ಚನ್ನಗಿರಿ (Channagiri) : ಬಟ್ಟೆ ತೊಳೆಯಲು ಹೋದ ಮೂವರು ಮಹಿಳೆಯರು ಆಕಸ್ಮಿಕವಾಗಿ ಕೆರೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಚಂದನಾ(18), ದೀಪಾರಾಣಿ(27) ಹಾಗೂ ದಿವ್ಯಾ(24) ಕಾಲು ಜಾರಿ ಬಿದ್ದು ಮೃತಪಟ್ಟ ಮಹಿಳೆಯರಾಗಿದ್ದಾರೆ. ಸೋಮವಾರ ಮಧ್ಯಾಹ್ನದ ಸಮಯದಲ್ಲಿ ಈ ಮೂವರು ಮಹಿಳೆಯರು ಗ್ರಾಮದ ಕೆರೆಗೆ ಬಟ್ಟೆ ತೊಳೆಯಲೆಂದು ಹೋದ ಸಂದರ್ಭದಲ್ಲಿ ಮೊದಲು ಚಂದನಾ(19) ಎಂಬಾಕೆ ಕೆರೆಯಲ್ಲಿ ಬಿದ್ದ ಬಟ್ಟೆಯನ್ನು ತೆಗೆದುಕೊಳ್ಳಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಜತೆಯಲ್ಲಿದ್ದ ದೀಪಾರಾಣಿ(27) ಹಾಗೂ ದಿವ್ಯಾ(24) ವಿವಾಹಿತ ಮಹಿಳೆಯರು ಸಹನಾಳನ್ನು ಕಾಪಾಡಲು ಹೋಗಿ ತಾವು ಕೂಡಾ ಕೆರೆ ನೀರಿನ ಪಾಲಾಗಿದ್ದಾರೆ.
Read also : ಅಧಿಕಾರಕ್ಕೆ ಪಲಾಯನ ಮಾಡುವ ನಿತೀಶ್ ಕುಮಾರ್ ಗೆ ತಕ್ಕ ಪಾಠ ಕಲಿಸಿ: ಸೈಯದ್ ಖಾಲಿದ್ ಅಹ್ಮದ್
ಸ್ಥಳಕ್ಕೆ ಪಿಐ ಕೆ.ಎನ್. ರವೀಶ್ ಭೇಟಿ ನೀಡಿ ಗ್ರಾಮಸ್ಥರ ಸಹಕಾರದಿಂದ ಮಹಿಳೆಯರ ಶವಗಳನ್ನು ಹೊರ ತೆಗೆಸಿದರು. ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ ಮೂವರು ಮಹಿಳೆಯರ ಮನೆಗಳಲ್ಲಿ ಅಕ್ರಂದನ ಮುಗಿಲು ಮುಟ್ಟಿತ್ತು. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.