ದಾವಣಗೆರೆ :ಹೊಸದಾಗಿ ಬರುವ ಯುವ ನಟರ ಸಿನಿಮಾಗಳಿಗೆ ಚಿತ್ರಮಂದಿರಗಳನ್ನು ನೀಡುತ್ತಿಲ್ಲ. ಇದು ಚಿತ್ರಮಂದಿರ ಮಾಫಿಯಾ ನಟ ಝೈದ್ ಖಾನ್ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸದಾಗಿ ಬರುವ ಮುಖಗಳಿಗೆ ಚಿತ್ರಮಂದರಿ ಸಿಗದಂತೆ ನೋಡಿಕೊಳ್ಳುವುದು ಮೊದಲ ಮಾಫಿಯಾವಾದರೆ, ಫೈರಸಿ ಎರಡನೇ ಮಾಪಿಯಾವಾಗಿದೆ. ಇದರ ಬಗ್ಗೆ ಫ್ಲಿಲಂ ಛೇಂಬರ್ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕೆ ನಾವು ಕೈ ಜೋಡಿಸುತ್ತೇವೆ ಎಂದು ಹೇಳಿದರು.
ಆರಂಭದಲ್ಲಿ ನಾವು ಚಿತ್ರಮಂದಿರ ಸಿಗದೇ ಸಾಕಷ್ಟ ನೋವು ಅನುಭವಿಸಿದ್ದೇವೆ. ತಮ್ಮ ಮೊದಲ ಸಿನಿಮಾ ಬನಾರಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಮತ್ತೆ ಸ್ವಲ್ಪ ಚಿತ್ರಮಂದಿರಗಳು ಲಭಿಸಿದವು. ಅದರೆ, ಹೊಸಬರಿಗೆ ತುಂಬ ಕಷ್ಟಗಳು ಬರುತ್ತೇವೆ. ಈ ನಿಟ್ಟಿನಲ್ಲಿ ಪ್ಲಿಲಂ ಛೇಂಬರ್ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕಲ್ಟ್ ಚಲನಚಿತ್ರ ಇದೇ 23 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಬಂದಿದ್ದೇವೆ. ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿದೆ. ಹಂಪಿಯಲ್ಲಿ ಹೆಚ್ಚಿನ ಸಿನಿಮಾ ನಿರ್ಮಾಣ ಮಾಡಿರುವುದರಿಂದ ಅಲ್ಲಿಂದಲೇ ಚಿತ್ರ ಪ್ರಮೋಷನ್ ನಡೆಸುತ್ತಿದ್ದೇವೆ ಎಂದರು.
ನಾಯಕಿ ನಟಿಯಾಗಿ “ಮಲೈಕಾ ಮಾತನಾಡಿ, ನಾನು ದಾವಣಗೆರೆ ಹುಡುಗಿಯಾಗಿದ್ದು, ಜನರು ಚಿತ್ರ ವೀಕ್ಷಣೆ ಮಾಡುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
Read also : ಮಹಿಳೆಯರ ಸುರಕ್ಷತೆಗಾಗಿ ಇರುವ ಈ ವಿಶೇಷ ಕಾನೂನುಗಳ ಬಗ್ಗೆ ನಿಮಗೇನಾದರೂ ತಿಳಿದಿದೆಯೇ?ಇಲ್ಲಿದೆ ಸಂಪೂರ್ಣ ವಿವರ
ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಮಾತನಾಡಿ, ಚಿತ್ರದಲ್ಲಿ ಮನರಂಜನೆಗೆ ಹೆಚ್ಚು ಒತ್ತು ನೀಡಲಾಗಿದೆ. ಅಲ್ಲದೇ ಸಾಮಾಜಿಕ ಸಂದೇಶಗಳು ಈ ಚಿತ್ರದಲ್ಲಿವೇ. ಸಿನಿಮಾ ನೋಡುವ ಮೂಲಕ ಕನ್ನಡ ಚಿತ್ರರಂಗವನ್ನು ಪ್ರೋತ್ಸಾಹ ನೀಡಬೇಕು ಎಂದರು.
