Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಪರಾಧ ಸುದ್ದಿ > ಚಿಕ್ಕಜಾಜೂರು |ವಿದ್ಯುತ್ ಅವಘಡ: ಮೂವರ ದುರ್ಮರಣ
ಅಪರಾಧ ಸುದ್ದಿತಾಜಾ ಸುದ್ದಿ

ಚಿಕ್ಕಜಾಜೂರು |ವಿದ್ಯುತ್ ಅವಘಡ: ಮೂವರ ದುರ್ಮರಣ

Dinamaana Kannada News
Last updated: July 24, 2025 4:44 am
Dinamaana Kannada News
Share
Electrical accident: Three people die
SHARE
ಚಿಕ್ಕಜಾಜೂರು (ಚಿತ್ರದುರ್ಗ ಜಿಲ್ಲೆ): ಅಡಿಕೆ ಶೆಡ್ ನಿರ್ಮಿಸಲು ಕಬ್ಬಿಣದ ಕಂಬಿಯನ್ನು ಹಾಕುತ್ತಿರುವಾಗ ವಿದ್ಯುತ್ ಲೈನ್‌ಗೆ ಕಬ್ಬಿಣದ ಕಂಬಿ ತಗುಲಿ ಕಂಬಿಯನ್ನು ಹಿಡಿದಿದ್ದ ಮೂವರು ಮೃತಪಟ್ಟ ಘಟನೆ ಸಮೀಪದ ಕಾಳಘಟ್ಟ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.
ಚಿಕ್ಕಜಾಜೂರು ಸಮೀಪದ ಗ್ಯಾರೆಹಳ್ಳಿ ಗ್ರಾಮದ ರಾಟೆರ ನಾಗರಾಜಪ್ಪ ಎಂಬುವರ ಪುತ್ರ ಜಿ.ಎನ್.ಶ್ರೀನಿವಾಸ್(35), ದಾವಣಗೆರೆ ತಾಲೂಕಿನ ಅಣಬೇರು ಗ್ರಾಮದ ಫಾರೂಕ್ (32), ನಾಸಿರ್ (34) ಮೃತಪಟ್ಟವರು.
ಘಟನೆ ವಿವರ:  ಗ್ಯಾರೆಹಳ್ಳಿ ಗ್ರಾಮದ ರಾಟೆರ ನಾಗರಾಜಪ್ಪ ಎಂಬುವರು ಸಮೀಪದ ಕಾಳಘಟ್ಟ ಗ್ರಾಮದ ತಮ್ಮ ಜಮೀನಿನಲ್ಲಿ ಅಡಿಕೆ ಶೆಡ್ ನಿರ್ಮಿಸಲು ದಾವಣಗೆರೆ ತಾಲೂಕಿನ ಅಣಬೇರು ಗ್ರಾಮದ ಫೈರೂಜ್ ಎಂಬುವರಿಗೆ ಸಾಮಗ್ರಿ ಗುತ್ತಿಗೆ (ಮೆಟೀರಿಯಲ್ ಕಾಂಟ್ರ್ಯಾಕ್ಟ್) ನೀಡಿದ್ದರು. ಫೈರೂಜ್ ಶೆಡ್ ನಿರ್ಮಿಸಲು ಬುಧವಾರ ಬೆಳಗ್ಗೆ ತನ್ನ ಗ್ರಾಮದವರೇ ಆದ ಫಾರೂಕ್ ಮತ್ತು ನಾಸಿರ್ ಅವರನ್ನು ಕೆಲಸಕ್ಕೆ ಕಳುಹಿಸಿದ್ದರು.
Read also : ಜೀವನದಲ್ಲಿ ಸವಾಲು ಎದುರಿಸುವ ಕಠಿಣ ನಿರ್ಧಾರ ಮಾಡಿದರೆ ಸಾಧನೆ ಕಷ್ಟವೇನಲ್ಲ: ಜಿ. ಬಿ. ವಿನಯ್ ಕುಮಾರ್
ಅಡಿಕೆ ಶೆಡ್ ನಿರ್ಮಾಣಕ್ಕೆ ಕಬ್ಬಿಣದ ಕಂಬಿಯನ್ನು ನೆಡಲು ಗುಂಡಿ ತೋಡಿ, ಗುಂಡಿಯಲ್ಲಿ ಕಂಬಿಯನ್ನು ಹಾಕುತ್ತಿರುವಾಗ ಮೇಲೆ ಹಾದು ಹೋಗಿರುವ ವಿದ್ಯುತ್ ಪ್ರೈಮರಿ ತಂತಿಯನ್ನು ಗಮನಿಸದೆ ಮೂವರು ಕಬ್ಬಣದ ಕಂಬಿಯನ್ನು ಎತ್ತಿ ಇಡುತ್ತಿರುವಾಗ ವಿದ್ಯುತ್ ತಂತಿ ತಗುಲಿ ವಿದ್ಯುತ್ ಪ್ರವಹಿಸಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಕೂಡಲೇ ಮೂವರನ್ನು ಸಮೀಪದ ಮುತ್ತುಗದೂರು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಮೂವರನ್ನು ದಾವಣಗೆರೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆದಲ್ಲಿಯೇ ಮೂವರು ಕೊನೆಯುಸಿರೆಳೆದಿದ್ದಾರೆ.
ವಿದ್ಯುತ್ ಅವಘಡದ ಸುದ್ದಿ ತಿಳಿಯುತ್ತಿದ್ದಮತೆ ಚಿಕ್ಕಜಾಜೂರಿನ ಬೆಸ್ಕಾಂ ಇಲಾಖೆಯ ಪ್ರಭಾರಿ ಶಾಖಾಧಿಕಾರಿ ಪಾಲಯ್ಯ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಶೆಡ್ ನಿರ್ಮಿಸುವಾಗ ಕಾರ್ಮಿಕರು ಬೆಸ್ಕಾಂ ಇಲಾಖೆಗೆ ಯಾವುದೇ ಮಾಹಿತಿ ನೀಡದೆ, ಎಲ್ಸಿ ತೆಗೆದುಕೊಳ್ಳದೆ ಕೆಲಸ ಮಾಡುತ್ತಿರುವುದು ದುರಂತಕ್ಕೆ ಕಾರಣವಾಗಿದೆ ಎಂದು ಶಾಖಾಧಿಕಾರಿ ಪಾಲಯ್ಯ ತಿಳಿಸಿದ್ದಾರೆ.
ದಾವಣಗೆರೆ ಆಸ್ಪತ್ರೆಯಲ್ಲಿ ಮೂವರು ಮೃತದೇಹವನ್ನು  ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರಿಗೆ ನೀಡಿದ್ದಾರೆ. ಈ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:Dinamana.comKannada Newsಕನ್ನಡ ಸುದ್ದಿಚಿಕ್ಕಜಾಜೂರುದಿನಮಾನ.ಕಾಂ
Share This Article
Twitter Email Copy Link Print
Previous Article G. B. Vinay Kumar ಜೀವನದಲ್ಲಿ ಸವಾಲು ಎದುರಿಸುವ ಕಠಿಣ ನಿರ್ಧಾರ ಮಾಡಿದರೆ ಸಾಧನೆ ಕಷ್ಟವೇನಲ್ಲ: ಜಿ. ಬಿ. ವಿನಯ್ ಕುಮಾರ್
Next Article Minister S.S. Mallikarjuna ಸಾರ್ವಜನಿಕರ ಕುಂದುಕೊರತೆ ಆಲಿಸಿದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ 

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ : ಜೈನ್ ತಾಂತ್ರಿಕ ಮಹಾವಿದ್ಯಾಲಯ ಇಂಜಿನಿಯರ್ಸ್ ಡೇ ಆಚರಣೆ

ದಾವಣಗೆರೆ : ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಸ್ಮರಣಾರ್ಥವಾಗಿ ಕಾಲೇಜು ಸಭಾಂಗಣದಲ್ಲಿ ಜೈನ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ…

By Dinamaana Kannada News

HARIHARA : ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ

ಹರಿಹರ (HARIHARA )  :   ದುರುದ್ದೇಶದಿಂದ ಮಹಿಳೆ, ಪುರುಷ ಅಥವಾ ಮಕ್ಕಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ಪ್ರಕ್ರಿಯೆಯು…

By Dinamaana Kannada News

ನವೆಂಬರ್ 14|ಮಿನುಗುವ ತಾರೆಗಳು ನಮ್ಮ ಮಕ್ಕಳು: ನಾಳಿನ ಪ್ರಕಾಶಮಾನ ಭವಿಷ್ಯ 

ಭಾರತದ ಮೊದಲ ಪ್ರಧಾನಿ, ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನವಾದ ನವೆಂಬರ್ 14 ಅನ್ನು ದೇಶಾದ್ಯಂತ ಮಕ್ಕಳ ದಿನಾಚರಣೆಯಾಗಿ (ಬಾಲ…

By Dinamaana Kannada News

You Might Also Like

Daavanagere
ಅಪರಾಧ ಸುದ್ದಿ

ಮನೆ ಕಳ್ಳತನ ಪ್ರಕರಣ:12 ಗಂಟೆಯಲ್ಲಿ ಆರೋಪಿ ಬಂಧನ

By Dinamaana Kannada News
Daavanagere
ತಾಜಾ ಸುದ್ದಿ

ನಿಮ್ಹಾನ್ಸ್ ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭೇಟಿ:ಸಮಗ್ರ ಪರಿಶೀಲನೆ

By Dinamaana Kannada News
Dr. D. Francis
ಅಭಿಪ್ರಾಯ

poem|ಮನವು ಹೇಳದ ಮಾತು:ಡಾ.ಡಿ. ಫ್ರಾನ್ಸಿಸ್

By Dinamaana Kannada News
B. Srinivas
ಅಭಿಪ್ರಾಯ

poem|ತಾಯಂದಿರು:ಬಿ.ಶ್ರೀನಿವಾಸ

By ಬಿ.ಶ್ರೀನಿವಾಸ
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?