ದಾವಣಗೆರೆ : ಸಂವಿಧಾನ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ದಲಿತ ಸಂಘಟನೆಗಳ ವಿರುದ್ಧ ಅವಹೇಳನಕಾರಿ ಮತ್ತು ಸಮಾಜದಲ್ಲಿ ದ್ವೇಷ ಉಂಟು ಮಾಡುವ/ ದ್ವೇಷಕಾರಿ ಪೋಸ್ಟ್ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘಟನೆ ಜಿಲ್ಲಾ ಸಂಚಾಲಕ ಮಂಜುನಾಥ ಕುಂದವಾಡ ಅವರ ನೇತೃತ್ವದಲ್ಲಿ ಪೂರ್ವ ವಲಯ ಐಜಿಪಿ ಡಾ.ರವಿಕಾಂತೇಗೌಡ, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಎಸ್ಪಿ ಉಮಾಪ್ರಶಾಂತ ಅವರಿಗೆ ಮನವಿ ಸಲ್ಲಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಗುಲಾಮರಅಪ್ಪ ಎಂಬ ಹೆಸರಿನ ಖಾತೆಯಲ್ಲಿ ಉದ್ದೇಶಪೂರ್ವಕವಾಗಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದಲಿತ ನಾಯಕರಿಗೆ ಆಗೌರವ ತೋರುವ ರೀತಿ ಅವಹೇಳನ ನಿರಂತರವಾಗಿ ನಡೆಯುತ್ತಿದೆ. ಸಾಮಾಜಿಕ ಸ್ವಾಸ್ಥ್ಯ ಕೆಡುವಂತಹ ಧಾರ್ಮಿಕ/ಸಾಮಾಜಿಕ ಭಾವನೆಗಳಿಗೆ ಧಕ್ಕೆ ತಂದು ವರ್ಗಗಳ ನಡುವೆ ದ್ವೇಷ ಹುಟ್ಟು ಹಾಕುವ ಕೃತ್ಯದ ಪೋಟೋ ಗಳನ್ನು ಪೇಸ್ ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ . ಭಾರತ ಸಂವಿಧಾನದ ರಚನೆಗೆ ವ್ಯಯವಾದ ಹಣದ ಬಗ್ಗೆ ಅಪಹಾಸ್ಯ ಸೇರಿದಂತೆ ಸಮಾಜ ಸ್ವಾಸ್ಥ್ಯೆಕ್ಕೆ ಹಾಳು ಮಾಡುವ ಇಂತಹ ಕಿಡೇಗೆಡಿಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
Read also :ವೈಕುಂಠ ಏಕಾದಶಿ ಸಂಭ್ರಮ :ಒಂದು ಲಕ್ಷದ ಒಂದು ತುಳಸಿ ಪತ್ರೆ ಅರ್ಪಣೆ..!
ಹೆಚ್ ಮಲ್ಲೇಶಪ್ಪ, ಲಿಂಗರಾಜು ಎಮ್. ಗಾಂಧೀನಗರ, ನಾಗೇಶ್, ಮಾರುತಿ, ಅರುಣ,ಅಜಯ್, ಜೀವನ್,ವಸಂತ್ ಸೇರಿದಂತೆ ಇತರರು ಇದ್ದರು.
