ದಾವಣಗೆರೆ (DAVANAGERE): ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಸಂಸತ್‌ನಲ್ಲಿ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕೂಡಲೇ ವಜಾಗೊಳಿಸುವಂತೆ ಒತ್ತಾಯಿಸಿ ಸಿಪಿಐ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಅಶೋಕ ರಸ್ತೆಯ ಪಂಪಾಪತಿ ಭವನದಿಂದ ಹೊರಟ ಪ್ರತಿಭಟನಾಕಾರರು ಗಾಂಧಿ ಸರ್ಕಲ್‌ಗೆ ತೆರಳಿ ಬಹಿರಂಗ ಸಭೆ ನಡೆಸಿ ಮುಕ್ತಾಯಗೊಳಿಸಿದರು.
ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ.ಆವರಗೆರೆ ಚಂದ್ರು, ದೇಶದ ಇತಿಹಾಸ, ಚರಿತ್ರೆ ತಿಳಿಯದ, ಸಂಸ್ಕೃತಿ ಮತ್ತು ಸಹಬಾಳ್ವೆ ಪರಿಚಯ ಇಲ್ಲದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸಂಪುಟದಿAದ ವಜಾಗೊಳಿಸಬೇಕು. ವ್ಯಾಪಾರಿ ಮನೋಭಾವ ಹೊಂದಿರುವ ಇಂತಹ ಗೃಹಮಂತ್ರಿಯನ್ನು ಕೂಡಲೇ ರಾಷ್ಟçಪತಿಗಳು ಮಧ್ಯೆ ಪ್ರವೇಶಿಸಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಕಾಂ.ಎಚ್.ಜಿ.ಉಮೇಶ್, ಸಿಪಿಐ ಜಿಲ್ಲಾ ಮಂಡಳಿ ಸದಸ್ಯ ಜಯಣ್ಣ ಮಾತನಾಡಿದರು.
ಸಿಪಿಐ ಜಿಲ್ಲಾ ಖಜಾಂಚಿ ಮೊಹಮ್ಮದ್ ರಫೀಕ್, ಮುಖಂಡರಾದ ಮಹಮ್ಮದ್ ಭಾಷಾ ಜಗಳೂರು, ಸಿ.ರಮೇಶ್, ಶೇಖರ ನಾಯಕ, ಸುರೇಶ್, ತಿಪ್ಪೇಶ್, ಜೀವನ್, ದೇವೇಂದ್ರಪ್ಪ, ಸರೋಜಾ, ನಿಟುವಳ್ಳಿ ಬಸವರಾಜ್, ಕೆ.ಜಿ.ಶಿವಮೂರ್ತಿ, ತಿಮ್ಮಣ್ಣ, ಎಚ್.ಎಸ್.ಚಂದ್ರು, ಮರಿಯಪ್ಪ ರಂಗನಾಥ್ ಸೇರಿದಂತೆ ಸಿಪಿಐ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Read also : DAVANAGERE | ವೃತ್ತಿ ನಾಟಕ ಶಿಬಿರಕ್ಕೆ ಅರ್ಜಿ ಆಹ್ವಾನ