ದಾವಣಗೆರೆ (Davanagere): ಸ್ವತ್ತು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರನ್ನು ಬಂಧಿಸಿರುವ ಪೊಲೀಸರು 3.5 ಲಕ್ಷ ಮೌಲ್ಯದ ಸ್ವತ್ತುಗಳು ವಶಕ್ಕೆ ಪಡೆದಿದ್ದಾರೆ.
ಚನ್ನಗಿರಿ ತಾಲೂಕಿನ ಹಿರೇಮಳಲಿ ಗ್ರಾಮದ ಪುನೀತ ಕುಮಾರ್ ತೋಟದ ಮಿಷಿನ್ ಮನೆಯಲ್ಲಿದ್ದ 04 ಸಬ್ ರ‍್ಸಿಬಲ್ ಪಂಪ್ ಸೆಟ್‌ನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿತರ ಪತ್ತೆಗೆ ಎಎಸ್ಪಿಗಳಾದ ವಿಜಯ್ ಕುಮಾರ್ ಎಂ ಸಂತೋಷ, ಜಿ ಮಂಜುನಾಥ್ ರವರ ಹಾಗೂ ಚನ್ನಗಿರಿ ಉಪ-ವಿಭಾಗದ ಎ.ಎಸ್.ಪಿ. ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ಇನ್ಸ್ ಪೆಕ್ಟರ್ ಬಾಲಚಂದ್ರ ನಾಯ್ಕ್ ರವರ ನೇತೃತ್ವದಲ್ಲಿ ಪಿಎಸ್‌ಐ ಸುರೇಶ್ ಹಾಗೂ ಪಿಎಸ್‌ಐ ಗುರುಶಾಂತಯ್ಯ ಚನ್ನಗಿರಿ ಪೊಲೀಸ್ ಠಾಣೆಯ ಸಿಬ್ಬಂದಿ ತಂಡ ರಚಿಸಲಾಗಿತ್ತು.
ಮುಬಾರಕ್ ಅಲಿ, ನೌಷದ್ , ಶಾರೂಕ್ ಖಾನ್ ಪತ್ತೆ ಮಾಡಿ ಆರೋಪಿತರಿಂದ ಚನ್ನಗಿರಿ ಠಾಣಾ ವ್ಯಾಪ್ತಿಯ ಹಿರೇಮಳಲಿ, ನಲ್ಲೂರು, ಲಕ್ಷ್ಮೀ ಸಾಗರ ಮತ್ತು ಲಿಂಗದಹಳ್ಳಿ ಹಾಗೂ ಸಂತೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಡದಹಳ್ಳಿ ಗ್ರಾಮಗಳಲ್ಲಿ ಒಟ್ಟು 05 ಕಡೆ ಕಳುವು ಮಾಡಿದ್ದ 2,00,000/- ರೂಪಾಯಿ ಬೆಲೆ ಬಾಳುವ 05 ಸಬ್ ಮರ್ಸಿಬಲ್ ಪಂಪ್ ಸೆಟ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 1,50,000/- ರೂಪಾಯಿ ಬೆಲೆ ಬಾಳುವ ಕೆಎ-17 ಡಿ-4155 ನೇ ಪ್ಯಾಸೆಂಜರ್ ಆಟೋ ಒಟ್ಟು 3,50,000 ರೂ ಬೆಲೆ ಬಾಳುವ ಸಬ್ ಮರ್ಸಿಬಲ್ ಪಂಪ್ ಸೆಟ್ ಮತ್ತು ಪ್ಯಾಸೆಂಜರ್ ಆಟೋ ವಶಪಡಿಸಿಕೊಂಡಿದ್ದಾರೆ.
ಆರೋಪಿತರನ್ನು ಹಾಗೂ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪೊಲೀಸ್ ನಿರೀಕ್ಷಕರಾದ ಬಾಲಚಂದ್ರ ನಾಯ್ಕ್, ಪಿಎಸ್‌ಐ ಸುರೇಶ್ ಮತ್ತು ಪಿಎಸ್‌ಐ ಗುರುಶಾಂತಯ್ಯ ಹಾಗೂ ಸಿಬ್ಬಂದಿಯರಾದ ರವಿಕುಮಾರ್, ಹರೀಶ್ ಕುಮಾರ್, ರಮೇಶ, ಚನ್ನಕೇಶವ, ಇವರುಗಳನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಪ್ರಶಂಸಿಸಿದ್ದಾರೆ.
Read also : ಅಪಘಾತ ಪ್ರಮಾಣ ತಗ್ಗಿಸಲು ಜಿಲ್ಲೆಯ ರಸ್ತೆಗಳ ದುರಸ್ತಿ ಹಾಗೂ ಸುಧಾರಣೆಗೆ ವಿಶೇಷ ಗಮನ ನೀಡಿ :ಡಿಸಿ