ದಾವಣಗೆರೆ: ಯುವಕನನ್ನು ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿರುವ ಘಟನೆ ಸೋಮವಾರ ತಡರಾತ್ರಿ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಬಾಡಾ ರಸ್ತೆಯ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಸಂತೆಬೆನ್ನೂರು ನಿವಾಸಿ ಸಂತೋಷ (32) ಬರ್ಬರವಾಗಿ ಕೊಲೆಯಾದ ಯುವಕ. ಗಾರೆ ಕೆಲಸ ಮಾಡುತ್ತಿದ್ದ ಸಂತೋಷನ ಮೇಲೆ ಮೂರು ಜನ ಯುವಕರು ದಾಳಿ ನಡೆಸಿದ್ದಾರೆ. ಹುಡುಗಿಯ ವಿಚಾರದಲ್ಲಿ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು,
ಹತ್ಯೆಗೆ ನಿಖರ ಕಾರಣಕ್ಕಾಗಿ ಪೊಲೀಸ್ ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ ಭೇಟಿ ಪರಿಶೀಲನೆ ನಡೆಸಿದರು.
ಸಂತೆಬೆನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.