೆಲದ ಮೇಲೆ ಹಾಗೆ ಮಲಗಬೇಕು ಮತ್ತು ಕಾಲುಗಳನ್ನು ನಿಧಾನವಾಗಿ ಮೇಲಕ್ಕೆತ್ತಬೇಕು ಮತ್ತು ದೇಹದ ಕೆಳಭಾಗವನ್ನು ಸ್ವಲ್ಪ ಮೇಲಕ್ಕೆತ್ತಿ. ಕೈಗಳ ಮೇಲಿನ ಭಾಗ, ಭುಜ, ಕುತ್ತಿಗೆ ಮತ್ತು ತಲೆಯ ಭಾಗಕ್ಕೆ ದೇಹದ ಭಾರ ಹಾಕಿ.
Read also : ಫಿಶರ್ ಸಂಕಟದಿಂದ ಬಳಲುತ್ತಿದ್ದೀರಾ?: ಇಲ್ಲಿದೆ ನೋಡಿ ಫಿಶರ್ ಕಾಯಿಲೆ ಕಾರಣ ಮತ್ತು ಪರಿಹಾರ
ಕಡಿಮೆ ಉಪ್ಪಿನ ಆಹಾರ-ಅಧಿಕ ಉಪ್ಪು ಇರುವಂತಹ ಆಹಾರ ಸೇವನೆ ಮಾಡಿದರೆ ಅದರಿಂದ ರಕ್ತವು ನೀರು ಶೇಖರಣೆ ಮಾಡುವಂತೆ ಮಾಡುವ ಪರಿಣಾಮವಾಗಿ ರಕ್ತವು ಹೆಚ್ಚಾಗುವುದು ಮತ್ತು ರಕ್ತನಾಳಗಳು ಉಬ್ಬಿಕೊಳ್ಳುವುದು. ಹೀಗಾಗಿ ಉಪ್ಪು ಕಡಿಮೆ ಇರುವ ಆಹಾರ ಸೇವನೆ ಮಾಡಿ ಮತ್ತು ಇದರಿಂದ ಉಬ್ಬಿರುವ ರಕ್ತನಾಳಗಳಿಗೆ ಪರಿಹಾರ ಸಿಗುವುದು.
ವ್ಯಾಯಾಮದಿಂದ ಒತ್ತಡ ಕಡಿಮೆ
ವ್ಯಾಯಾಮ ಮತ್ತು ತೂಕ ಇಳಿಕೆ-ಕೆಲವೊಂದು ರೀತಿಯ ವ್ಯಾಯಾಮಗಳು ಕಾಲುಗಳಲ್ಲಿ ರಕ್ತ ಸಂಚಾರವನ್ನು ಉತ್ತಮಪಡಿಸುವುದು. ಇದು ಉಬ್ಬಿರುವ ರಕ್ತನಾಳದ ಸಮಸ್ಯೆ ಇರುವವರಿಗೆ ತುಂಬಾ ಲಾಭಕಾರಿ. ಪ್ರತಿನಿತ್ಯ 20 ನಿಮಿಷ ಕಾಲ ನಡೆಯುವುದು ಇದಕ್ಕೆ ಒಳ್ಳೆಯ ವಿಧಾನವಾಗಿದ್ದು, ತೂಕ ಇಳಿಸುವುದು ಕೂಡ ಸರಿಯಾದ ವಿಧಾನವಾಗಿದೆ. ಯಾಕೆಂದರೆ ಅತಿಯಾದ ತೂಕದಿಂದಾಗಿ ಕಾಲುಗಳಲ್ಲಿನ ರಕ್ತನಾಳ ಮೇಲೆ ಒತ್ತಡ ಬೀಳುವುದು.
ಆಯುರ್ವೇದ ಚಿಕಿತ್ಸೆ
ಸಹಚರಾದಿ ತೈಲ-ಉಬ್ಬಿರುವ ರಕ್ತನಾಳಗಳ ಆರಂಭಿಕ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಮತ್ತು ಉಲ್ಬಣಗಳನ್ನು ತಡೆಗಟ್ಟಲು ಇದು ಅತ್ಯುತ್ತಮ ಆಯುರ್ವೇದ ತೈಲವೆಂದು ಪರಿಗಣಿಸಲಾಗಿದೆ. ಸಾರಿವ-ಬೇರುಗಳು ಸಸ್ಯದ ಸಂಯುಕ್ತಗಳನ್ನು ಹೊಂದಿದ್ದು ಅದು ಚರ್ಮದ ಟೋನ್ ಅನ್ನು ಸುಧಾರಿಸುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ
ಜಲೌಕಾವರಚರಣ-ದೇಹವನ್ನು ಶುಚಿಗೊಳಿಸಲು ಆಯುರ್ವೇದದಲ್ಲಿ ಅನೇಕ ರೀತಿಯ ಥೆರಪಿಗಳಿವೆ. ಅದರಲ್ಲಿ ಒಂದು ಲೀಚ್ ಥೆರಪಿ ಅಥವಾ ಜಿಗಣೆ ಹುಳುಗಳ ಮೂಲಕ ದೇಹದಲ್ಲಿನ ಕೆಟ್ಟ ರಕ್ತವನ್ನು ಹೊರತೆಗೆಯಲಾಗುತ್ತದೆ.
ಲೀಚ್ ಥೆರಪಿ ಅಥವಾ ಹಿರುಡೋಥೆರಪಿ ಎನ್ನುವುದು ಔಷಧೀಯ ಜಿಗಣೆ ಬಳಸಿ ದೇಹದಿಂದ ಅಶುದ್ಧ ರಕ್ತವನ್ನು ತೆಗೆದುಹಾಕುವ ವಿಧಾನವಾಗಿದೆ. ಇದು (ರಕ್ತಮೋಕ್ಷಣ) ಅತ್ಯಂತ ಸುಲಭ ಮತ್ತು ಅನುಕೂಲಕರ ವಿಧಾನವೆಂದು ಪರಿಗಣಿಸಲಾಗಿದೆ. ಇದು ಪಂಚಕರ್ಮ (ಐದು ಶುದ್ದೀಕರಣ ವಿಧಾನ) ಗಳಲ್ಲಿ ಒಂದಾಗಿದೆ.
ಸಿರಾವ್ಯಧ-ರಕ್ತದಿಂದ ಸ್ಥಳೀಯ ವಿಷಕಾರಿ ವಸ್ತುಗಳನ್ನು ತೆಗೆದುಹಾಕಲು ಈ ವಿಧಾನವನ್ನು ಕೈಗೊಳ್ಳಲಾಗುತ್ತದೆ. ಇದನ್ನು ಸಿರವ್ಯಾಧ ಎಂದೂ ಕರೆಯುತ್ತಾರೆ. ವಿರೇಚನ ವಿಧಾನ-ಆಯುರ್ವೇದದಲ್ಲಿನ ಪಂಚಕರ್ಮ ಚಿಕಿತ್ಸೆಯ ಭಾಗವಾದ ಈ ವಿರೇಚನ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಉಬ್ಬಿರುವ ರಕ್ತನಾಳಗಳನ್ನು ಸರಿಪಡಿಸಲೂ ಕೂಡ ಆಯುರ್ವೇದದಲ್ಲಿ ವಿರೇಚನ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಡಾ. ಬಿ ಶಿವಕುಮಾರ್ BAMS.MS
ಹಿರಿಯ ವೈದ್ಯಾಧಿಕಾರಿಗಳು ಅಯುಷ್ ಪಂಚಕರ್ಮ ವಿಭಾಗ,
ಚಿಗಟೇರಿ ಜಿಲ್ಲಾ ಆಸ್ಪತ್ರೆ,
ದಾವಣಗೆರೆ – 9886624267