ಸಂವಿಧಾನ ಜಾಗೃತಿಯ ಜಾಥಾ ಪ್ರತಿ ವರ್ಷ ನಡೆಯಲಿ
ಭಾರತ ದೇಶದ 75ನೇ ಗಣರಾಜ್ಯೋತ್ಸವದ ಅಂಗವಾಗಿ ಸಂವಿಧಾನ ಹೆಸರಿನಲ್ಲಿ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾವನ್ನು ಕರ್ನಾಟಕ ರಾಜ್ಯ ಸರ್ಕಾರ ಹಮ್ಮಿಕೊಂಡಿರುವುದು ಅತ್ಯಂತ ಸ್ವಾಗತಾರ್ಹ ವಿಷಯವಾಗಿದೆ.
ಈ ಜಾಥವು 31 ಜಿಲ್ಲೆಗಳಲ್ಲೂ ವಾಹನಗಳ ಮೂಲಕ ಹಳ್ಳಿ ಕೇರಿಗಳಿಗೆ ತಲುಪಿ ಸಂವಿಧಾನದ ಮಹತ್ವ ಮತ್ತು ಡಾ. ಬಿ ಆರ್ ಅಂಬೇಡ್ಕರ್ ರವರ ಸಂವಿಧಾನದ ವಿಚಾರಧಾರೆಗಳನ್ನು ತಿಳಿಸುವಂತಹ ಒಂದು ಮಹಾನ್ ಪ್ರಯತ್ನ ಇಂದು ಸಫಲವಾಗಿದೆ.
ಇಂದಿನ ದಿನಮಾನಕ್ಕೆ ಅಂಬೇಡ್ಕರ್ ಅವರ ವಿಚಾರಧಾರೆಗಳು ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸುತ್ತಿವೆ. ಮುಖ್ಯವಾಗಿ ಧರ್ಮ ನಿರಪೇಕ್ಷತೆ ,ಸಮಗ್ರತೆ, ಭ್ರಾತೃತ್ವ ,ಜಾತ್ಯತೀತ ಮನೋಭಾವಗಳು ಇಂದಿನ ಪ್ರಸ್ತುತಕ್ಕೆ ಅತ್ಯಂತ ಅವಶ್ಯಕವಾಗಿದೆ ಎಂದು ವಿದ್ಯಾರ್ಥಿಗಳ ಮನಸಲ್ಲಿ ಮನದಟ್ಟಾಗಿದೆ.
ಸಂವಿಧಾನ ಜಾಗೃತಿಯ ಜಾಥಾವು ನೊಂದ ಮನಸ್ಸುಗಳಿಗೆ ಸಾಂತ್ವನ
ಜಗತ್ತಿನ ವಿವಿಧಡೆ ಮೂಡಿರುವ ಸಂಘರ್ಷದ ಕಾರ್ಮೊಡಗಳಿಗೆ ಅಂಬೇಡ್ಕರ್ ಅವರ ವಿಚಾರಧಾರೆಗಳು ಬೇಕಾಗಿವೆ. ಧರ್ಮ ,ಜಾತಿ ಹೆಸರಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಶೋಷಣೆಗಳು, ದೌರ್ಜನ್ಯಗಳು, ಸಂವಿಧಾನ ಜಾಗೃತಿಯ ಜಾಥವು ನೊಂದ ಮನಸ್ಸುಗಳಿಗೆ ಸಾಂತ್ವನ ಮತ್ತು ನೆಮ್ಮದಿಯನ್ನ ತಂದು ಕೊಟ್ಟಿದೆ. ಸಂವಿಧಾನ ಎಂದರೆ ಏನು ಎಂದು ಕೇಳುತ್ತಿದ್ದ ಪುಟ್ಟ ಕಂದಮ್ಮಗಳ ಬಾಯಲ್ಲಿ ಇಂದು ಸಂವಿಧಾನ ಪೀಠಿಕೆಯನ್ನು ನಿರರ್ಗಳವಾಗಿ ಹೇಳುವಂತಾಗಿದ್ದಾರೆ.
ಜಾಥಾದ ಮುಖೇನ ಇಂದು ನೀಲಿ ಬಣ್ಣದ ಹಾರಗಳು, ನೀಲಿ ಬಣ್ಣದ ಟೋಪಿಗಳು, ಜೈ ಭೀಮ್, ಜೈ ಭೀಮ್ ಎನ್ನುವ ಘೋಷ ವಾಕ್ಯಗಳು, ನೀಲಿ ಬಣ್ಣದ ಬಾವುಟಗಳು ಮುಗಿಲಿಲ್ಲಿ ಹಾರಾಡುತ್ತಿವೆ. ಅಂಬೇಡ್ಕರ್ ಅವರ ವಿಚಾರಧಾರೆಗಳಿಂದ , ಸಂವಿಧಾನದ ಜಾಗೃತಿ ಜಾಥಾದಿಂದ ಹೋರಾಟದ ಶಕ್ತಿ ಜಾಗೃತಗೊಂಡಿದೆ. ಇಂದು ರಾಜ್ಯ, ರಾಷ್ಟ್ರದಲ್ಲಿ ನಡೆಯುತ್ತಿರುವ ಶೋಷಿತ ನೊಂದ ಮನಸ್ಸುಗಳ ಸಾಂತ್ವಾನದ ದಿವ್ಯ ಔಷಧಿಯಾಗಿ ಜಾಥಾ ಪರಿವರ್ತನೆಯಾಗಿದೆ.
ಹಳ್ಳಿಯ ಕಟ್ಟೆಗಳಲ್ಲಿ ಕೂತು ಸಂವಿಧಾನದ ವಿಚಾರಗಳನ್ನು ಚರ್ಚೆ ಮಾಡುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿದೆ. ವಿಚಾರವಾಗಿದೆ.. ಕ್ರಿಕೆಟ್ ,ಕಬ್ಬಡ್ಡಿ, ಸಿನಿಮಾ, ರಾಜಕೀಯ, ವಿಷಯ ಮಾತನಾಡುತ್ತಿದ್ದ ಜನ ಇಂದು ಅಂಬೇಡ್ಕರ್ ಅವರ ಪ್ರಸ್ತುತತೆ ಬಗ್ಗೆ ಸಂವಿಧಾನ ದ ವಿಷಯಗಳ ಬಗ್ಗೆ ಮನೆಗಳಲ್ಲಿ,ಮನಸ್ಸುಗಳಲ್ಲಿ ಮಾತನಾಡತೊಡಗಿದ್ದಾರೆ.
ನಾಗರಾಜ ಹೆಚ್