ನ್ಯಾಮತಿ (Nyamati) : ತಾಲೂಕಿನಾಧ್ಯಂತ ಕಳೆದ ಎರಡು ವಾರದಿಂದ ಸುರಿಯುತ್ತಿರುವ ಮಳೆ ತಾಲೂಕಿನ ರೈತರಿಗೆ ಶಾಪವಾಗಿ ಪರಿಣಮಿಸಿದೆ , ಸತತ ಸುರಿಯುತ್ತಿರುವ ಮಳೆಗೆ ತಾಲೂಕಿನ ಬಹುತೇಕ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.
ತಾಲೂಕಿನಾದ್ಯಂತ ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆಯವರೆಗೆ ಸುರಿದ ಚಿತ್ತ ಮಳೆಗೆ ಹಲವು ತೋಟ , ಜಮೀನು , ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು , ತಾಲೂಕಿನ ಕಂಚಿಗನಾಳ್ , ಗಂಜೀನಹಳ್ಳಿ , ಚಟ್ನಹಳ್ಳಿ , ಸೋಗಿಲು ಗ್ರಾಮಗಳ ನಡುವಿನ ರಸ್ತೆಗಳ ಮೇಲೆ ನೀರು ಹರಿದು , ಸಂಪೂರ್ಣ ಬಂದ್ ಆಗಿ ಗ್ರಾಮಸ್ಥರು ಪರದಾಡುವಂತಾಯಿತು.
ನಿರAತರ ಮಳೆಯಿಂದಾಗಿ ತಾಲೂಕಿನಾದ್ಯಂತ ಇರುವ ಬಹುತೇಕ ಹಳ್ಳ , ಕೆರೆ ಕಟ್ಟೆ ಹಾಗೂ ಕಾಲುವೆ ಹರಿದಿವೆ , ತಾಲೂಕಿನ ಯರಗನಾಳ್ ಗ್ರಾಮದ ಹೊರವಲಯದಲ್ಲಿರುವ ಗೌಡನಕೆರೆ ನಿರಂತರ ಮಳೆಯಿಂದಾಗಿ ಭರ್ತಿಯಾಗಿದ್ದು ಸೋಮವಾರ ಸಂಜೆ ಕೆರೆ ಕೋಡಿ ಬಿದ್ದು ಕೆರೆಯ ನೀರು ಗ್ರಾಮದ ಮನೆಗಳಿಗೆ ನುಗ್ಗಿ ಹಲವು ಅಪಾರ ಹಾನಿಯಾಗಿದೆ , ಹಲವು ಮನೆಗಳಿಗೆ ಹಾನಿಯಾಗಿದೆ .
Read also : Davanagere | ಅ.23 ರಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಕೆರೆ ಕೋಡಿ ಬಿದ್ದಿರುವ ಬಗ್ಗೆ ಮಾಹಿತಿ ಇಲ್ಲದೆ ಗ್ರಾಮದ ಹೊರವಲಯದಲ್ಲಿರುವ ಗೌಡನಕೆರೆ ಒಡೆದಿದೆ ಎಂದು ಗ್ರಾಮಸ್ಥರು ಆತಂಕಗೊAಡಿದ್ದರು ಎಸ್‌ಟಿಆರ್‌ಎಫ್ ತಂಡ , ಅಗ್ನಿ ಶಾಮಕದಳ ತಂಡ ಬಂದು ಪರಿಶೀಲನೆ ನಡೆಸಿ ನಡೆಸಿ ಕೆರೆ ಭರ್ತಿಯಾಗಿ ಹೆಚ್ಚುವರಿ ನೀರು ಗ್ರಾಮದೊಳಗೆ ಹರಿಯುತ್ತದೆ ಎಂದು ತಿಳಿಸಿದೆ ಇದರಿಂದ ಗ್ರಾಮಸ್ಥರು ಸಮಾಧಾನಗೊಂಡಿದ್ದಾರೆ.
ಯರಗನಾಳ್ ಗ್ರಾಮಕ್ಕೆ ಶಾಸಕರ ಭೇಟಿ : ಯರಗನಾಳ್ ಗ್ರಾಮದ ಹೊರವಲಯದಲ್ಲಿರುವ ಗೌಡನಕೆರೆ ಕೋಡಿಯಿಂದ ಹೆಚ್ಚಾಗಿ ನೀರು ಹರಿದು ಗ್ರಾಮದ ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಹಾನಿಯುಂಟಾದ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ , ಹೊನ್ನಾಳಿ ತಾಲೂಕಿನ ಉಪ ವಿಭಾಗ ಅಧಿಕಾರಿ ಕಂದಾಯ ಇಲಾಖೆ ತಾಲೂಕಿನ ತಹಶೀಲ್ದಾರ್ , ನ್ಯಾಮತಿ ತಾಲೂಕಿನ ಕಾರ್ಯನಿರ್ವಹಣಾ ಅಧಿಕಾರಿಗಳೊಂದಿಗೆ ಚರ್ಚೆಸಿ ಶಾಶ್ವತ ಪರಿಹಾರ ಒದಗಿಸುವಂತೆ ಹಾಗೂ ತಾತ್ಕಾಲಿಕ ಪರಿಹಾರ ನೀಡುವಂತೆ ಶಾಸಕ ಡಿ ಜಿ ಶಾಂತನಗೌಡರು ಸೂಚನೆ ನೀಡಿದರು.